ಪ್ರಿಯಕರನ ಸಾವಿನಿಂದ ಮನನೊಂದು ಪ್ರಿಯತಮೆ ಆತ್ಮಹತ್ಯೆ: ತುಮಕೂರಿನಲ್ಲೊಂದು ಹೃದಯವಿದ್ರಾವಕ ಘಟನೆ
ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಸುಷ್ಮಾ, ಅಂದಿನಿಂದ ಧುನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದಳು. ಧನುಷ್ ಸಾವಿನಿಂದ ನೊಂದು ನಿನ್ನೆ ಯುವತಿ ಸುಷ್ಮಾಳು ಆತ್ನಹತ್ಯೆ ಮಾಡಿಕೊಂಡಿದ್ದಾಳೆ.
ತುಮಕೂರು: ಎರಡು ವರ್ಷಗಳಿಂದ ಪ್ರೀತಿಸಿ ಮದುವೆಗೆ ಮನೆಯವರನ್ನೂ ಒಪ್ಪಿಸಿದ್ದ ಜೋಡಿ ಬಾಳಲ್ಲಿ ಜವರಾಯ ಅಟ್ಟಹಾಸ ಮೇರೆದಿದ್ದಾನೆ. ಪ್ರಿಯತಮ ಅಪಘಾತದಲ್ಲಿ ಮೃತಪಟ್ಟರೇ, ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆಯಾಗ ಬೇಕಾಗಿದ್ದ ಜೋಡಿ ದಾರುಣ ಸಾವನ್ನಪ್ಪಿರುವಂತಹ ಹೃದಯ ವಿದ್ರಾವಕ ಘಟನೆ ತುಮಕೂರು ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ. ಮೇ 11ರಂದು ಹುಡುಗ ಸಾವನ್ನಪ್ಪಿದ್ರೆ ನಿನ್ನೆ ರಾತ್ರಿ ಯುವತಿ ಸಾವನ್ನಪ್ಪಿದ್ದಾಳೆ. ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು. ಮೇ 11ರಂದು ನೆಲಮಂಗಲ ಕುಲಾನಹಳ್ಳಿ ಬಳಿ ನಡೆದ ಅಪಘಾತದಲ್ಲಿ ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ ಮೃತಪಟ್ಟಿದ್ದಾನೆ. ತುಮಕೂರು ತಾಲ್ಲೂಕಿನ ಅರೆಹಳ್ಳಿ ಗ್ರಾಮದ ಸುಷ್ಮಾ, ಸಾವಿನ ಸುದ್ದಿಕೇಳಿ ಆಘಾತಗೊಂಡಿದ್ದು, ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ.
ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಸುಷ್ಮಾ, ಅಂದಿನಿಂದ ಧುನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದಳು. ಧನುಷ್ ಸಾವಿನಿಂದ ನೊಂದು ನಿನ್ನೆ ಯುವತಿ ಸುಷ್ಮಾಳು ಆತ್ನಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿದ್ದ ಯುವತಿ ಸುಷ್ಮಾ, ನಾಲ್ಕೈದು ಆಸ್ಪತ್ರೆ ಸುತ್ತಿದ್ರೂ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ 8ಗಂಟೆ ಸುಮಾರಿನಲ್ಲಿ ಸಾವೀಗಿಡಾಗಿದ್ದಾಳೆ. ಸುಷ್ಮಾ ಎಂಕಾಂ ವಿದ್ಯಾಭ್ಯಾಸ ಮಡುತ್ತಿದ್ದ. ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದ ಧನುಷ್. ಊರಿನ ಜಾತ್ರೆಗೆ ಬರುವ ವೇಳೆ ಅಪಘಾತ ನಡೆದು ಧನುಷ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಪ್ರೀತಿ ವಿಚಾರ ಗೊತ್ತಾಗಿ ಮನೆಯವರು ಇಬ್ಬರಿಗೂ ಮದುವೆ ನಿಶ್ಚಯ ಮಾಡಿದ್ದರು. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರಿನಲ್ಲಿ ನಟೋರಿಯಸ್ ಕಳ್ಳನ ಬಂಧನ
ಬೆಂಗಳೂರು: ನಟೋರಿಯಸ್ ಕಳ್ಳ ಬರ್ನ್ ಸಿದ್ದಿಕಿಯನ್ನು ಪುಲಕೇಶಿ ನಗರ ಪೊಲೀಸರು ಬೆಂಗಳೂರಿನಲ್ಲಿ (Bengaluru) ಬಂಧಿಸಿದ್ದಾರೆ. ಆರೋಪಿಯಿಂದ ಪೊಲೀಸರು ಚಿನ್ನದ ಒಡವೆ, ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ವಿವಿಧ ಕೇಸ್ ಗಳಲ್ಲಿ ಮೋಸ್ಟ ವಾಂಟೆಡ್ ಕ್ರಮಿನಲ್ ಆಗಿದ್ದನು. ಆರೋಪಿ ಬರ್ನ್ ಸಿದ್ದಿಕಿ ಪುಲಕೇಶಿನಗರದಲ್ಲಿ ಬೈಕ್ ಕಳ್ಳತನ ಮಾಡಿದ್ದನು. ಕದ್ದ ಬೈಕ್ ಬಳಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದನು. ಈ ಹಿಂದೆ ಜೆ.ಸಿ.ನಗರದ ಸಿದ್ದಾರ್ಥ ಜ್ಯುವೆಲರಿಯಲ್ಲಿ ಕಳ್ಳತನ ಮಾಡಿದ್ದನು. ನಟೋರಿಯಸ್ ರಾಬರ್ ಸಿದ್ದಿಕಿ ಲಾಂಗ್ ಹಿಡಿದು ಒಂಟಿಯಾಗಿ ಬಂದು ಕಳವು ಮಾಡುತ್ತಿದ್ದನು.
ಈತನ ನಟೋರಿಯಸ್ ಅಟ್ಅಹಾಸ ನೋಡಿದರೆ ಒಂಟಿಯಾಗಿ ಅಂಗಡಿಯಲ್ಲಿ ಕೂರೊಕ್ಕೆ ಭಯವಾಗುತ್ತೆ. ಕಳೆದ ವಾರ ಡಿಯೋ ಬೈಕನಲ್ಲಿ ಬಂದು, ಜೆಸಿ ನಗರದ ಸಿದ್ದಾರ್ಥ ಜ್ಯುವೆಲರಿಯಲ್ಲಿ ರಾಬ್ರಿ ಮಾಡಿದ್ದನು. ಈ ವೇಳೆ ಅರೋಪಿ ಗಲ್ಲಕ್ಕೆ ಕೈ ಹಾಕುವಾಗ ಮಚ್ಚನ್ನೆ ಹಿಡಿದಿದ್ದನು. ಆರೋಪಿ ಬರ್ನ್ ಸಿದ್ದಿಕಿ ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.