ಪೊಲೀಸ್ ಜೀಪನ್ನು ಕದ್ದು ಓಡಿಹೋದ ಕಳ್ಳ! ಮುಂದೇನಾಯ್ತು?
ಚಿಕ್ಕಮಗಳೂರು: ಮೇಲಿನ ಚಿತ್ರ ನೋಡಿ ಇದೇನು ಪೊಲೀಸ್ ಜೀಪ್ ಅಪಘಾತಕ್ಕೀಡಾಯಿತಾ? ಎಂದು ಗಾಬರಿ ಪಡಬೇಡಿ. ಏನಾಯ್ತೆಂದ್ರೆ ಪೊಲೀಸರು ತಮ್ಮ ಇಲಾಖೆಯ ಜೀಪ್ಅನ್ನು ನಗರದಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ನಿಲ್ಲಿಸಿದ್ದರು. ಅದನ್ನ ನೋಡಿದ ಖತರ್ನಾಕ್ ಕಳ್ಳನೊಬ್ಬ ಸೈಲೆಂಟಾ ಆಗಿ ವಾಹನವನ್ನ ಕದ್ದು ಸಾಗಿದ್ದಾನೆ. ಹೀಗೆ ಕದ್ದ ಜೀಪನ್ನ ಬರೋಬ್ಬರಿ 5 ಕಿ.ಮೀ ಓಡಿಸಿಕೊಂಡು ಹೋಗಿದ್ದಾನೆ. ದಾರಿ ಮಧ್ಯೆ ಸೈಡ್ ಮಿರರ್ನಿಂದ ನೋಡಲಾಗಿ ಪೊಲೀಸರು ಬೆನ್ನತ್ತಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಆಸಾಮಿ ಚಿಕ್ಕಮಗಳೂರು ಹೊರವಲಯದಲ್ಲಿ ಜೀಪ್ಬಿಟ್ಟು ಕಾಡಿನೊಳಗೆ ಓಡಿಹೋಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ […]
ಚಿಕ್ಕಮಗಳೂರು: ಮೇಲಿನ ಚಿತ್ರ ನೋಡಿ ಇದೇನು ಪೊಲೀಸ್ ಜೀಪ್ ಅಪಘಾತಕ್ಕೀಡಾಯಿತಾ? ಎಂದು ಗಾಬರಿ ಪಡಬೇಡಿ. ಏನಾಯ್ತೆಂದ್ರೆ ಪೊಲೀಸರು ತಮ್ಮ ಇಲಾಖೆಯ ಜೀಪ್ಅನ್ನು ನಗರದಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ನಿಲ್ಲಿಸಿದ್ದರು. ಅದನ್ನ ನೋಡಿದ ಖತರ್ನಾಕ್ ಕಳ್ಳನೊಬ್ಬ ಸೈಲೆಂಟಾ ಆಗಿ ವಾಹನವನ್ನ ಕದ್ದು ಸಾಗಿದ್ದಾನೆ.
ಹೀಗೆ ಕದ್ದ ಜೀಪನ್ನ ಬರೋಬ್ಬರಿ 5 ಕಿ.ಮೀ ಓಡಿಸಿಕೊಂಡು ಹೋಗಿದ್ದಾನೆ. ದಾರಿ ಮಧ್ಯೆ ಸೈಡ್ ಮಿರರ್ನಿಂದ ನೋಡಲಾಗಿ ಪೊಲೀಸರು ಬೆನ್ನತ್ತಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಆಸಾಮಿ ಚಿಕ್ಕಮಗಳೂರು ಹೊರವಲಯದಲ್ಲಿ ಜೀಪ್ಬಿಟ್ಟು ಕಾಡಿನೊಳಗೆ ಓಡಿಹೋಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪರಾರಿಯಾಗಿರುವ ಕಳ್ಳನಿಗಾಗಿ ಕಾಡುಮೇಡು ಸುತ್ತುತ್ತಿದ್ದಾರೆ.