AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಸಲು ಅರಣ್ಯದಲ್ಲಿ ನಿಗೂಢ ಕ್ಯಾಮರಾ ಪತ್ತೆ!

ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಖಾಸಗಿ ವ್ಯಕ್ತಿಗಳು ಎನ್‍ಜಿಒ ಹೆಸರಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಟ್ರ್ಯಾಪಿಂಗ್ ಕ್ಯಾಮರಾ ಅಳವಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡದಲ್ಲಿ ನಡೆದಿದೆ. ಈ ಪ್ರಕರಣ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಕಳೆದ 1 ವಾರದಿಂದಲೂ ಚುರ್ಚೆಗುಡ್ಡದ ಶ್ರೀಗಂಧ ರಸ್ತೆ ಮಾರ್ಗದ ಒಂದು ಕಿ.ಮೀ ದೂರದಲ್ಲಿ ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವಂತಹ ನೀರಿನಗುಂಡಿಯ ಬಳಿ ಮರಕ್ಕೆ ಕ್ಯಾಮರಾ ಅಳವಡಿಸಲಾಗಿದೆ. ಕಬ್ಬಿಣದ ಸರಪಳಿಯಲ್ಲಿ ಕ್ಯಾಮರವನ್ನು ಯಾರು ತೆಗೆದುಕೊಂಡು ಹೋಗದಂತೆ ಕಟ್ಟಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು […]

ಮೀಸಲು ಅರಣ್ಯದಲ್ಲಿ ನಿಗೂಢ ಕ್ಯಾಮರಾ ಪತ್ತೆ!
ಸಾಧು ಶ್ರೀನಾಥ್​
| Edited By: |

Updated on:Jun 27, 2020 | 6:29 PM

Share

ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಖಾಸಗಿ ವ್ಯಕ್ತಿಗಳು ಎನ್‍ಜಿಒ ಹೆಸರಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಟ್ರ್ಯಾಪಿಂಗ್ ಕ್ಯಾಮರಾ ಅಳವಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡದಲ್ಲಿ ನಡೆದಿದೆ. ಈ ಪ್ರಕರಣ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಕಳೆದ 1 ವಾರದಿಂದಲೂ ಚುರ್ಚೆಗುಡ್ಡದ ಶ್ರೀಗಂಧ ರಸ್ತೆ ಮಾರ್ಗದ ಒಂದು ಕಿ.ಮೀ ದೂರದಲ್ಲಿ ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವಂತಹ ನೀರಿನಗುಂಡಿಯ ಬಳಿ ಮರಕ್ಕೆ ಕ್ಯಾಮರಾ ಅಳವಡಿಸಲಾಗಿದೆ.

ಕಬ್ಬಿಣದ ಸರಪಳಿಯಲ್ಲಿ ಕ್ಯಾಮರವನ್ನು ಯಾರು ತೆಗೆದುಕೊಂಡು ಹೋಗದಂತೆ ಕಟ್ಟಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಈ ರೀತಿಯ ಕ್ಯಾಮರಾವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಇಟ್ಟಿರಬೇಕು ಎಂದು ಸುಮ್ಮನಾಗಿದ್ರು. ಆದ್ರೆ ಪದೇ ಪದೇ ಸ್ಥಳೀಯ ಎನ್‍ಜಿಒ ಒಂದರಲ್ಲಿ ಕೆಲಸ ಮಾಡುವವರು ಈ ಟ್ರ್ಯಾಪಿಂಗ್ ಕ್ಯಾಮರಾ ಬಳಿ ಬರುತ್ತಿರೋದನ್ನು ಗಮನಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ವಿಚಾರಿಸಿದಾಗ ಇಲಾಖೆ ಯಾವುದೇ ಕ್ಯಾಮರಾ ಅಳವಡಿಸದೇ ಇರುವುದು ತಿಳಿದಿದೆ.

ಟ್ರ್ಯಾಪಿಂಗ್ ಕ್ಯಾಮರಾ ಆ ಸ್ಥಳದಿಂದ ನಾಪತ್ತೆ ಸಾವಿರಾರು ಎಕರೆ ವ್ಯಾಪ್ತಿಯಲ್ಲಿರುವ ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಚಿರತೆ, ಹುಲಿ, ನರಿ, ಆನೆ, ಕರಡಿ ಸೇರಿದಂತೆ ಅಮೂಲ್ಯವಾದ ಶ್ರೀಗಂಧ ಮರಗಳಿವೆ. ಈ ಪ್ರದೇಶವನ್ನು ಕಾಡುಗಳ್ಳರು ಹಾಗೂ ಇನ್ನಿತರ ಚಟುವಟಿಕೆಗಳಿಂದ ರಕ್ಷಿಸಲು ವಲಯ ಅರಣ್ಯಾಧಿಕಾರಿಗಳು, ಉಪವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಅರಣ್ಯ ರಕ್ಷಕರು ಸಹ ಈ ಪ್ರದೇಶದ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ.

ಆದ್ರೂ ಈ ಪ್ರದೇಶದಲ್ಲಿ ಟ್ರ್ಯಾಪಿಂಗ್ ಕ್ಯಾಮರಾ ಅಳವಡಿಸಿ ಒಂದು ವಾರ ಕಳೆದ್ರೂ ಇಲಾಖೆ ಸಿಬ್ಬಂದಿಗೆ ಗೊತ್ತಾಗದೇ ಇರುವುದು ಅನುಮಾನ ಮೂಡಿಸಿದೆ. ಅಧಿಕಾರಿಗಳ ಕಣ್ಣಾಮುಚ್ಚಾಲೆ ವೇಳೆ ಕ್ಯಾಮರಾ ನಾಪತ್ತೆಯಾಗಿದ್ದು ಅಕ್ರಮವಾಗಿ ಮೀಸಲು ಅರಣ್ಯದಲ್ಲಿ ಕ್ಯಾಮರಾ ಅಳವಡಿಸಿರುವ ಬಗ್ಗೆ ಗೊತ್ತಾಗುತ್ತಿದ್ದಂತೆ ಟ್ರ್ಯಾಪಿಂಗ್ ಕ್ಯಾಮರಾ ಆ ಸ್ಥಳದಿಂದ ನಾಪತ್ತೆಯಾಗಿದೆ.

Published On - 6:28 pm, Sat, 27 June 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More