ಹಾಸ್ಟೆಲ್ ರೂಮಿನ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ: ಡ್ರಗ್ಸ್, ಬಡ್ಡಿ ಮಾಫಿಯಾಕ್ಕೆ ಬಲಿಯಾದ್ನಾ ಇಂಜಿನಿಯರಿಂಗ್ ವಿದ್ಯಾರ್ಥಿ?

ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ರೂಮಿನಲ್ಲಿ ವಿಧ್ಯಾರ್ಥಿ ಅನುಮಾನಾಸ್ಪದಾಗಿ ಸಾವನ್ನಪ್ಪಿದ್ದು, ವಿದ್ಯಾರ್ಥಿ ಸಾವಿನ ಸುತ್ತ ನೂರೆಂಟು ಅನುಮಾನ ಶಿಕ್ಷಣ ಸಂಸ್ಥೆಯ ಸುತ್ತ ಸುತ್ತುಕೊಂಡಿದೆ. ವಿದ್ಯಾಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ಡ್ರಗ್ಸ್ ,ಮೀಟರ್ ಬಡ್ಡಿ ಮಾಫಿಯಾದ ಸುಳಿಗೆ ಸಿಲುಕಿ ವಿಧ್ಯಾರ್ಥಿ ಬಲಿಯಾದನಾ ಎಂಬ ಪ್ರಶ್ನೆ ಕಾಫಿನಾಡಿನಲ್ಲಿ ಸದ್ದು ಮಾಡಿದೆ.

ಹಾಸ್ಟೆಲ್ ರೂಮಿನ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ: ಡ್ರಗ್ಸ್, ಬಡ್ಡಿ ಮಾಫಿಯಾಕ್ಕೆ   ಬಲಿಯಾದ್ನಾ ಇಂಜಿನಿಯರಿಂಗ್ ವಿದ್ಯಾರ್ಥಿ?
ಚಿಕ್ಕಮಗಳೂರು ಇಂಜಿನಿಯರಿಂಗ್​ ವಿದ್ಯಾರ್ಥಿ ಆತ್ಮಹತ್ಯೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 07, 2023 | 7:39 AM

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ A.I.T., ಈ ಕಾಲೇಜಿನಲ್ಲಿ ನಮ್ಮ ಮಕ್ಕಳಿಗೆ ಸೀಟ್ ಸಿಕ್ಕಿದ್ರೆ ಸಾಕು ಎಂದು ಅದೆಷ್ಟೋ ಪೋಷಕರು ಬಯಸುತ್ತಾರೆ. ಆದರೆ ಇದೆ A.I.T ಕಾಲೇಜಿನ ಹಾಸ್ಟೆಲ್ ರೂಮಿನಲ್ಲಿ ದ್ವೀತಿಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿ ಕಿಶೋರ್ ಎಂಬುವವರು ಹಾಸ್ಟೆಲ್ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಳೆದ ಶನಿವಾರ ಹಾಕಿದ ಹಾಸ್ಟೆಲ್ ರೂಮಿನ ಬಾಗಿಲು ಶವದ ವಾಸನೆ ಬಂದಮೇಲೆಯೇ ಓಪನ್ ಆಗಿದ್ದು. ಹೌದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮೂಲದ ಈಶ ಯಮುನಾ ದಂಪತಿಯ ಮಗನಾದ ಕಿಶೋರ್ ಎಸ್​.ಎಸ್​.ಎಲ್​.ಸಿ ಯಲ್ಲಿ ಉತ್ತಮ ಮಾರ್ಕ್ಸ್ ತೆಗೆದುಕೊಂಡಿದ್ದ. ಚನ್ನರಾಯಪಟ್ಟಣಕ್ಕೆ ಹತ್ತಿರವಿರುವ ಚಿಕ್ಕಮಗಳೂರು ನಗರದ ಪ್ರತಿಷ್ಠಿತ A.I.T ಇಂಜಿನಿಯರಿಂಗ್ ಕಾಲೇಜಿನಲ್ಲಿ(A.I.T Engineering College) ಇಂಜಿನಿಯರಿಂಗ್ ಕೋರ್ಸ್​ಗೆ ಸೀಟ್ ಕೂಡ ಸಿಕ್ಕಿತ್ತು. ಆಟೋ ಚಾಲಕನಾದ ಈಶ ಬಡತನದ ಮಧ್ಯೆಯೂ ಮಗನ ವಿದ್ಯಾಭ್ಯಾಸಕ್ಕಾಗಿ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ರು ಆದ್ರೆ ನಿನ್ನೆ(ಮಾ.6) ಕಾಲೇಜ್ ಹಾಸ್ಟೆಲ್​ನಿಂದ ಬಂದ ಒಂದು ಕರೆ ಈಶ ದಂಪತಿಗೆ ಬರ ಸಿಡಿಲಿನಂತೆ ಅಪ್ಪಳಿಸಿತು.

ಕಳೆದ ಶನಿವಾರ ಹಾಸ್ಟೆಲ್ ರೂಮಿನ ಒಳ ಹೋದ ಕಿಶೋರ್ ಸೋಮವಾರ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದ ಹಾಸ್ಟೆಲ್ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು. ಸಾವಿನ ಸುತ್ತ ನೂರೆಂಟು ಅನುಮಾನಗಳು ಎದ್ದಿದ್ದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕ್ಯಾಂಪಸ್​ನಲ್ಲಿ ಡ್ರಗ್ಸ್ ಮಾಫಿಯಾ, ಮೀಟರ್ ಬಡ್ಡಿ ದಂಧೆಗೆ ಕಿಶೋರ್ ಬಲಿಯಾಗಿದ್ದಾನಾ ಅನ್ನುವ ಅನುಮಾನ ಮೂಡತೊಡಗಿದೆ.

ಇದನ್ನೂ ಓದಿ:ಪ್ರಿಯಕರನ ಸಾವಿನಿಂದ ಮನನೊಂದು ಪ್ರಿಯತಮೆ ಆತ್ಮಹತ್ಯೆ: ತುಮಕೂರಿನಲ್ಲೊಂದು ಹೃದಯವಿದ್ರಾವಕ ಘಟನೆ

ಕಿಶೋರ್ ಪೋಷಕರು ಹೇಳುವಂತೆ ಮೈತುಂಬ ಸಾಲ ಮಾಡಿದ್ದು, ವಿದ್ಯಾರ್ಥಿಗಳ ಜೊತೆಗೂ ಸಾಲ ಕೇಳಿದ್ದನಂತೆ, ವಿದ್ಯಾರ್ಥಿಗಳಿಗೆ ಸಾಲ ಯಾಕೆ ಬೇಕು.? ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಒಳಗೆ ನಡೆಯುತ್ತ ಇರೋದೆ ಬೇರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಕಾಲೇಜಿನ ಮೇಲೆ ಸಾಕಷ್ಟು ಆರೋಪ ಬಂದಿತ್ತು, ನಾವು ಈ‌ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಕಾಲೇಜು ಪ್ರಿನ್ಸಿಪಾಲ್ ಜಯರಾಮ್ ಸಮಜಾಯಿಷಿ ನೀಡಿದ್ದಾರೆ.

ಒಟ್ಟಿನಲ್ಲಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು ಪ್ರತಿಷ್ಠಿತ A.I.T ಕಾಲೇಜಿನ ಸುತ್ತ ನೂರೆಂಟು ಅನುಮಾನಗಳನ್ನ ಹುಟ್ಟು ಹಾಕಿದ್ದು, ಕ್ಯಾಂಪಸ್ ಒಳಗೆ ನಡೆಯುತ್ತಿರುವ ಡ್ರಗ್ಸ್, ಬಡ್ಡಿ ಮಾಫಿಯಾದ ಕರಿ ನೆರಳಿಗೆ ಸಿಲುಕಿ‌ ವಿಧ್ಯಾರ್ಥಿ ಬಲಿಯಾದನಾ ಎಂಬ ಪ್ರಶ್ನೆ ಕಾಡತೊಡಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ನಗರ ಪೊಲೀಸರು ಸೂಕ್ತ ತನಿಖೆ ನಡೆಸಿ ವಿಧ್ಯಾರ್ಥಿ ಸಾವಿಗೆ ನ್ಯಾಯ ಕೊಡಿಸುವುದರ ಜೊತೆಗೆ ಇನ್ನಷ್ಟು ವಿಧ್ಯಾರ್ಥಿಗಳು‌ ಸಾವಿನ ದಾರಿ ತುಳಿಯುವುದನ್ನ ತಪ್ಪಿಸಬೇಕಿದೆ.

ವರದಿ: ಅಶ್ವಿತ್ ಮಾವಿನಗುಣಿ ಟಿವಿ9 ಚಿಕ್ಕಮಗಳೂರು

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ