ಚಿಕ್ಕಮಗಳೂರು ಪೊಲೀಸರು ಎಡವಟ್ಟು ಮಾಡಿಕೊಂಡಿದ್ದಾರೆ. ಹಲ್ಲೆ ಪ್ರಕರಣದಲ್ಲಿ ಸೆಟಲ್ಮೆಂಟ್ ಮಾಡಿಕೊಳ್ಳುವಂತೆ ಹಲ್ಲೆಗೊಳಾಗದವನ ಕುಟುಂಬದ ಮೇಲೆ ಒತ್ತಡ ತಂದ ಗಂಭೀರ ಆರೋಪ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರಿಗೆ ಎದುರಾಗಿದೆ. ಹಲ್ಲೆಗೊಳಾಗದವನನ್ನ ಆಸ್ಪತ್ರೆಯಿಂದ DYSP ಕಚೇರಿಗೆ ಆಂಬುಲೆನ್ಸ್ ನಲ್ಲಿ ಕರೆತಂದಿದ್ದು, ಕುಟುಂಬಸ್ಥರು ಪೊಲೀಸರಿಗೆ ಇದೀಗ ಕ್ಲಾಸ್ ತೆಗೆದುಕೊಂಡಿದ್ದಾರೆ.
DYSP ಕಚೇರಿಯ ಮುಂದೆ ಬಂದು ನಿಂತ ಆಂಬುಲೆನ್ಸ್. ಅಂಬುಲೆನ್ಸ್ ಒಳಗೆ ಮಚ್ಚಿನೇಟು ತಿಂದು ನರಳುತ್ತಾ ಮಲಗಿರೋ ವ್ಯಕ್ತಿ. ಅದ ಕಂಡು ಕುಟುಂಬಸ್ಥರ ಆಕ್ರೋಶ. ನಾಲ್ಕು ದಿನದ ಹಿಂದೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಮೂರು ಜನರಿದ್ದ ಗುಂಪು ಟೀ ಕುಡಿಯುತ್ತಾ ನಿಂತವನ ಮೇಲೆ ಮಚ್ಚಿನಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿತ್ತು. ಮಚ್ಚಿನೇಟು ತಿಂದ ಟಿಪ್ಪು ನಗರದ ನಿವಾಸಿ ಮುಜೀಬ್ ಎಂಬಾತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮುಜೀಬ್ ಕುಟುಂಬ ಹಲ್ಲೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿತ್ತು. ಹಲ್ಲೆ ಮಾಡಿದ್ದ ಟಿಪ್ಪು ನಗರದ ರಿಯಾನ್, ಫಾಜಿಲ್, ಮುಜುಬ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂವರನ್ನು ಠಾಣೆಗೆ ಕರೆಯಿಸಿ, ಹಲ್ಲೆಗೊಳಾಗದ ಮುಜೀಬ್ ಕುಟುಂಬದೊಂದಿಗೆ ಸೆಟಲ್ಮೆಂಟ್ ಮಾಡಿಸುವುದಾಗಿ ಹೇಳಿ ಕ್ರಮ ಕೈಗೊಳ್ಳದೆ, ಠಾಣೆಯಿಂದ ಕಳಿಸಿದ್ದು ಸ್ಥಳೀಯ ಮುಖಂಡರ ಮೂಲಕ ದೂರನ್ನ ವಾಪಸ್ಸು ಪಡೆದು ಕಾಂಪ್ರಮೈಸ್ ಆಗುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಮುಜೀಬ್ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ DYSPಗೆ ದೂರನ್ನ ನೀಡಿ, ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.
ರಸ್ತೆಯಲ್ಲಿ ತನ್ನ ತಾಯಿಯನ್ನ ನೋಡಿದ ಅಂತ ಟೀ ಕುಡಿಯುತ್ತಿದ್ದ ಮುಜೀನ್ ಮೇಲೆ ಮೂವರು ಮಚ್ಚಿನಿಂದ ಹಲ್ಲೆ ಮಾಡಲಾಗಿತ್ತು. ಹಲ್ಲೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಅದ್ರೆ ಮಚ್ಚಿನೇಟು ತಿಂದ ಮುಜೀಬ್ ಮತ್ತು ಕುಟುಂಬದ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ ಪ್ರಕರಣವನ್ನು ಕಾಂಪ್ರಮೈಸ್ ಮಾಡಲು ಪೊಲೀಸರು ಒತ್ತಡ ತರುತ್ತಿದ್ದಾರೆ ಎಂದು ಮುಜೀಬ್ ಕುಟುಂಬ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ DYSP ಕಚೇರಿಗೆ ಆಸ್ಪತ್ರೆಯಲ್ಲಿದ್ದ ಮುಜೀಬ್ ನ್ನ ಆಂಬುಲೆನ್ಸ್ ಮೂಲಕ ಕರೆತಂದು ಪೊಲೀಸರ ವಿರುದ್ಧ ಡಿವೈಎಸ್ಪಿ ಕಚೇರಿಯ ಎದುರು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಆರೋಪಕ್ಕೆ ಪುಷ್ಟಿ ನೀಡುವಂತೆ ಪ್ರಕರಣ ದಾಖಲಾದ ಮೂವರೂ ಚಿಕ್ಕಮಗಳೂರು ನಗರದಲ್ಲಿದ್ದರೂ ಬಂಧನ ಮಾಡಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ನಲ್ಲಿ ಹಲ್ಲೆ ಪ್ರಕಟದಲ್ಲಿ ಕಾಂಪ್ರಮೈಸ್ ಮಾಡಲು ಒತ್ತಡಕ್ಕೆ ಮುಂದಾಗಿ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಎಡವಟ್ಟು ಮಾಡಿಕೊಂಡ್ರ ಅಂತ ಚಿಕ್ಕಮಗಳೂರು ಪೊಲೀಸ್ ಇಲಾಖೆ ಸಿಬ್ಬಂದಿ ಮಾತಾಡಿಕೊಳ್ಳುತ್ತಿದ್ದು, ಈ ಪ್ರಕರಣ ಯಾವ ಸ್ವರೂಪ ಪಡೆಯುತ್ತೆ ಕಾದುನೋಡಬೇಕಿದೆ.
ವರದಿ: ಅಶ್ವಿತ್, ಟಿವಿ9, ಚಿಕ್ಕಮಗಳೂರು