ಚಿಕ್ಕಮಗಳೂರಿನಲ್ಲಿ ಮನೆ ಮೇಲೆ ಕಲ್ಲುತೂರಾಟ ಕೇಸ್​: 9 ಅಪ್ರಾಪ್ತರನ್ನು ವಶಕ್ಕೆ ಪಡೆದ ಪೊಲೀಸರು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 15, 2025 | 8:11 PM

ಚಿಕ್ಕಮಗಳೂರಿನಲ್ಲಿ ಮನೆ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಅವರನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ರಾಮನಹಳ್ಳಿ ಬಳಿ ನಡೆದಿದ್ದು, ಪರಸ್ಪರ ಕಲ್ಲು ತೂರಿಕೊಂಡಾಗ ಒಂದು ಕಲ್ಲು ಉಮೇಶ್ ಎಂಬುವವರ ಮನೆಗೆ ತಗುಲಿದೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರಿನಲ್ಲಿ ಮನೆ ಮೇಲೆ ಕಲ್ಲುತೂರಾಟ ಕೇಸ್​: 9 ಅಪ್ರಾಪ್ತರನ್ನು ವಶಕ್ಕೆ ಪಡೆದ ಪೊಲೀಸರು
ಚಿಕ್ಕಮಗಳೂರಿನಲ್ಲಿ ಮನೆ ಮೇಲೆ ಕಲ್ಲುತೂರಾಟ ಕೇಸ್​: 9 ಅಪ್ರಾಪ್ತರನ್ನು ವಶಕ್ಕೆ ಪಡೆದ ಪೊಲೀಸರು
Follow us on

ಚಿಕ್ಕಮಗಳೂರು, ಫೆಬ್ರವರಿ 15: ಕೋಮು ಸೂಕ್ಷ್ಮ ಕಾಫಿನಾಡು ಚಿಕ್ಕಮಗಳೂರಿನ ಪ್ರತಿಷ್ಠಿತ ಬಡಾವಣೆಯ ಮನೆಯ ಮೇಲೆ ಕಲ್ಲುತೂರಾಟ (stone pelting) ನಡೆದಿದೆ. ರಾತ್ರೋರಾತ್ರಿ ಯುವಕರ ಗುಂಪು ಮನೆ ಮೇಲೆ ಕಲ್ಲುತೂರಿ ಎಸ್ಕೇಪ್ ಆಗಿದ್ದು. ಅನ್ಯಕೋಮಿನ ಯುವಕರ ಕೃತ್ಯ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಪೊಲೀಸರು ಅನ್ಯಕೋಮಿನ 9 ಅಪ್ರಾಪ್ತ ಬಾಲಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ.

ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ಕಾಫಿನಾಡು ಚಿಕ್ಕಮಗಳೂರು ನಗರದ ಪ್ರತಿಷ್ಠಿತ ವಿಜಯಪುರ ಬಡಾವಣೆಯ ಉಮೇಶ್ ಎಂಬುವವರ ಮನೆಯ ಮೇಲೆ ಯುವಕರ ಗುಂಪು ಶುಕ್ರವಾರ ರಾತ್ರಿ ಕಿಟಕಿಗೆ ಕಲ್ಲು‌‌ ಎಸೆದಿದ್ದು‌ ಆತಂಕಕ್ಕೆ ಕಾರಣವಾಗಿತ್ತು. ಶುಕ್ರವಾರ ರಾತ್ರಿ 11.50 ರ ಸುಮಾರಿಗೆ 9 ಜನರ ಯುವಕರ ಗುಂಪು ವಿಜಯಪುರ ಬಡಾವಣೆಯ ಎಲೆಕ್ಟ್ರಿಕ್ ಕೆಲಸ ಮಾಡುವ ಉಮೇಶ್ ಮನೆಯ ಮೇಲೆ ಕಲ್ಲು ಎಸೆದು ಎಸ್ಕೇಪ್ ಆಗಿದ್ದರು. ಇದು ಅನ್ಯಕೋಮಿನ ಯುವಕರ ಕೃತ್ಯ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಚಿಕ್ಕಮಗಳೂರು: ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಆರೋಪ, ಎಸ್​ಪಿ ಹೇಳಿದ್ದೇನು?

ಉಮೇಶ್ ಮನೆಯ ಮೇಲೆ ಬಿದ್ದ ಒಂದು ಕಲ್ಲು ಮನೆಯ ಮುಂಭಾಗದ ಕಿಟಕಿಯ ಗ್ಲಾಸ್ ಅನ್ನ ಪುಡಿ ಪುಡಿ ಮಾಡಲಾಗಿತ್ತು. ಉಮೇಶ್ ನೀಡಿದ ಹೇಳಿಕೆ ಆಧಾರದ ಮೇಲೆ ಬಸವನಹಳ್ಳಿ ಪೊಲೀಸರು BNS ಕಾಯ್ದೆ 182(2), 189(4), 324(4), 190 ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಕಲ್ಲು ಎಸೆತದ ಅಸಲಿ ಸ್ಟೋರಿ ಹೊರ ಬಂದಿದೆ.

ಅನ್ಯಕೋಮಿನ ಯುವಕರಿಂದ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆ ಎಚ್ಚೆತ್ತ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾಗಳ ಆಧಾರದ ಮೇಲೆ ತನಿಖೆ ನಡೆಸಿ ಅಪ್ರಾಪ್ತ ವಯಸ್ಕ ಅನ್ಯಕೋಮಿನ ಬಾಲಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಉಪ್ಪಳ್ಳಿ , ಬದ್ರಿಯಾ ಸರ್ಕಲ್ ನಿವಾಸಿಗಳದ 6 ಬಾಲಕರು ಕಬರಸ್ಥಾನನಲ್ಲಿ ನಡೆಯುವ ಪೂಜೆಯಲ್ಲಿ ಭಾಗಿಯಾಗಿ ವಿಜಯಪುರ ಮಾರ್ಗವಾಗಿ ಮನೆಗಳಿಗೆ ವಾಪಸ್ ತೆರಳುವಾಗ, ಪರಸ್ಪರ ಬಾಲಕರು ಕಲ್ಲು ಎಸೆದಿದ್ದರು. ಈ ವೇಳೆ ಒಂದು ಕಲ್ಲು ಉಮೇಶ್ ಅವರ ಮನೆಯ ಮೇಲೆ ಬಿದ್ದಿದ್ದು‌ ಆತಂಕಗೊಂಡ ಬಾಲಕರು ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಉದಯಗಿರಿ ಗಲಭೆ: ಪೊಲೀಸರ ಸಾಹಸಮಯ ಕಾರ್ಯದ ವಿಡಿಯೋ ವೈರಲ್

ಸಿಸಿ ಕ್ಯಾಮರಾ ಆಧಾರದ ಮೇಲೆ 6 ಬಾಲಕರನ್ನ ವಿಚಾರಣೆ ನಡೆಸಿದಾಗ ಮನೆಗೆ ಕಲ್ಲು ಹೊಡೆಯಬೇಕು ಎಂಬ ಉದ್ದೇಶದಿಂದ ಕಲ್ಲು ಎಸೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸ್ ವಶದಲ್ಲಿರುವ ಬಾಲಕರು 4, 7, 10ನೇ ತರಗತಿ ವಿದ್ಯಾರ್ಥಿಗಳು ಎನ್ನಲಾಗಿದೆ. ಒಟ್ನಲ್ಲಿ ಕೋಮು ಸೂಕ್ಷ್ಮ ಕಾಫಿನಾಡಿನಲ್ಲಿ ಎದ್ದಿದ್ದ ಕಲ್ಲು ಎಸೆತದ ಕಿಚ್ಚು, ಪೊಲೀಸರ ತನಿಖೆಯಿಂದ ಹೊರ ಬಂದ ಅಸಲಿ ಸ್ಟೋರಿಯಿಂದ ತಣ್ಣಗಾಗಿದೆ.

ಎಸ್ಪಿ ವಿಕ್ರಮ್ ಆಮ್ಟೆ ಹೇಳಿದ್ದಿಷ್ಟು

ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ ಟಿವಿ9ಗೆ ಹೇಳಿಕೆ ನೀಡಿದ್ದು, ಪ್ರಕರಣ ಸಂಬಂಧ 3 ಪೊಲೀಸ್ ತಂಡಗಳನ್ನ ರಚನೆ ಮಾಡಲಾಗಿತ್ತು. ಅಪ್ರಾಪ್ತ 9 ಬಾಲಕರನ್ನ ವಶಕ್ಕೆ ಪಡೆಯಲಾಗಿದೆ. ಒಂದು ಬೈಕ್ ಸೀಜ್ ಮಾಡಲಾಗಿದೆ. ಸಿಸಿ ಕ್ಯಾಮರಾ ಆಧಾರದ ಮೇಲೆ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಅಪ್ರಾಪ್ತ ಬಾಲಕರು ಹೇಳಿಕೆ ನೀಡಿದ್ದಾರೆ. ಇದರಲ್ಲಿ ಯಾವುದೇ ಕೋಮು ದ್ವೇಷದ ಕೃತ್ಯವಿಲ್ಲ. ಬಾಲಕರು ಪರಸ್ಪರ ಕಲ್ಲು ಎಸೆದಾಡಿಕೊಂಡಿದ್ದಾರೆ. ಈ ವೇಳೆ ಒಂದು ಕಲ್ಲು ಮನೆಗೆ ಬಿದ್ದಿದೆ. ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಯಾರು ಕೂಡ ಕೋಮು ಪ್ರಚೋದನೆ ಮಾಡಬಾರದು. ಪ್ರಚೋದನೆ ಮಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.