ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ
ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವ ಪತ್ತೆಯಾಗಿದೆ. ಕಳೆದ 10 ದಿನಗಳ ಹಿಂದೆ ನೀಲಗಿರಿ ಪ್ಲಾಂಟೇಶನ್ ನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಬೆತ್ತಲೆಯ ಸ್ಥಿತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕರ್ತವ್ಯದಲ್ಲಿದ್ದಾಗಲೇ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಸಾವಿನ ಸುತ್ತಾ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು, (ಜುಲೈ 04): ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ (Forest Guard) ಶವವಾಗಿ ಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನೀಲಗಿರಿ ಪ್ಲಾಂಟೇಶನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ನಾಪತ್ತೆಯಾಗಿದ್ದ 33 ವರ್ಷದ KFDC ವಿಭಾಗದ ಫಾರೆಸ್ಟ್ ಗಾರ್ಡ್ ಶರತ್ ಶವವಾಗಿ ಪತ್ತೆಯಾಗಿದ್ದಾರೆ. ನೀಲಗಿರಿ ಪ್ಲಾಂಟೇಶನ್ ನಿಂದ 5 ಕಿಮೀ ದೂರದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಶರತ್ ಶವ ಪತ್ತೆಯಾಗಿದೆ. ಶರತ್ ಮೂಲತಃ ಕೊಡಗು ಜಿಲ್ಲೆಯ ಕಾಲೂರು ನಿವಾಸಿಯಾಗಿದ್ದು. ಕಳೆದ ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ KFDC ವಿಭಾಗದಿಂದ ಸಖರಾಯಪಟ್ಟಣ ಅರಣ್ಯ ಇಲಾಖೆಯ KFDC ವಿಭಾಗಕ್ಕೆ ವರ್ಗಾವಣೆಯಾಗಿದ್ರು. ಸಖರಾಯಪಟ್ಟಣ ನೀಲಗಿರಿ ಪ್ಲಾಂಟೇಶನ್ ನಲ್ಲಿ ನರ್ಸರಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ಶರತ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ ಅನುಮಾನಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ನೀಲಗಿರಿ ಪ್ಲಾಂಟೇಶನ್ ನಲ್ಲಿ ಜೂನ್ 24 ರಂದು ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಶರತ್ ನಿಗೂಢವಾಗಿ ನಾಪತ್ತೆಯಾಗಿದ್ರು. ಶರತ್ ಗಾಗಿ ನೂರಾರು ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು ನೀಲಗಿರಿ ಪ್ಲಾಂಟೇಶನ್ ,ಅರಣ್ಯದಲ್ಲಿ ಹುಡುಕಾಟ ನಡೆಸಿದ್ರು. ಹುಡುಕಾಟದ ವೇಳೆ ಶರತ್ ಬೈಕ್ ಒಂದು ಕಡೆ ಸಿಕ್ಕಿದ್ರೆ ಬಟ್ಟೆ ಪರ್ಸ್ ಒಂದೊಂದು ದಿಕ್ಕಿನಲ್ಲಿ ಪತ್ತೆಯಾಗಿತ್ತು. ಮೊಬೈಲ್ ಶರತ್ ಶವ ಸಿಕ್ಕ ಸ್ಥಳದಿಂದ 20 ಕಿಮೀ ದೂರದಲ್ಲಿ ಪತ್ತೆಯಾಗಿತ್ತು. ಇಂದು ಚಿಕ್ಕಮಗಳೂರು ಹಾಸನ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಗಳು, ಪೊಲೀಸರು ಅರಣ್ಯದಲ್ಲಿ ಹುಡುಕಾಟ ನಡೆಸುವಾಗ ಶರತ್ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಫಾರೆಸ್ಟ್ ಗಾರ್ಡ್ ನಿಗೂಢವಾಗಿ ನಾಪತ್ತೆ, 6 ದಿನ ಕಳೆದರೂ ಸಿಗದ ಸುಳಿವು
10 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆಯಾಗಿದ್ದು. ಶರತ್ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಜೊತೆಯಲ್ಲೇ ಕೆಲಸ ಮಾಡುತ್ತಿದ್ದವರೋ ಅಥವಾ ಕಾಡುಗಳ್ಳರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು. ಶರತ್ ಮರಣೋತ್ತರ ಪರೀಕ್ಷೆ ಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸದ್ಯ ಶರತ್ ಸಾವಿನ ಸುತ್ತ ನೂರಾರು ಅನುಮಾನ ವ್ಯಕ್ತವಾಗಿದ್ದು. ಸಖರಾಯಪಟ್ಟಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶರತ್ ಶವ ಸಿಕ್ಕ ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸೊಕೊ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Published On - 6:21 pm, Fri, 4 July 25




