Charmadi Ghat ಚಾರ್ಮಾಡಿ ಘಾಟ್​ನಲ್ಲಿ ಲಘು ಭೂಕುಸಿತ; ನಿರಂತರ ಕಾರ್ಯದಲ್ಲಿ ತೊಡಗಿರುವ ಜೆಸಿಬಿಗಳು

ಚಾರ್ಮಾಡಿ ಘಾಟ್ನ ಸೋಮನ ಕಾಡು ಸಮೀಪ ಲಘು ಭೂಕುಸಿತವಾಗಿದ್ದು ಸದ್ಯ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೆದ್ದಾರಿ ಪ್ರಾಧಿಕಾರದ ಜೆಸಿಬಿ ಯಂತ್ರಗಳು ಮಣ್ಣು ತೆರವು ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿವೆ.

Charmadi Ghat ಚಾರ್ಮಾಡಿ ಘಾಟ್​ನಲ್ಲಿ ಲಘು ಭೂಕುಸಿತ; ನಿರಂತರ ಕಾರ್ಯದಲ್ಲಿ ತೊಡಗಿರುವ ಜೆಸಿಬಿಗಳು
ಚಾರ್ಮಾಡಿ ಘಾಟ್
Updated By: ಆಯೇಷಾ ಬಾನು

Updated on: Jul 14, 2022 | 10:11 PM

ಚಿಕ್ಕಮಗಳೂರು: ಕಳೆದ 10 ದಿನಗಳಿಂದ ದಕ್ಷಣ ಕನ್ನಡ ಹಾಗೂ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್(Charmadi Ghat) ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ನಿರಂತರ ಮಳೆಯಿಂದ(Rain) ವಾಹನ ಸಂಚಾರ ದುಸ್ತರವಾಗಿದೆ.

ಅಲ್ಲದೆ ಚಾರ್ಮಾಡಿ ಘಾಟ್ನ ಸೋಮನ ಕಾಡು ಸಮೀಪ ಲಘು ಭೂಕುಸಿತವಾಗಿದ್ದು ಸದ್ಯ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೆದ್ದಾರಿ ಪ್ರಾಧಿಕಾರದ ಜೆಸಿಬಿ ಯಂತ್ರಗಳು ಮಣ್ಣು ತೆರವು ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿವೆ.

ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬಿರುಗಾಳಿ ಸಹಿತ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ನಿನ್ನೆ-ಇಂದು ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ನಿನ್ನೆ ಒಂದೇ ದಿನ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ 154 ಮಿಲಿ ಮೀಟರ್ ಮಳೆಯಾಘಿದೆ. ಶೃಂಗೇರಿಯಲ್ಲಿ 160 ಮಿಲಿಮೀಟರ್ ಮಳೆ ದಾಖಲಾಗಿದೆ. ಇಂದು ನಿನ್ನೆಗಿಂತಲೂ ಹೆಚ್ಚು ವರುಣ ಆರ್ಭಟಿಸಿದ್ದು ಭಾರಿ ಮಳೆಗೆ ಮೂಡಿಗೆರೆ ತಾಲೂಕಿನಲ್ಲಿ ಎರಡು ಶಾಲೆಗಳು ಕುಸಿದಿವೆ. ಮನೆಯಿಂದ ಹೊರಬರಲು ಜನರು ಹೆದರುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಶಾಲೆಗೆ ಮಕ್ಕಳನ್ನು ಹೇಗೆ ಕಳುಹಿಸುವುದು ಎಂದು ಘೋಷಕರು ಪ್ರಶ್ನಿಸಿದ್ದಾರೆ. ಆದ್ರೆ ಇಷ್ಟಾದರೂ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿಲ್ಲ. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

Published On - 9:53 pm, Thu, 14 July 22