ಸರ್ಕಾರ SDPI, PFI ಕೇಸ್ಗೂ ಮರು ಜೀವ ನೀಡುತ್ತಾ? ದತ್ತಪೀಠ ಹೋರಾಟ ಪ್ರಕರಣದ ಆರೋಪಿ ಪ್ರಶ್ನೆ
ಏಳು ವರ್ಷದ ಹಿಂದಿನ ದತ್ತಪೀಠ ಹೋರಾಟ ಪ್ರಕರಣವನ್ನು ಮರು ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ವಂದತಿಗೆ ಸಂಬಂಧಿಸಿದಂತೆ ಕೇಸ್ನ ಪ್ರಮುಖ ಆರೋಪಿ ತುಡುಕೂರು ಮಂಜು ಮಾತನಾಡಿ, ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರಕರಣಕ್ಕೆ ಮರುಜೀವ ನೀಡಿದೆ. ಹಿಂದೂ ಕಾರ್ಯಕರ್ತರ ಟಾರ್ಗೆಟ್ ಮಾಡಿ ಈ ರೀತಿ ಮಾಡುತ್ತಿದೆ ಎಂದರು.
ಚಿಕ್ಕಮಗಳೂರು, ಜನವರಿ 05: ಏಳು ವರ್ಷದ ಹಿಂದಿನ ದತ್ತಪೀಠ (Dattapeeta) ಹೋರಾಟ ಪ್ರಕರಣವನ್ನು ಮರು ತನಿಖೆ ನಡೆಸಲು ರಾಜ್ಯ ಸರ್ಕಾರ (Karnataka Government) ಮುಂದಾಗಿದೆ ಎಂಬ ವಂದತಿಗೆ ಸಂಬಂಧಿಸಿದಂತೆ ಕೇಸ್ನ ಪ್ರಮುಖ ಆರೋಪಿ ತುಡುಕೂರು ಮಂಜು ಮಾತನಾಡಿ, ಪಿ.ಎಫ್.ಐ (PFI), ಎಸ್.ಡಿ.ಪಿ.ಐ (SDPI) ಮೇಲೂ ಸಾವಿರಾರು ಕೇಸ್ಗಳಿವೆ. ಎಷ್ಟೋ ಪ್ರಕರಣಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಸರ್ಕಾರ ಅವುಗಳಿಗೂ ಮರುಜೀವ ನೀಡುವ ಕೆಲಸ ಮಾಡುತ್ತಾ? ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಟಿವಿ9 ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವು ವಿಚಾರಣೆಗೆಂದು ಎರಡು ಬಾರಿ ಮಾತ್ರ ನ್ಯಾಯಾಲಯಕ್ಕೆ ಹೋಗಿದ್ದೇವೆ. ಇದು ಬಿಟ್ಟರೇ ಮತ್ತೆ ನ್ಯಾಯಾಲಯಕ್ಕೆ ಹೋಗಿಲ್ಲ. ಜಾಮೀನು ಪಡೆದಿದ್ದೇವೆ. 2021ರಲ್ಲಿ ಸರ್ಕಾರ ಪ್ರಕರಣ ವಾಪಸ್ ಪಡೆದಿಕೊಂಡಿತ್ತು ಎಂದು ಭಾವಿಸಿದ್ವಿ. ಆದರೆ, ರಾಜ್ಯ ಸರ್ಕಾರ ಈಗ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ ಎಂದರು.
ಇದನ್ನೂ ಓದಿ: ಬಾಬಾಬುಡನ್ಗಿರಿಯಲ್ಲಿ ಗೋರಿ ಧ್ವಂಸ ಕೇಸ್ ರೀ ಓಪನ್: ಇದು ಅಪ್ಪಟ ಸುಳ್ಳು: ಸಿಎಂ ಸಿದ್ದರಾಮಯ್ಯ
ಪೊಲೀಸರು ಏಳು ವರ್ಷ ಏಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಏಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸರ್ಕಾರ ಹಳೇ ಎಲ್ಲಾ ಪ್ರಕರಣಗಳಿಗೂ ಮರುಜೀವ ನೀಡುತ್ತಾ ? ಎಲ್ಲಾ ರೀತಿಯ ಪ್ರಕರಣಗಳಿಗೂ ಮರುಜೀವ ನೀಡಿತ್ತಾ? ನಾವು ಹೋರಾಟ ಮಾಡುತ್ತೇವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರೆ ಮಾಡಿ ಮಾತನಾಡಿದರು. ನಾವು ನಿಮ್ಮ ಜೊತೆ ಇದ್ದೇವೆ ಹೆದರಬೇಡಿ ಎಂದಿದ್ದಾರೆ ಎಂದು ತಿಳಿಸಿದರು.
ನಾನು ಇದೇ ಪ್ರಕರಣದಲ್ಲಿ ಜೈಲಿಗೂ ಹೋಗಿದ್ವಿ. ನಾವು ಜನವರಿ 8 ರಂದು ನ್ಯಾಯಾಲಯಕ್ಕೆ ಹಾಜರಾಗುತ್ತೇವೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರ ಪ್ರಕರಣಕ್ಕೆ ಮರುಜೀವ ನೀಡಿದೆ. ಹಿಂದೂ ಕಾರ್ಯಕರ್ತರ ಟಾರ್ಗೆಟ್ ಮಾಡಿ ಈ ರೀತಿ ಮಾಡುತ್ತಿದೆ. ದಕ್ಷಿಣ ಭಾರತದ ಅಯೋಧ್ಯೆ ಎಂದು ದತ್ತಪೀಠವನ್ನು ಕರೆಯುತ್ತಾರೆ. ರಾಮ ಮಂದಿರ ಉದ್ಘಾಟನೆ ಮುಸಲ್ಮಾನರಿಗೆ ಬಹಳಷ್ಟು ನೋವಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರಕ್ಕೆ ಸಹಿಸಲು ಆಗುತ್ತಿಲ್ಲ. ಮುಸಲ್ಮಾನರಿಗೆ ಆಗಿರುವ ನೋವಿಗೆ, ಈ ರೀತಿ ಪ್ರಕರಣಗಳಿಗೆ ಮರು ಜೀವ ಕೊಟ್ಟು ಮುಲಾಮು ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ