ಬಾಬಾಬುಡನ್​ಗಿರಿ ದತ್ತಪೀಠ ಮತ್ತೊಂದು ವಿವಾದ: ಹಿಂದೂ ಸಂಘಟನೆಗಳು ಆಕ್ರೋಶ

ಚಿಕ್ಕಮಗಳೂರಿನ ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶಾಖಾದ್ರಿ ಕುಟುಂಬದ ಗೋರಿಗಳ ಪೂಜೆಗೆ ಅವಕಾಶ ಕೋರಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಪ್ರಯತ್ನ ಎಂದು ಆರೋಪಿಸಿವೆ.

ಬಾಬಾಬುಡನ್​ಗಿರಿ ದತ್ತಪೀಠ ಮತ್ತೊಂದು ವಿವಾದ: ಹಿಂದೂ ಸಂಘಟನೆಗಳು ಆಕ್ರೋಶ
ಬಾಬಾಬುಡನ್​ಗಿರಿ ದತ್ತಪೀಠ ಮತ್ತೊಂದು ವಿವಾದ: ಹಿಂದೂ ಸಂಘಟನೆಗಳು ಆಕ್ರೋಶ
Updated By: ಗಂಗಾಧರ​ ಬ. ಸಾಬೋಜಿ

Updated on: Feb 14, 2025 | 4:09 PM

ಚಿಕ್ಕಮಗಳೂರು, ಫೆಬ್ರವರಿ 14: ಅದು ಮೂರು ದಶಕದ ವಿವಾದಿತ ಕೇಂದ್ರ, ದಕ್ಷಿಣ ಅಯೋಧ್ಯೆ ಎಂದೇ ಖ್ಯಾತಿ ಪಡೆದಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ (Bababudangiri Inam Datta Peetha) ಸ್ವಾಮಿ ದರ್ಗಾದಲ್ಲಿ ದಿನಕ್ಕೊಂದು ವಿವಾದ ಮುನ್ನೆಲೆಗೆ ಬರುತ್ತಿದೆ. ಒಂದು ಕಡೆ ಶಾಖಾದ್ರಿ ಕುಟುಂಬ ಗೋರಿಗಳ ಪೂಜೆಗೆ ಅವಕಾಶ ಕೇಳಿದರೆ, ಮತ್ತೊಂದು ಕಡೆ ಇದಕ್ಕೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆ ಮೂಲಕ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದಿನಕ್ಕೊಂದು ವಿವಾದ ಸೃಷ್ಟಿಯಾಗುತ್ತಿದೆ. ದಿನಕ್ಕೊಂದು ಬೇಡಿಕೆ ಮುಂದಿಟ್ಟು ಆಚರಣೆಗೆ ಅವಕಾಶ ಕೇಳುತ್ತಿರುವ ಶಾಖಾದ್ರಿ ಕುಟುಂಬದ ನಡೆ ವಿರುದ್ಧ ,ಹಿಂದೂ ಸಂಘಟನೆಗಳು ಅಸಮಾಧಾನ ಹೊರಹಾಕಿದೆ. ಸುಪ್ರೀಂ ಕೋರ್ಟ್ ಹೊಸ ಆಚರಣೆಗೆ ಅವಕಾಶ ನೀಡದಂತೆ ಆದೇಶ ನೀಡಿದ್ರು. ಶಾಖಾದ್ರಿ ಕುಟುಂಬ ಮಾತ್ರ ನಾಳೆ(ನವೆಂಬರ್ 14)ರಂದು ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ನಿಷೇಧ ಪ್ರದೇಶದ ಆವರಣದಲ್ಲಿರುವ ನೂರಾರು ಗೋರಿಗಳು ನಮ್ಮ ಪೂರ್ವಜರದ್ದು ಪೂಜೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿದರೆ, ನಮ್ಮ ಪೂರ್ವಜರ ಗೋರಿಗಳಿಗೆ ಪೂಜೆ ಮಾಡಲು ನಮಗೆ ಹಕ್ಕಿಲ್ವಾ ಎಂದು ಶಾಖಾದ್ರಿ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಅಜ್ಮತ್ ಪಾಷಾ ವಾದ ಮಾಡಿದ್ದಾರೆ.

ಇದನ್ನೂ ಓದಿ: 25ನೇ ವರ್ಷದ ದತ್ತಜಯಂತಿ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ‌ಹೈಅಲರ್ಟ್

ಶಾಖಾದ್ರಿ ಕುಟುಂಬ ನಾಗಮೋಹನ್ ದಾಸ್ ವರದಿ ಜಾರಿಗೆ ಪಟ್ಟು ಹಿಡಿದಿದೆ. ಹಿಂದೂ ಸಂಘಟನೆಗಳ ದತ್ತ ಪೀಠ ಸಂಪೂರ್ಣ ಹಿಂದೂ ಪೀಠದ ಹೇಳಿಕೆ ಹೋರಾಟದ ವಿಚಾರವಾಗಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಬರಲು ಅವಕಾಶವಿದೆ. ಇದು ಸೌಹಾರ್ದ ಕೇಂದ್ರವಾಗಬೇಕು ಎಂದು ವಾದವನ್ನ ಸರ್ಕಾರದ ಮುಂದಿಟ್ಟಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಅರಣ್ಯ ವಲಯದ ಹೋಂಸ್ಟೇ, ರೆಸಾರ್ಟ್​​ಗಳಿಗೆ ಅರಣ್ಯ ಇಲಾಖೆ ನೋಟಿಸ್

ಮತ್ತೊಂದು ಕಡೆ ಶ್ರೀ ರಾಮ ಸೇನೆ ಕೋರ್ಟ್ ಸೂಚನೆಯಂತೆ ಶಾಖಾದ್ರಿ ಕುಟುಂಬದ ಯಾವ ಆಚರಣೆಗೆ ಅವಕಾಶವನ್ನ ಜಿಲ್ಲಾಡಳಿತ ನೀಡಬಾರದು. ನೀಡಿದರೆ ನಮಗೂ ದತ್ತಾಪೀಠದ ಗುಹೆ ಒಳಗೆ ದತ್ತ ಪಾದುಕೆ ಪೂಜೆ ಮಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದೆ. ದಿನಕ್ಕೊಂದು ಹೊಸ ಆಚರಣೆಯ ಹೆಸರಿನಲ್ಲಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ವಿವಾದ ಸೃಷ್ಟಿಯಾಗುತ್ತಿದ್ದು, ವಿವಾದ ಭುಗಿಲೇಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.