ಕಾಫಿನಾಡಿನ ವಸತಿ ಶಾಲಾ ಆವರಣದಲ್ಲಿ ಬೀಡುಬಿಟ್ಟ ಬೀಟಮ್ಮ ಗ್ಯಾಂಗ್; ವಿದ್ಯಾರ್ಥಿಗಳಿಗೆ ಆಚೆ ಬರದಂತೆ ಸೂಚನೆ

ಇಷ್ಟು ದಿನ ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ ಭಾಗದಲ್ಲಿ ಬೀಡುಬಿಟ್ಟಿದ್ದ ಈ ಕಾಡಾನೆಗಳ ಹಿಂಡು ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಹಿಂಡು-ಹಿಂಡಾಗಿ ಬಂದಿವೆ. ಕಾಡಾನೆ ಹಿಂಡು ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ‌ಬಂದಿವೆ. ಹೀಗಾಗಿ ವಸತಿ ಶಾಲೆಯೊಳಗಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಗೆ ವಸತಿ ಶಾಲೆಯಿಂದ ಹೊರ ಬರದಂತೆ ಸೂಚಿಸಲಾಗಿದೆ.

ಕಾಫಿನಾಡಿನ ವಸತಿ ಶಾಲಾ ಆವರಣದಲ್ಲಿ ಬೀಡುಬಿಟ್ಟ ಬೀಟಮ್ಮ ಗ್ಯಾಂಗ್; ವಿದ್ಯಾರ್ಥಿಗಳಿಗೆ ಆಚೆ ಬರದಂತೆ ಸೂಚನೆ
ಬೀಟಮ್ಮ ಗ್ಯಾಂಗ್
Edited By:

Updated on: Jan 29, 2024 | 9:44 AM

ಚಿಕ್ಕಮಗಳೂರು, ಜ.29: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀಟಮ್ಮ ಗ್ಯಾಂಗ್ (Beetamma Gang) ಕಾಡಾನೆಗಳ ದಂಡು ಭಾರಿ ಆತಂಕ ಸೃಷ್ಟಿಸಿದೆ. ಹಾಸನ, ಚಿಕ್ಕಮಗಳೂರು ಜಿಲ್ಲೆಯ ಗಡಿ ಗ್ರಾಮದ ಮೂಲಕ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಮಕ್ಕೆ ಬೀಟಮ್ಮ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಸದ್ಯ ವಸತಿ ಶಾಲೆಯೊಳಗೆ 27 ಕಾಡಾನೆಗಳು (Elephant) ಬೀಡುಬಿಟ್ಟಿರುವ ಹಿನ್ನೆಲೆ ಆ್ಯಂಬರ್ ವ್ಯಾಲಿ ವಸತಿ ಶಾಲೆಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಮುಗ್ತಿಹಳ್ಳಿ ಬಳಿ 25 ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ಆ್ಯಂಬರ್ ವ್ಯಾಲಿ ವಸತಿ ಶಾಲೆ ಆವರಣದಲ್ಲಿ 25 ಕಾಡಾನೆಗಳ ತಂಡ ಬೀಡುಬಿಟ್ಟಿದೆ. ಕಾಡಾನೆ ಹಿಂಡು ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ‌ಬಂದಿವೆ. ಹೀಗಾಗಿ ವಸತಿ ಶಾಲೆಯೊಳಗಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಗೆ ವಸತಿ ಶಾಲೆಯಿಂದ ಹೊರ ಬರದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಮುಗ್ತಿಹಳ್ಳಿ ಬಳಿಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ವಸತಿ ಶಾಲೆಗೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಬಂದಿರುವ 30ಕ್ಕೂ ಅಧಿಕ ಕಾಡಾನೆಗಳು. 8ಕ್ಕೂ ಅಧಿಕ‌ ಕಾಡಾನೆಗಳು ಬೀಟಮ್ಮ ಗ್ಯಾಂಗ್ ನಿಂದ ಬೇರ್ಪಟ್ಟಿವೆ. ಹಂತಕ ಸಲಗ ಭೀಮ ಕೂಡ ಬೀಟಮ್ಮ ಗ್ಯಾಂಗ್​ನಲ್ಲಿದ್ದಾನೆ. ಎರಡು ದಿನದಿಂದ ಚಿಕ್ಕಮಗಳೂರು ಹೊರ ವಲಯದ ಗ್ರಾಮದಲ್ಲಿ ಕಾಡಾನೆಗಳು ಸಂಚಾರ ಮಾಡುತ್ತಿವೆ.

ಇದನ್ನೂ ಓದಿ: ಚಿನ್ನದ ಅಂಗಡಿ ಮೇಲೆ ನಕಲಿ ಅಧಿಕಾರಿಗಳ ದಾಳಿ, 1 ಕೇಜಿ ಬಂಗಾರ ತೆಗೆದುಕೊಂಡು ಪರಾರಿಯಾಗುತ್ತಿದ್ದವರು ಪೊಲೀಸರ ಬಲಗೆ ಬಿದ್ದಿದ್ದೇ ರೋಚಕ

ಈ ಹಿಂದೆ ಹಲವರ ಸಾವಿಗೆ ಕಾರಣವಾಗಿರುವ ಭೀಮ ಎಂಬ ಪುಂಡನೆ ಕೂಡ ಈ 30 ಆನೆಗಳ ಗ್ಯಾಂಗ್ ಸೇರಿದ್ದು ಇನ್ನಷ್ಟು ಭೀತಿ ಹೆಚ್ಚಿಸಿದೆ. ಚಿಕ್ಕಮಗಳೂರು ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇಷ್ಟು ದಿನ ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ ಭಾಗದಲ್ಲಿ ಬೀಡುಬಿಟ್ಟಿದ್ದ ಈ ಕಾಡಾನೆಗಳ ಹಿಂಡು ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಹಿಂಡು-ಹಿಂಡಾಗಿ ಬಂದಿರುವುದು ಕಾಫಿ ಹಾಗೂ ಅಡಿಕೆ ಬೆಳೆಗಾರರಲ್ಲಿ ಇನ್ನಿಲ್ಲದ ಆತಂಕ ತಂದಿದೆ. 30 ಆನೆಗಳ ತಂಡ ಬಂದಿರುವುದರಿಂದ ಅರಣ್ಯ ಇಲಾಖೆ ಕೂಡ ಹೈ ಅಲರ್ಟ್ ಘೋಷಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ