ಹಿಂದೂ ಕಾರ್ಯಕರ್ತರ ಟಾರ್ಗೆಟ್ ಮಾಡುವ ಸಿದ್ದರಾಮಯ್ಯನವರೇ, ಬಾಬಾ ಬುಡನ್​ಗಿರಿಯ ಪೆಟ್ರೋಲ್ ಬಾಂಬ್ ಪ್ರಕರಣ ಎಲ್ಲಿಗೆ ಬಂತು? ಶೋಭಾ ಕರಂದ್ಲಾಜೆ ಪ್ರಶ್ನೆ

ಪೆಟ್ರೋಲ್ ಬಾಂಬ್ ನೊಂದಿಗೆ ಮಾರ್ಕೆಟ್ ರಸ್ತೆಯಲ್ಲಿ ತಿರುಗುತ್ತಿದ್ದ ಯುವಕರನ್ನು ಚಿಕ್ಕಮಗಳೂರು ನಗರ ಪೋಲಿಸರು ಬಂಧಿಸಿದ್ದರು. ಡಿಸೆಂಬರ್ 4 ರಂದು ಅಂದಿನ ಎಸ್ಪಿ ಅಣ್ಣಾಮಲೈ ಪತ್ರಿಕಾಗೋಷ್ಠಿ ನಡೆಸಿ ಪೆಟ್ರೋಲ್ ಬಾಂಬ್ ಆರೋಪಿಗಳ ಬಂಧಿಸಿರುವುದಾಗಿ ಮಾಹಿತಿ ನೀಡಿದ್ದರು. ಇನ್ನು ಈ ಪ್ರಕರಣದ ಕೇಸ್ ಫೈಲ್ ಮಾಡದಂತೆ ಎಸ್ಪಿಯಾಗಿದ್ದ ಅಣ್ಣಾಮಲೈಗೆ ಕಾಂಗ್ರೆಸ್ ಸರ್ಕಾರ ಒತ್ತಡ ಹಾಕಿತ್ತು ಎಂಬ ಆರೋಪಗಳಿವೆ.

ಹಿಂದೂ ಕಾರ್ಯಕರ್ತರ ಟಾರ್ಗೆಟ್ ಮಾಡುವ ಸಿದ್ದರಾಮಯ್ಯನವರೇ, ಬಾಬಾ ಬುಡನ್​ಗಿರಿಯ ಪೆಟ್ರೋಲ್ ಬಾಂಬ್ ಪ್ರಕರಣ ಎಲ್ಲಿಗೆ ಬಂತು? ಶೋಭಾ ಕರಂದ್ಲಾಜೆ ಪ್ರಶ್ನೆ
ಪೆಟ್ರೋಲ್ ಬಾಂಬ್ ಪ್ರಕರಣ ಎಲ್ಲಿಗೆ ಬಂತು? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on:Jan 08, 2024 | 11:52 AM

ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ 7 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದತ್ತಜಯಂತಿಯ ವೇಳೆ ನಡೆದಿದ್ದ ಘಟನೆಗಳು ಇದೀಗ ರಾಜಕೀಯ ಅಸ್ತ್ರಗಳಾಗಿವೆ. ಸರ್ಕಾರ ಗೋರಿ ಧ್ವಂಸ ಮಾಡಿದ್ದ 14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ಗೆ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಿ ಸಮನ್ಸ್ ಜಾರಿಯಾದ ಬೆನ್ನಲೇ ಪೆಟ್ರೋಲ್ ಬಾಂಬ್ ಕೇಸ್ ಸದ್ದು ಮಾಡತೊಡಗಿದೆ ಹಾಗಿದ್ರೆ ಏನಿದು ಪೆಟ್ರೋಲ್ ಬಾಂಬ್ ಕೇಸ್? ಅದೀಗ ಸದ್ದು ಮಾಡುತ್ತಿರುವುದು ಯಾಕೆ? ಅನ್ನುವುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ (Inam Dattatreya Baba Budan Swami Dargah Controversy).

ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸುದ್ದಿಯಲ್ಲಿದೆ. ಅದುವೇ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ 7 ವರ್ಷಗಳ ಹಿಂದೆ ದತ್ತಜಯಂತಿಯಲ್ಲಿ ನಡೆದಿದ್ದ ಗಲಾಟೆ, ಗೋರಿ ಧ್ವಂಸ ಪ್ರಕರಣಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಹೌದು ಡಿಸೆಂಬರ್ 3 2017 ರಂದು ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆದ ದತ್ತಜಯಂತಿ ವೇಳೆ ನಿಷೇಧಿತ ಪ್ರದೇಶಕ್ಕೆ ನುಗ್ಗಿದ್ದ ದತ್ತಮಾಲಾಧಾರಿಗಳ ಗುಂಪು ಗೋರಿಗಳನ್ನ ಧ್ವಂಸ ಮಾಡಿತ್ತು ಇದ್ರಿಂದ ಉದ್ರಿಕ್ತರಾದ ಮತ್ತೊಂದು ಸಮುದಾಯದ ಗುಂಪು ಸಿಕ್ಕ ಸಿಕ್ಕ ಕಡೆ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾಗಿತ್ತು. ಈ ವೇಳೆ ಕೆಲ ಯುವಕರು ಪೆಟ್ರೋಲ್ ಬಾಂಬ್ ನೊಂದಿಗೆ ದಾಳಿಗೆ ಮುಂದಾದಾಗ ಪೊಲೀಸರು ವಶಕ್ಕೆ ಪಡೆದಿದ್ರು.

ಪೆಟ್ರೋಲ್ ಬಾಂಬ್ ನೊಂದಿಗೆ ಮಾರ್ಕೆಟ್ ರಸ್ತೆಯಲ್ಲಿ ತಿರುಗುತ್ತಿದ್ದ ಯುವಕರನ್ನು ಚಿಕ್ಕಮಗಳೂರು ನಗರ ಪೋಲಿಸರು ಬಂಧಿಸಿದ್ದರು. ಡಿಸೆಂಬರ್ 4 ರಂದು ಅಂದಿನ ಎಸ್ಪಿ ಅಣ್ಣಾಮಲೈ ಪತ್ರಿಕಾಗೋಷ್ಠಿ ನಡೆಸಿ ಪೆಟ್ರೋಲ್ ಬಾಂಬ್ ಆರೋಪಿಗಳ ಬಂಧಿಸಿರುವುದಾಗಿ ಮಾಹಿತಿ ನೀಡಿದ್ದರು. ಇನ್ನು ಈ ಪ್ರಕರಣದ ಕೇಸ್ ಫೈಲ್ ಮಾಡದಂತೆ ಎಸ್ಪಿಯಾಗಿದ್ದ ಅಣ್ಣಾಮಲೈಗೆ ಕಾಂಗ್ರೆಸ್ ಸರ್ಕಾರ ಒತ್ತಡ ಹಾಕಿತ್ತು ಎಂಬ ಆರೋಪಗಳಿವೆ.

ಇದೆ ವಿಚಾರವನ್ನ ಮುಂದಿಟ್ಟಿರುವ ಶ್ರೀ ರಾಮ ಸೇನೆ ಪೆಟ್ರೋಲ್ ಬಾಂಬ್ ಕೇಸ್ ಎಲ್ಲಿಗೆ ಬಂತು? ಇದರ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸವಾಲು ಹಾಕಿದೆ. ಹಿಂದೂ ಕಾರ್ಯಕರ್ತರ ಮೇಲೆ ಟಾರ್ಗೆಟ್ ಮಾಡುವ ನೀವು ಈ ಪ್ರಕರಣವನ್ನ ಏನು ಮಾಡಿದ್ರಿ ಎಂದು ಆಕ್ರೋಶ ಹೊರಹಾಕಿದೆ.

Also Read: ದತ್ತ ಪೀಠ ಹೋರಾಟಗಾರರ ಮೇಲೆ ಸಮನ್ಸ್ ಜಾರಿ; ಇಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಆರೋಪಿಗಳು

2017 ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಗೋರಿ‌ ಧ್ವಂಸದ ಕೇಸ್ ಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಗೋರಿಗಳ ಧ್ವಂಸ ಮಾಡಿದ್ದ 14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ಗೆ ಚಾರ್ಜ್ ಶೀಟ್ ಸಲ್ಲಿಸಲು ಸರ್ಕಾರ ಅನುಮತಿ ನೀಡಿದ ಬೆನ್ನಲೇ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಜನವರಿ 8 ರಂದು ಹಾಜರಾಗಲು ಸಮನ್ಸ್ ಜಾರಿಯಾಗಿತ್ತು.

ಸಮನ್ಸ್ ಜಾರಿಯಾದ ಬೆನ್ನಲೇ ಹಿಂದೂ ಕಾರ್ಯಕರ್ತರು ಸೇರಿದಂತೆ ಬಿಜೆಪಿ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಇದೀಗ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಪತ್ತೆಯಾಗಿದ್ದ ಪೆಟ್ರೋಲ್ ಬಾಂಬ್ ಪ್ರಕರಣದ ಮಾಹಿತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆಗಾಗಿ ರಾಜಕಾರಣ ಮಾಡುತ್ತಿದೆ. ಭಯೋತ್ಪಾದಕರು, ದೇಶ ದ್ರೋಹಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. 2013 ರಲ್ಲೂ ಕಾಂಗ್ರೆಸ್ ಇದನ್ನೇ ಮಾಡಿದ್ದು, ಪೆಟ್ರೋಲ್ ಬಾಂಬ್ ಕೇಸ್ ಮುಚ್ಚಿ ಹಾಕಿದ್ರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2017ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಕ್ಕಮಗಳೂರಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆದಿದ್ದ ಗಲಾಟೆ, ಗೋರಿ ಧ್ವಂಸ, ಪೆಟ್ರೋಲ್ ಬಾಂಬ್ ಪ್ರಕರಣಗಳು ಸದ್ದು ಮಾಡುತ್ತಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಇದನ್ನೇ ಅಸ್ತ್ರವಾಗಿ ಪ್ರಯೋಗಿಸಲು ಮುಂದಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಜನವರಿ 8 ರಂದು (ಇಂದು) ಚಿಕ್ಕಮಗಳೂರಿನ ನ್ಯಾಯಾಲಯಕ್ಕೆ ಗೋರಿ ಧ್ವಂಸ ಪ್ರಕರಣದ ಆರೋಪಿಗಳು ಹಾಜರಾಗಲು ಸಮನ್ಸ್ ಜಾರಿಯಾಗಿದ್ದು, ಮತ್ತೆ ಯಾವ ತಿರುವು ಪಡೆಯುತ್ತೋ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:49 am, Mon, 8 January 24