ಅಪ್ಪ-ಅಮ್ಮನ ಜೊತೆ ಜಗಳವಾಡಿ ತಾವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ ಕಿಡಿಗೇಡಿ; ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೂ ಪೆಟ್ರೋಲ್ ದಾಳಿ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 112 ವಾಹನ ಚಾಲಕ ತ್ರಿಮೂರ್ತಿ ಮತ್ತು ಪೇದೆ ರಘು ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಕಾಲಿಗೆ ದೇವರಾಜ್ ಬೆಂಕಿ ಹಚ್ಚಿದ್ದಾನೆ.

ಅಪ್ಪ-ಅಮ್ಮನ ಜೊತೆ ಜಗಳವಾಡಿ ತಾವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ ಕಿಡಿಗೇಡಿ; ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೂ ಪೆಟ್ರೋಲ್ ದಾಳಿ
ದೇವರಾಜ್ ನನ್ನ ಹಿಡಿದು ಸ್ಥಳೀಯರು ಮರಕ್ಕೆ ಕಟ್ಟಿಹಾಕಿದ್ದಾರೆ
Edited By:

Updated on: Mar 16, 2022 | 5:25 PM

ಚಿಕ್ಕಮಗಳೂರು: ಕಿಡಿಗೇಡಿಯೊಬ್ಬ ಅಪ್ಪ-ಅಮ್ಮನ ಜೊತೆ ಜಗಳವಾಡಿ ತಾವಿದ್ದ ಗುಡಿಸಲಿಗೆ ಬೆಂಕಿ(Fire) ಹಚ್ಚಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಂಬೇಕಾಡು ಗ್ರಾಮದಲ್ಲಿ ನಡೆದಿದೆ. ದೇವರಾಜ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಯಾವಾಗಲೂ ಇತರರೊಂದಿಗೆ ಜಗಳ ಮಾಡುತ್ತಿದ್ದ 25 ವರ್ಷದ ಯುವಕ ದೇವರಾಜ್ ನಿನ್ನೆ ರಾತ್ರಿ (ಮಾರ್ಚ್​ 15) ತಂದೆ- ತಾಯಿಯ ಜೊತೆ ಗಲಾಟೆ ಮಾಡಿ, ತನ್ನ ಮನೆಗೆ(Home) ಬೆಂಕಿ ಹಚ್ಚಿದ್ದ. ಹೀಗಾಗಿ ವಿಷಯ ತಿಳಿದ ಸ್ಥಳೀಯರು 112 ಪೊಲೀಸ್ ತುರ್ತು ವಾಹನಕ್ಕೆ ಕರೆ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 112 ವಾಹನ ಚಾಲಕ ತ್ರಿಮೂರ್ತಿ ಮತ್ತು ಪೇದೆ ರಘು ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಕಾಲಿಗೆ ದೇವರಾಜ್ ಪೆಟ್ರೋಲ್​(Petrol )ಹಾಕಿ ಬೆಂಕಿ ಹಚ್ಚಿದ್ದಾನೆ.

ತಕ್ಷಣ ನುಗ್ಗಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಹೆಚ್. ಆರ್. ಜಗದೀಶ್ ಧಾವಿಸಿ, ಪೊಲೀಸ್ ಸಿಬ್ಬಂದಿ ತ್ರಿಮೂರ್ತಿ ರಕ್ಷಣೆ ಮಾಡಿದ್ದಾರೆ. ಬಳಿಕ 112 ವಾಹನವನ್ನು ಸ್ವತಃ ಚಲಾಯಿಸಿ ಗಾಯಾಳುವನ್ನು ಅದರಲ್ಲಿಯೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆ ಬಳಿಕ ದೇವರಾಜ್ ನನ್ನ ಹಿಡಿದು ಸ್ಥಳೀಯರು ಮರಕ್ಕೆ ಕಟ್ಟಿಹಾಕಿದ್ದಾರೆ.

ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಕೊಪ್ಪ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ; 20 ಅಧಿಕ ಮೇವಿನ ಬಣವೆಗಳು ಸುಟ್ಟು ಭಸ್ಮ

ಹಾವೇರಿ ತಾಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದ್ದು, 15ಕ್ಕೂ ಅಧಿಕ ರೈತರಿಗೆ ಸೇರಿದ ಮೇವಿನ ಬಣವೆಗಳು ಮತ್ತು ಮೆಕ್ಕೆಜೋಳದ ತೆನೆಗಳ ರಾಶಿ ಸುಟ್ಟು ಭಸ್ಮವಾಗಿದೆ. ಇಪ್ಪತ್ತಕ್ಕೂ ಹೆಚ್ಚು ಮೇವಿನ ಬಣವೆಗಳು, ಐದಾರು ಮೆಕ್ಕೆಜೋಳದ ತೆನೆಗಳ ರಾಶಿಗೆ ಬೆಂಕಿ ತಗುಲಿದೆ. ಸದ್ಯ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸೋ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೊಡಗಿದ್ದಾರೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.

ಇದನ್ನೂ ಓದಿ:
Fire Acccident: ಜಮ್ಮುವಿನ ಗುಡಿಸಲುಗಳಲ್ಲಿ ಬೆಂಕಿ ಅವಘಡ; ಮೂವರು ಸಜೀವ ದಹನ, 14 ಜನರಿಗೆ ಗಾಯ

ಬೆಂಕಿಯಿಂದ ಪಾರಾಗಲು ಮೂರು ವರ್ಷದ ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದ ತಂದೆ; ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ

Published On - 4:59 pm, Wed, 16 March 22