Coffee Board: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಹೆಜ್ಜೇನು ದಾಳಿಯಿಂದ ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ ನಿಧನ
ಒಮ್ಮೆಲ್ಲೇ ಸಾವಿರಾರು ಹೆಜ್ಜೇನುಗಳು ಬೋಜೇಗೌಡರ ಮೇಲೆ ಹಿಂಡು ಹಿಂಡಾಗಿ ದಾಳಿ ನಡೆಸಿದ್ದವು. ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆಯೇ ಬೋಜೇಗೌಡ ಮೃತಪಟ್ಟಿದ್ದಾರೆ
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ದುರ್ಘಟನೆಯೊಂದು ನಡೆದಿದೆ| ಹೆಜ್ಜೆನು ದಾಳಿಯಿಂದ ಕಾಫಿ ಮಂಡಳಿಯ (Coffee Board of India) ಹಾಲಿ ಅಧ್ಯಕ್ಷ ಎಂ ಎಸ್ ಬೋಜೇಗೌಡ (74) ಅವರು ಅಸುನೀಗಿದ್ದಾರೆ. 2ನೇ ಬಾರಿಗೆ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದ ಎಂ.ಎಸ್. ಭೋಜೇಗೌಡ ಅವರು ಚಿಕ್ಕಮಗಳೂರು ತಾಲೂಕಿನ ಅರಶಿನಗುಪ್ಪೆ ಸಮೀಪವಿರುವ ಕೃಷ್ಣಗಿರಿ ಕಾಫಿ ಎಸ್ಟೇಟ್ ನಲ್ಲಿ ದುರ್ವಿಧಿಗೆ ಬಲಿಯಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕೃಷ್ಣಗಿರಿ ಎಸ್ಟೇಟ್ ನಲ್ಲಿ ಈ ದುರ್ಘಟನೆ ನಡೆದಿದೆ. ಕಾಫಿ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಆಕಸ್ಮಿಕ ನಡೆದಿದೆ. ಒಮ್ಮೆಲ್ಲೇ ಸಾವಿರಾರು ಹೆಜ್ಜೇನುಗಳು (Honey bee attack) ಬೋಜೇಗೌಡರ ಮೇಲೆ ಹಿಂಡು ಹಿಂಡಾಗಿ ದಾಳಿ ನಡೆಸಿದ್ದವು. ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆಯೇ ಬೋಜೇಗೌಡ ಮೃತಪಟ್ಟಿದ್ದಾರೆ (Chikamagalur).
ಕಳೆದ ತಿಂಗಳು ಮಾರ್ಚ್ ನಲ್ಲಿ ಬೋಜೇಗೌಡರ ಕಾಫಿ ಮಂಡಳಿ ಅಧ್ಯಕ್ಷಗಿರಿ ಅವಧಿ ಕೊನೆಗೊಂಡಿತ್ತು. ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಎಸ್. ಭೋಜೇಗೌಡ ಅವರು ಒಂದು ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಒಮ್ಮೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Published On - 3:28 pm, Sat, 23 April 22