ಎಂಇಎಸ್ ಪುಂಡಾಟಿಕೆಯ ಹಿಂದೆ ಕಾಂಗ್ರೆಸ್ ಪಕ್ಷ ಇದೆ, ಡಿಕೆ ಶಿವಕುಮಾರ್ ಈ ಪ್ರಕರಣದ ನಿರ್ಮಾಪಕ, ನಿರ್ದೇಶಕ; ಸಿಟಿ ರವಿ ಹೇಳಿಕೆ

| Updated By: sandhya thejappa

Updated on: Dec 20, 2021 | 2:54 PM

ಎಂಇಎಸ್ ಕಾರ್ಯಕರ್ತರ ಜತೆ ಕಾಂಗ್ರೆಸ್ ಕಾರ್ಯಕರ್ತರಿದ್ದರು. ಶಿವಾಜಿ ಪ್ರತಿಮೆಗೆ ಅಪಮಾನ ಮಾಡುವಾಗಲೂ ಕಾಂಗ್ರೆಸ್ ಇತ್ತು. ಡಿಕೆ ಶಿವಕುಮಾರ್, ಜಮೀರ್ ಕಟ್ಟಾ ಬೆಂಬಲಿಗರಿಂದಲೇ ಕೃತ್ಯ ನಡೆದಿದೆ. ರಾಯಣ್ಣ, ಬಸವೇಶ್ವರರ ಪ್ರತಿಮೆಗೆ ಅಪಮಾನ ಮಾಡಿದ್ದಾರೆ.

ಎಂಇಎಸ್ ಪುಂಡಾಟಿಕೆಯ ಹಿಂದೆ ಕಾಂಗ್ರೆಸ್ ಪಕ್ಷ ಇದೆ, ಡಿಕೆ ಶಿವಕುಮಾರ್ ಈ ಪ್ರಕರಣದ ನಿರ್ಮಾಪಕ, ನಿರ್ದೇಶಕ; ಸಿಟಿ ರವಿ ಹೇಳಿಕೆ
ಸಿ.ಟಿ ರವಿ
Follow us on

ಚಿಕ್ಕಮಗಳೂರು: ಎಂಇಎಸ್ (MES) ಪುಂಡಾಟಿಕೆಯ ಹಿಂದೆ ಕಾಂಗ್ರೆಸ್ ಪಕ್ಷ ಇದೆ ಎಂದು ಆರೋಪಿಸಿದ ಬಿಜೆಪಿ ನಾಯಕ ಸಿಟಿ ರವಿ, ಡಿಕೆ ಶಿವಕುಮಾರ್ ಈ ಪ್ರಕರಣದ ನಿರ್ಮಾಪಕ ಮತ್ತು ನಿರ್ದೇಶಕ ಹೇಳಿಕೆ ನೀಡಿದ್ದಾರೆ. ಸಂಘರ್ಷ ಸೃಷ್ಟಿಸಿ ರಾಜಕೀಯ ದುರ್ಲಾಭ ಪಡೆಯಲು ಷಡ್ಯಂತ್ರ ನಡೆಸಿದ್ದಾರೆ. ಕೊಲ್ಹಾಪುರದಲ್ಲಿ ಕನ್ನಡ ಬಾವುಟ ಸುಡಬೇಕಾದರೆ ಕಾಂಗ್ರೆಸ್ ಇತ್ತು ಅಂತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಇಎಸ್ ಕಾರ್ಯಕರ್ತರ ಜತೆ ಕಾಂಗ್ರೆಸ್ ಕಾರ್ಯಕರ್ತರಿದ್ದರು. ಶಿವಾಜಿ ಪ್ರತಿಮೆಗೆ ಅಪಮಾನ ಮಾಡುವಾಗಲೂ ಕಾಂಗ್ರೆಸ್ ಇತ್ತು. ಡಿಕೆ ಶಿವಕುಮಾರ್, ಜಮೀರ್ ಕಟ್ಟಾ ಬೆಂಬಲಿಗರಿಂದಲೇ ಕೃತ್ಯ ನಡೆದಿದೆ. ರಾಯಣ್ಣ, ಬಸವೇಶ್ವರರ ಪ್ರತಿಮೆಗೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್, ಎಂಇಎಸ್ ಕಾರ್ಯಕರ್ತರು ಅಪಮಾನ ಮಾಡಿದ್ದಾರೆ. ಜಾತಿ, ಭಾಷಾ ಸಂಘರ್ಷ ಹುಟ್ಟು ಹಾಕುವುದೇ ಇವರ ಉದ್ದೇಶ. ಹೀಗಾಗಿ ಎಂಇಎಸ್ ಸಂಘಟನೆಯನ್ನು ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ. ಈ ಷಡ್ಯಂತ್ರ ಬಯಲಿಗೆಳೆಯಬೇಕೆಂದು ಚಿಕ್ಕಮಗಳೂರಿನಲ್ಲಿ ಸಿಎಂ, ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ.

ನಾನು ಯಾವುದೇ ಸಂಘಟನೆ ವಿರುದ್ಧ ದೂಷಿಸಲು ಹೋಗಲ್ಲ; ಡಿಕೆಶಿ
ಇನ್ನು ಎಂಇಎಸ್ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಿಡಿಗೇಡಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಾನು ಯಾವುದೇ ಸಂಘಟನೆ ವಿರುದ್ಧ ದೂಷಿಸಲು ಹೋಗಲ್ಲ. ಎಂಇಎಸ್ ಪುಂಡಾಟಿಕೆ ಮಾಡುತ್ತಿದೆ ಎಂದು ಕೂಡ ಹೇಳಲ್ಲ. ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡಿದ್ದೇ ಇದಕ್ಕೆಲ್ಲಾ ಕಾರಣ. ಇಡೀ ರಾಜ್ಯದಲ್ಲಿಯೇ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸರು ಖಾಕಿಯನ್ನು ಬಿಟ್ಟು ಕಾವಿ ಧರಿಸುತ್ತಿದ್ದಾರೆ. ಪೊಲೀಸರು ರಾಜಕಾರಣಿಗಳ ಮಾತು ಬಿಟ್ಟು, ಕೆಲಸ ಮಾಡಲಿ ಅಂತ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಮಹಿಳೆಯರ ವಿವಾಹ ವಯಸ್ಸು ಹೆಚ್ಚಿಸುವ ಕಾನೂನು, ಪರಿಶೀಲನೆಗೆ ಮುಕ್ತವಾಗಿದೆ ಎಂದ ಕೇಂದ್ರ

ಬಾಲಂಗೋಚಿಗಳಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಕಷ್ಟ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Published On - 2:49 pm, Mon, 20 December 21