
ಚಿಕ್ಕಮಗಳೂರು, ಜೂನ್ 24: ವಿದ್ಯಾರ್ಥಿಗಳು (Students) ಶಿಸ್ತಿನಿಂದ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಬರಲಿ ಮತ್ತು ಅವರಲ್ಲಿ ಏಕತೆ ಮನೋಭಾವ ಮೂಡಲಿ ಎಂದು ಸರ್ಕಾರಿ ಮತ್ತು ಖಾಸಗಿ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ (Uniform) ಕಡ್ಡಾಯ ಮಾಡಲಾಗಿದೆ. ಇದೀಗ, ಶಾಲೆಗಳು ಆರಂಭವಾಗಿದ್ದು, ಸಮವಸ್ತ್ರ ಧರಿಸಿಕೊಂಡು ನಲಿಯುತ್ತ ವಿದ್ಯಾರ್ಥಿಗಳು ಶಾಲೆಗೆ ಹೋಗಲಿ ಎಂಬುವುದು ಎಲ್ಲರ ಆಶಯವಾಗಿರುತ್ತದೆ. ಆದರೆ, ಸಮವಸ್ತ್ರ ಧರಿಸುವ ವಿಚಾರಕ್ಕೆನೇ ಚಿಕ್ಕಮಗಳೂರಿನ (Chikkamagaluru) ಓರ್ವ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಾತ್ರ ದುರ್ದೈವದ ಸಂಗತಿ.
ಸಮವಸ್ತ್ರ ಧರಿಸದೇ ಶಾಲೆಗೆ ಹೋದರೆ ಶಿಕ್ಷಕರು ಬೈಯುತ್ತಾರೆ ಎಂದು ಬಾಲಕಿ ಆತ್ಮಹತ್ಯೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. ಲಿಂಗದಹಳ್ಳಿ ಗ್ರಾಮದ 13 ವರ್ಷದ ನಿವೇದಿತಾ ಮೃತ ದುರ್ದೈವಿ.
ಇದನ್ನೂ ಓದಿ: ರಜೆ ಮಜಾ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದ: ಸಿಕ್ಕ ಸಿಕ್ಕ ಲಿಂಕ್ ಕ್ಲಿಕ್ ಮಾಡುವರು ಈ ಸುದ್ದಿ ಓದಲೇಬೇಕು
ಶಿಕ್ಷಕರು ವಿದ್ಯಾರ್ಥಿನಿಗೆ ಶಾಲಾ ಸಮವಸ್ತ್ರ ವಿತರಿಸಿದ್ದರು. ಸೋಮವಾರದಿಂದ ಸಮವಸ್ತ್ರ ಧರಿಸಿಕೊಂಡು ಬರುವಂತೆ ಹೇಳಿದ್ದರು. ಸಮವಸ್ತ್ರ ಹೊಲಿಯಲು ಪೋಷಕರು ಟೈಲರ್ಗೆ ನೀಡಿದ್ದರು. ಆದರೆ, ಟೈಲರ್ ಇನ್ನೂ ಸಮವಸ್ತ್ರ ಹೊಲಿದಿರಲಿಲ್ಲ. ಸಮವಸ್ತ್ರ ಧರಿಸದಿದೆ ಶಾಲೆಗೆ ಹೋದರೆ ಶಿಕ್ಷಕರು ಹೋಡೆಯುತ್ತಾರೆಂದು ಬಾಲಕಿ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿ: ಆಟವಾಡುವಾಗ ಮೂರ್ಛೆ ಬಂದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. 15 ವರ್ಷದ ಬಾಲಕಿ ರೇಣುಕಾ ಶಾಲೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಕುಸಿದು ಬಿದಿದ್ದಾಳೆ. ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿನಿ ರೇಣುಕಾ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ರೇಣುಕಾ ಶವವನ್ನು ಅಥಣಿ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ತರಲಾಗಿದೆ. ರೇಣುಕಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲು ಬರಲ್ಲ. ಆಟವಾಡುವಾಗ ರೇಣುಕಾಗೆ ಮೂರ್ಛೆ ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಡಿಎಚ್ಒ ಈಶ್ವರ್ ಗಡಾದ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Tue, 24 June 25