ಚಿಕ್ಕಮಗಳೂರು: ಇದೇ ಮೊದಲ ಬಾರಿಗೆ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹುಣ್ಣಿಮೆ ಪೂಜೆ
ಪ್ರತಿ ಹುಣ್ಣುಮೆ ದಿನ ಭಜರಂಗದಳ, VHP ಕಾರ್ಯಕರ್ತರು ದತ್ತ ಪಾದುಕೆಗೆ ಪೂಜೆ ಸಲ್ಲಿಸುತ್ತಿದ್ದರು. ಈಗ ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು ಹುಣ್ಣಿಮೆ ಪೂಜೆ ನೆರವೇರಿಸಲಿದ್ದಾರೆ. ಹುಣ್ಣಿಮೆ ಪೂಜೆಯಂದು ದತ್ತ ಪಾದುಕೆ ದರ್ಶನ, ಪೂಜೆ ಸಲ್ಲಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು, ನ.27: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ (Baba Budangiri) ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು (BJP Workers) ಹುಣ್ಣುಮೆ ಪೂಜೆ ನಡೆಸುತ್ತಿದ್ದಾರೆ. ಹುಣ್ಣಿಮೆ ಪೂಜೆಯಲ್ಲಿ (Hunnime Pooje) ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇನ್ನು ಹುಣ್ಣಿಮೆ ಪೂಜೆಯಂದು ದತ್ತ ಪಾದುಕೆ ದರ್ಶನ, ಪೂಜೆ ಸಲ್ಲಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಪ್ರತಿ ಹುಣ್ಣುಮೆ ದಿನ ಭಜರಂಗದಳ, VHP ಕಾರ್ಯಕರ್ತರು ದತ್ತ ಪಾದುಕೆಗೆ ಪೂಜೆ ಸಲ್ಲಿಸುತ್ತಿದ್ದರು. ಈಗ ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು ಹುಣ್ಣಿಮೆ ಪೂಜೆ ನೆರವೇರಿಸಲಿದ್ದಾರೆ. ಬೈಕ್ ಜಾಥಾದ ಮೂಲಕ ಕಾರ್ಯಕರ್ತರು, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಲಿದ್ದಾರೆ. ಡಿಸೆಂಬರ್ 17 ರಿಂದ ದತ್ತಜಯಂತಿ ಆರಂಭವಾಗಲಿದೆ.
ಸಂಪೂರ್ಣ ಹಿಂದು ಪೀಠಕ್ಕಾಗಿ ಆಗ್ರಹಿಸಿ ದತ್ತಜಯಂತಿ ನಡೆಯುತ್ತೆ. ಹಿಂದೂ ಪೀಠಕ್ಕಾಗಿ ಹೋರಾಟದ ಜೊತೆಗೆ ರಾಜಕೀಯವಾಗಿ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಭಾರಿ ಚರ್ಚೆಯಲ್ಲಿರುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲುವಿಗೆ ದತ್ತಪೀಠ ಹೋರಾಟ ಪ್ರಮುಖ ಕಾರಣವಾಗಿತ್ತು. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವನ್ನು ದಕ್ಷಿಣ ಭಾರತದ ಅಯೋಧ್ಯೆ ಎಂದೇ ಕರೆಯಲಾಗುತ್ತೆ.
ಇದನ್ನೂ ಓದಿ: ಮತ್ತೆ ಮುನ್ನಲೆಗೆ ಬಂದ ದತ್ತಪೀಠ ವಿವಾದ: ಇಸ್ಲಾಂ ಆಚರಣೆಗೆ ಶ್ರೀರಾಮಸೇನೆ ವಿರೋಧ
ದತ್ತಮಾಲಾ ಅಭಿಯಾನ
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವನ್ನು ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಶ್ರೀರಾಮಸೇನೆ ಇತ್ತೀಚೆಗೆ 7 ದಿನಗಳ ದತ್ತಮಾಲಾ ಅಭಿಯಾನವನ್ನು ಆರಂಭಿಸಿತ್ತು. ಈ ಬಾರಿ 20ನೇ ವರ್ಷದ ದತ್ತಮಾಲಾ ಅಭಿಯಾನ ನಡೆದಿದ್ದು ರಾಜ್ಯಾದ್ಯಂತ ಕಾರ್ಯಕರ್ತರು ದತ್ತಮಾಲಾಧಾರಣೆ ಮಾಡಿ ಏಳು ದಿನ ಅಭಿಯಾನ ಕೈಗೊಂಡಿದ್ದರು. ಕೊನೆಗೆ ಇನಾಂ ದತ್ತಾತ್ರೇಯ ಪೀಠದಲ್ಲಿ ನ.5 ರಂದು ದತ್ತಪಾದುಕೆ ದರ್ಶನ ಪಡೆದರು. ನ.2 ರಂದು ದತ್ತ ದೀಪೋತ್ಸವ, ನ. 4 ರಂದು ಪಡಿ ಸಂಗ್ರಹ ಕಾರ್ಯ ನಡೆಯಿತು. ನವೆಂಬರ್ 5 ರಂದು ಶೋಭಾಯಾತ್ರೆ ನಡೆದ ಬಳಿಕವೇ ಇದೇ ಸ್ಥಳದಲ್ಲಿ ಧರ್ಮಸಭೆ ನಡೆಸಿ ದತ್ತಪೀಠಕ್ಕೆ ತೆರಳಿ, ದತ್ತ ಪಾದುಕೆಗಳ ದರ್ಶನ ಪಡೆದ ನಂತರ, ಹೋಮ-ಹವನ ಹಾಗೂ ಪ್ರಸಾದ ವಿನಿಯೋಗ ನಡೆದಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ