AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದತ್ತಪೀಠ ವಿವಾದ: ವ್ಯವಸ್ಥಾಪನ ಸಮಿತಿ ವಜಾ ಮನವಿ ಬೆನ್ನಲ್ಲೇ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಪಟ್ಟು

ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಪೀಠ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ವ್ಯವಸ್ಥಾಪನ ಸಮಿತಿಯನ್ನ ರದ್ದುಗೊಳಿಸಿ ಎಂದು ಆಗ್ರಹಿಸಿ ಸೈಯದ್​ ಬುಡೇನ್ ಶಾ ಖಾದ್ರಿ ಟ್ರಸ್ಟ್ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮನವಿ ಮಾಡಿತ್ತು. ಇದಾದ ಬೆನ್ನಲ್ಲೇ ಈಗ ಅರ್ಚಕರ ನೇಮಕ, ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದು ಮಾಡದಂತೆ ಆಗ್ರಹಿಸಿ ಡಿಸಿ ಮೀನಾ ನಾಗರಾಜ್​ಗೆ ಶ್ರೀರಾಮಸೇನೆ ಮನವಿ ಮಾಡಿದೆ. ಇನ್ನು ಗೋರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ದತ್ತಮಾಲಾ ಅಭಿಯಾನಕ್ಕೆ ನಿರ್ಧಾರ ಮಾಡಿದೆ.

ದತ್ತಪೀಠ ವಿವಾದ: ವ್ಯವಸ್ಥಾಪನ ಸಮಿತಿ ವಜಾ ಮನವಿ ಬೆನ್ನಲ್ಲೇ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಪಟ್ಟು
ದತ್ತಪೀಠ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Aug 22, 2023 | 2:50 PM

Share

ಚಿಕ್ಕಮಗಳೂರು, ಆ.22: ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಪೀಠ ವಿವಾದ(Datta Peeta Controversy) ಮತ್ತೆ ಮುನ್ನಲೆಗೆ ಬಂದಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಚಿಕ್ಕಮಗಳೂರು ತಾಲೂಕಿನ I.D ಪೀಠ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ದತ್ತ ಪೀಠದ ವಿವಾದಕ್ಕೆ ತೆರೆ ಎಳೆದು ವ್ಯವಸ್ಥಾಪನ ಸಮಿತಿ ನೇಮಿಸಿ ಹಿಂದೂ ಅರ್ಚಕರ ಪೂಜೆಯಲ್ಲಿ ದತ್ತ ಜಯಂತಿ ನಡೆದಿತ್ತು. ಇನ್ನೇನೂ ಈ ವರ್ಷ ದತ್ತ ಜಯಂತಿಗೆ ಎರಡು ತಿಂಗಳು ಬಾಕಿ ಇರುವಾಗ್ಲೇ ಮತ್ತೇ ವಿವಾದ ಮುನ್ನಲೆಗೆ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದ ವ್ಯವಸ್ಥಾಪನ ಸಮಿತಿಯನ್ನ ರದ್ದು ಪಡಿಸಿ ಎಂದು ಡಿಸಿ ಮೂಲಕ ಸಿಎಂ ಹಾಗೂ ಮುಜರಾಯಿ ಸಚಿವರಿಗೆ ಸೈಯದ್​ ಬುಡೇನ್ ಶಾ ಖಾದ್ರಿ ಟ್ರಸ್ಟ್ ಮನವಿ ಮಾಡಿದ್ದು ಇದೇ ಬೆನ್ನಲ್ಲೇ ಈಗ ವಿವಾದಿತ ಸ್ಥಳದಲ್ಲಿರುವ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ(Sriram Sena) ಪಟ್ಟು ಹಿಡಿದಿದೆ.

ವ್ಯವಸ್ಥಾಪನ ಸಮಿತಿಯನ್ನ ರದ್ದುಗೊಳಿಸಿ ಎಂದು ಆಗ್ರಹಿಸಿ ಸೈಯದ್​ ಬುಡೇನ್ ಶಾ ಖಾದ್ರಿ ಟ್ರಸ್ಟ್ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮನವಿ ಮಾಡಿತ್ತು. ಇದಾದ ಬೆನ್ನಲ್ಲೇ ಈಗ ಅರ್ಚಕರ ನೇಮಕ, ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದು ಮಾಡದಂತೆ ಆಗ್ರಹಿಸಿ ಡಿಸಿ ಮೀನಾ ನಾಗರಾಜ್​ಗೆ ಶ್ರೀರಾಮಸೇನೆ ಮನವಿ ಮಾಡಿದೆ. ಇನ್ನು ಗೋರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ದತ್ತಮಾಲಾ ಅಭಿಯಾನಕ್ಕೆ ನಿರ್ಧಾರ ಮಾಡಿದೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ ನೇತೃತ್ವದಲ್ಲಿ ಅಕ್ಟೋಬರ್​​​ 30ರಿಂದ ನವೆಂಬರ್​​​ 3ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದೆ.

ಇದನ್ನೂ ಓದಿ: ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ: ವ್ಯವಸ್ಥಾಪನ ಸಮಿತಿ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಶಾ ಖಾದ್ರಿ ಟ್ರಸ್ಟ್ ಮನವಿ ಏನು?

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಫಿ ನಾಡು ಚಿಕ್ಕಮಗಳೂರಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾದ ವಿವಾದಕ್ಕೆ ಕೊಂಚ ಮಟ್ಟಕ್ಕೆ ತೆರೆ ಎಳೆಯಲಾಗಿತ್ತು. 8 ಮಂದಿಯ ಸದಸ್ಯರ ವ್ಯವಸ್ಥಾಪನ ಸಮಿತಿ ಮಾಡಲಾಗಿತ್ತು. ಆ ಸಮಿತಿಯ ನೇತೃತ್ವದಲ್ಲಿ ದತ್ತ ಜಯಂತಿಯೂ ನಡೆದಿತ್ತು. ಆದರೆ ಈಗ ಸೈಯದ್​ ಬುಡೇನ್ ಶಾ ಖಾದ್ರಿ ಟ್ರಸ್ಟ್,ವ್ಯವಸ್ಥಾಪನ ಸಮಿತಿಯನ್ನ ರದ್ದುಗೊಳಿಸಿ ಎಂದು ಮನವಿ ಮಾಡಿದೆ. 8 ಮಂದಿ ಸದಸ್ಯರಲ್ಲಿ 7 ಮಂದಿ ಒಂದೇ ಸಮೂದಾಯ ಹಾಗೂ ಒಬ್ಬರು ಮುಸ್ಲಿಂರನ್ನು ನೇಮಿಸಲಾಗಿದೆ. ಇಲ್ಲಿ ನಿಯಮ ಉಲ್ಲಂಘನೆಯಾಗಿರೋದ್ರಿಂದ ಕೂಡಲೇ ರದ್ದುಗೊಳಿಸಿ. ಇದಲ್ಲದೆ ಕೋರ್ಟ್​ ಸೂಚನೆ ನೀಡಿದ್ದು ಕಳೆದ ವರ್ಷ ದತ್ತಜಯಂತಿಯಲ್ಲಿ ಮಾತ್ರ ಹಿಂದೂ ಅರ್ಚಕರಿಗೆ ಅದ್ರೆ ನಿತ್ಯ ಅವ್ರು ಪೂಜೆ ಮಾಡ್ತಿದ್ದಾರೆ. ಹೀಗಾಗಿ ಅರ್ಚಕರ ನೇಮಕ, ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದು ಮಾಡಿ. ಹಾಗೂ ಗೋರಿಗಳ ಮೇಲೆ ಹಸಿರು ಬಟ್ಟೆ ಹೊದಿಸಿ, ಮಸೀದಿ ನಿರ್ಮಾಣಕ್ಕೂ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಶ್ರೀರಾಮಸೇನೆ ಗೋರಿಗಳ ಸ್ಥಳಾಂತರಕ್ಕೆ ಪಟ್ಟು ಹಿಡಿದಿದೆ.

ಟಿವಿ9 ಕನ್ನಡ ಡಿಜಿಟಲ್ ಲೈವ್​ ಅಪ್ಡೇಟ್ಸ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ