ಮಗ ಆಸ್ಪತ್ರೆಯಲ್ಲಿ ವಿಷ ಪ್ರಾಶನ ಮಾಡಿ ಸಾವನ್ನಪ್ಪಿದ್ದ, ಮಗನ ಸಾವಿನ ಬಗ್ಗೆ ಅನುಮಾನಗೊಂಡ ಹೆತ್ತವರು ಸೊಸೆ, ಆಕೆಯ ಸ್ನೇಹಿತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು… ಗಂಡನ ಶವಸಂಸ್ಕಾರ ಮುಗಿಯುವ ಮೊದಲೇ ಜೈಲು ಸೇರುವ ಭಯದಿಂದ ಎಸ್ಕೇಪ್ ಆಗಿದ್ದವಳು ಕಾಫಿ ತೋಟದಲ್ಲಿ ಹೆಣವಾಗಿದ್ದಳು. ಅನೈತಿಕ ಸಂಬಂಧದ ದಾರಿ ಹಿಡಿದವಳು ಇಡೀ ಕುಟುಂಬವನ್ನ (children) ತಬ್ಬಲಿ ಮಾಡಿದ ಕರುಣಾಜನಕ ಸ್ಟೋರಿ ಇಲ್ಲಿದೆ. ನಾಲ್ಕು ದಿನದ ಹಿಂದೆ ಮಗನ ಸಾವು, ಮಗನ ಸಾವಿಗೆ ಕಾರಣವಾಗಿದ್ದ ಸೊಸೆಯ ಶವ ಸೋಮವಾರ ಕಾಫಿ ತೋಟದಲ್ಲಿ ಪತ್ತೆ. ಹೌದು ಒಂದೇ ಒಂದು ವಾರದಲ್ಲಿ ಕುಟುಂಬಕ್ಕೆ ಆಸರೆಯಾಗಿದ್ದ ಮಗ ಸೊಸೆ ಸಾವಿನಿಂದ ವೃದ್ದಾಪ್ಯದ ದಿನಗಳನ್ನ ಕಳೆಯುತ್ತಿದ್ದ ಚಿಕ್ಕಮಗಳೂರು (chikmagalur) ಜಿಲ್ಲೆಯ ಮೂಡಿಗೆರೆ (mudigere) ತಾಲೂಕಿನ ಉಗ್ಗೇಹಳ್ಳಿಯ ನಾಗಚಾರಿ ಯಶೋದಮ್ಮ ದಂಪತಿಗೆ (couple) ದಿಕ್ಕು ತೋಚದಾಗಿದೆ. ತಮ್ಮ ಕೊನೆಯ ದಿನಗಳಲ್ಲಿ ಬದುಕಿಗೆ ಆಸರೆ ಆಗಬೇಕಿದ್ದ ಮಗ ಜಗದೀಶ್ ಹೆಂಡತಿಯ ಅನೈತಿಕ ಸಂಬಂಧಕ್ಕೆ (Illicit relation) ಸಾವನ್ನಪ್ಪಿದ್ದರೆ, ಸೊಸೆ ನೇತ್ರಾವತಿ ಜೈಲು ಸೇರುವ ಆತಂಕದಿಂದ ಪ್ರಾಣ ಕಳೆದುಕೊಂಡಿದ್ದಳು.
ಕಳೆದ ಒಂದು ವಾರದ ಹಿಂದೆ ಜಗದೀಶ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಷ ಪ್ರಾಶನದಿಂದ ಸಾವನ್ನಪ್ಪಿದ್ದ. ವಿಷ ಪ್ರಾಶನದ ಬಗ್ಗೆ ಹೆತ್ತವರಿಗೆ ಹೇಳದೆ ತನ್ನ ಸ್ನೇಹಿತ ಧನಂಜಯ್ ಜೊತೆ ಸೇರಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅದ್ರೆ ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಜಗದೀಶ್ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 3ರಂದು ಕೊನೆಯುಸಿರೆಳೆದಿದ್ದರು.
ಮಗನ ಸಾವಿನ ಬಗ್ಗೆ ಅನುಮಾನಗೊಂಡ ಯಶೋದಮ್ಮ ಗೋಣಿಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ರು. ನನ್ನ ಮಗನ ಸಾವಿಗೆ ಆತನ ಹೆಂಡತಿ ನೇತ್ರಾವತಿ ಮತ್ತು ಆಕೆಯ ಪ್ರಿಯಕರ ಅಂಗಡಿ ಗ್ರಾಮದ ಧನಂಜಯ ಅವರ ನಡುವಿನ ಅಕ್ರಮ ಸಂಬಂಧವೇ ಕಾರಣ. ಹೆಂಡತಿಯ ಅಕ್ರಮ ಸಂಬಂಧದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ನೇತ್ರಾವತಿ ಮತ್ತು ಧನಂಜಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೇಳಿಕೊಂಡಿದ್ದರು.
ತನ್ನ ಗಂಡನ ಸಾವಿಗೆ ಪ್ರಚೋದನೆ ನೀಡಿರುವ ಬಗ್ಗೆ ಗೋಣಿಬೀಡು ಠಾಣೆಯಲ್ಲಿ ಜಗದೀಶ್ ಪೋಷಕರು ದೂರು ನೀಡಿದ್ದಾರಂತೆ. ತನ್ನ ಮತ್ತು ಸ್ನೇಹಿತ ಧನಂಜಯ್ ವಿರುದ್ದ ಗೋಣಿಬಿಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ತಿಳಿದ ನೇತ್ರಾವತಿ ತನ್ನ ಗಂಡನ ಶವಸಂಸ್ಕಾರ ಮುಗಿಯುವ ಮೊದಲೇ ಮಾರ್ಚ್ 3ರ ರಾತ್ರಿ ಮನೆಯಿಂದ ಇದ್ದಕ್ಕಿದಂತೆ ನಾಪತ್ತೆಯಾಗಿದ್ದಳು.
ಎರಡು ದಿನಗಳಿಂದ ನೇತ್ರಾವತಿಯ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ನೇತ್ರಾವತಿ ಶವ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಫಿ ಗಿಡವೊಂದಕ್ಕೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇತ್ರಾವತಿ ಸ್ನೇಹಿತ ಧನಂಜಯ್ ಎಸ್ಕೇಪ್ ಆಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.
ಉಗ್ಗೇಹಳ್ಳಿ ಗ್ರಾಮದ ಜಗದೀಶ್ ಮತ್ತು ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ನೇತ್ರಾವತಿ 13 ವರ್ಷಗಳ ಹಿಂದೆ ವಿವಾಹವಾಗಿದ್ರು. ಇದ್ದ ನಾಲ್ಕು ಎಕರೆ ಕಾಫಿತೋಟದಲ್ಲಿ ಸುಂದರ ಬದುಕನ್ನ ಕಟ್ಟಿಕೊಂಡಿದ್ರು. ಅದ್ರೆ ನೇತ್ರಾವತಿಯ ಪರಪುರುಷನ ಸಂಗಕ್ಕೆ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಮಗ ಸೊಸೆಯನ್ನ ಕಳೆದುಕೊಂಡು ವೃದ್ದ ದಂಪತಿ ತಬ್ಬಲಿಯಾದರೆ ಅಕ್ರಮ ಸಂಬಂಧದ ಸುಳಿಯಿಂದ ದಂಪತಿ ಸಾವನ್ನಪ್ಪಿದ್ದು, ಮಕ್ಕಳಿಬ್ಬರ ಬದುಕನ್ನ ತಬ್ಬಲಿಯಾಗಿದ್ದಾರೆ.
ವರದಿ: ಅಶ್ವಿತ್ ಮಾವಿನಗುಣಿ, ಟಿವಿ9, ಚಿಕ್ಕಮಗಳೂರು