ಮತ್ತೊಂದು ಕುಣಿಕೆ ಸಿದ್ದಗೊಳಿಸಿದ ಸಿದ್ದರಾಮಯ್ಯ ಸರ್ಕಾರ: ಗೋರಿ ಅಗೆದವರ ವಿರುದ್ಧದ ಕೇಸ್ ರೀಓಪನ್​ ಆಯ್ತು

ಚಿಕ್ಕಮಗಳೂರು ತಾಲೂಕು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ 2017ರಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. ‌ಒಟ್ಟು 14 ಜನರ ಮೇಲೆ ಈ ಪ್ರಕರಣ ದಾಖಲಾಗಿದ್ದು, ಆಪಾದಿತರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಮತ್ತೊಂದು ಕುಣಿಕೆ ಸಿದ್ದಗೊಳಿಸಿದ ಸಿದ್ದರಾಮಯ್ಯ ಸರ್ಕಾರ: ಗೋರಿ ಅಗೆದವರ ವಿರುದ್ಧದ ಕೇಸ್ ರೀಓಪನ್​ ಆಯ್ತು
ಗೋರಿ ಅಗೆದವರ ವಿರುದ್ಧದ ಕೇಸ್ ರೀಓಪನ್​ ಆಯ್ತು
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on:Jan 04, 2024 | 3:47 PM

ಚಿಕ್ಕಮಗಳೂರು, ಜನವರಿ 04: ಸಮಾಧಿ ಸೇರಿದ್ದ ಹಳೆಯ ಕೇಸುಗಳು ಮತ್ತೆ ಸದ್ದು (skeletons out of the cupboard) ಮಾಡತೊಡಗಿವೆ. ಸಿದ್ದರಾಮಯ್ಯ (Siddaramaiah) ನೇತೃತ್ವದ ಹಾಲಿ ಕಾಂಗ್ರೆಸ್ ಸರ್ಕಾರ ಹಳೆಯ ಕೇಸ್​ಗಳ ರೀಓಪನ್ ಮಾಡಿಸುವ ಕೈಂಕರ್ಯವನ್ನು ಮುಂದುವರಿಸಿದೆ. 2017ರಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಗಿರಿಧಾಮದಲ್ಲಿರುವ ದತ್ತ ಪೀಠದಲ್ಲಿದ್ದ ಗೋರಿಯನ್ನು (Baba Budangiri dargah) ಧ್ವಂಸಗೊಳಿಸಿದ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ.

ಇದರೊಂದಿಗೆ 7 ವರ್ಷದ ಬಳಿಕ ಅಂದಿನ ದತ್ತಪೀಠ ಹೋರಾಟಗಾರರ ಮೇಲಿದ್ದ ಹಳೇ ಕೇಸ್ ಅನ್ನು ರಾಜ್ಯ ಸರ್ಕಾರ ರೀ ಓಪನ್ ಮಾಡಿಸಿದಂತಾಗಿದೆ. ಗಮನಾರ್ಹವೆಂದರೆ ಬಿಜೆಪಿ ( BJP) ಸರ್ಕಾರದ ಅವಧಿಯಲ್ಲಿ ಈ ಕೇಸ್​​ ಕ್ಲೋಸ್ ಆಗಿತ್ತು. 2017ರ ಡಿಸೆಂಬರ್​ 3ರಂದು ದತ್ತಜಯಂತಿ ದಿನ ದರ್ಗಾದ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ್ದ ಆರೋಪವಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 143,447,427, 298,504,506,114,353, ಕೇಸ್ ದಾಖಲಾಗಿತ್ತು.

Also Read: ದತ್ತಪೀಠ ವಿವಾದ – ವ್ಯವಸ್ಥಾಪನ ಸಮಿತಿ ವಜಾ ಮನವಿ ಬೆನ್ನಲ್ಲೇ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಪಟ್ಟು

ಭಜರಂಗದಳದ ಒಟ್ಟು 14 ಕಾರ್ಯಕರ್ತರ ಮೇಲೆ ಈ ಪ್ರಕರಣ ದಾಖಲಾಗಿದ್ದು, ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್, ರಾಮು ಅವರು ಆರೋಪಿಗಳಾಗಿದ್ದಾರೆ. ಆಪಾದಿತರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 2017ರಲ್ಲಿ ಚಿಕ್ಕಮಗಳೂರು ತಾಲೂಕು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. ‌

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.)

Published On - 3:10 pm, Thu, 4 January 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ