ಪೊಲೀಸ್​ ಜೀಪನ್ನು ಕದ್ದು ಓಡಿಹೋದ ಕಳ್ಳ! ಮುಂದೇನಾಯ್ತು?

ಚಿಕ್ಕಮಗಳೂರು: ಮೇಲಿನ ಚಿತ್ರ ನೋಡಿ ಇದೇನು ಪೊಲೀಸ್​ ಜೀಪ್​ ಅಪಘಾತಕ್ಕೀಡಾಯಿತಾ? ಎಂದು ಗಾಬರಿ ಪಡಬೇಡಿ. ಏನಾಯ್ತೆಂದ್ರೆ ಪೊಲೀಸರು ತಮ್ಮ ಇಲಾಖೆಯ ಜೀಪ್​ಅನ್ನು ನಗರದಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ನಿಲ್ಲಿಸಿದ್ದರು. ಅದನ್ನ ನೋಡಿದ ಖತರ್ನಾಕ್​ ಕಳ್ಳನೊಬ್ಬ ಸೈಲೆಂಟಾ ಆಗಿ ವಾಹನವನ್ನ ಕದ್ದು ಸಾಗಿದ್ದಾನೆ. ಹೀಗೆ ಕದ್ದ ಜೀಪನ್ನ ಬರೋಬ್ಬರಿ 5 ಕಿ.ಮೀ ಓಡಿಸಿಕೊಂಡು ಹೋಗಿದ್ದಾನೆ. ದಾರಿ ಮಧ್ಯೆ ಸೈಡ್​ ಮಿರರ್​​ನಿಂದ ನೋಡಲಾಗಿ ಪೊಲೀಸರು ಬೆನ್ನತ್ತಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಆಸಾಮಿ ಚಿಕ್ಕಮಗಳೂರು ಹೊರವಲಯದಲ್ಲಿ ಜೀಪ್​ಬಿಟ್ಟು ಕಾಡಿನೊಳಗೆ ಓಡಿಹೋಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ […]

ಪೊಲೀಸ್​ ಜೀಪನ್ನು ಕದ್ದು ಓಡಿಹೋದ ಕಳ್ಳ! ಮುಂದೇನಾಯ್ತು?
ಸಾಧು ಶ್ರೀನಾಥ್​

Updated on: Dec 30, 2019 | 5:56 PM

ಚಿಕ್ಕಮಗಳೂರು: ಮೇಲಿನ ಚಿತ್ರ ನೋಡಿ ಇದೇನು ಪೊಲೀಸ್​ ಜೀಪ್​ ಅಪಘಾತಕ್ಕೀಡಾಯಿತಾ? ಎಂದು ಗಾಬರಿ ಪಡಬೇಡಿ. ಏನಾಯ್ತೆಂದ್ರೆ ಪೊಲೀಸರು ತಮ್ಮ ಇಲಾಖೆಯ ಜೀಪ್​ಅನ್ನು ನಗರದಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ನಿಲ್ಲಿಸಿದ್ದರು. ಅದನ್ನ ನೋಡಿದ ಖತರ್ನಾಕ್​ ಕಳ್ಳನೊಬ್ಬ ಸೈಲೆಂಟಾ ಆಗಿ ವಾಹನವನ್ನ ಕದ್ದು ಸಾಗಿದ್ದಾನೆ.

ಹೀಗೆ ಕದ್ದ ಜೀಪನ್ನ ಬರೋಬ್ಬರಿ 5 ಕಿ.ಮೀ ಓಡಿಸಿಕೊಂಡು ಹೋಗಿದ್ದಾನೆ. ದಾರಿ ಮಧ್ಯೆ ಸೈಡ್​ ಮಿರರ್​​ನಿಂದ ನೋಡಲಾಗಿ ಪೊಲೀಸರು ಬೆನ್ನತ್ತಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಆಸಾಮಿ ಚಿಕ್ಕಮಗಳೂರು ಹೊರವಲಯದಲ್ಲಿ ಜೀಪ್​ಬಿಟ್ಟು ಕಾಡಿನೊಳಗೆ ಓಡಿಹೋಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪರಾರಿಯಾಗಿರುವ ಕಳ್ಳನಿಗಾಗಿ ಕಾಡುಮೇಡು ಸುತ್ತುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us