ಕಾಫಿನಾಡಿನಲ್ಲಿ ಹುಲಿ ಹೆಜ್ಜೆ ಪತ್ತೆ, ಬೆಚ್ಚಿ ಬಿದ್ದ ಜನತೆ!
ಚಿಕ್ಕಮಗಳೂರು: ಕಾಫಿನಾಡಿನ ಜನತೆ ಕ್ಷಣ ಕ್ಷಣಕ್ಕೂ ಕಂಗಾಲ್ ಆಗಿದ್ದಾರೆ. ಮನೆಯಿಂದ ಹೊರ ಬರೋಕೂ ಆಗ್ತಿಲ್ಲ. ಹೊರಗಡೆ ಓಡಾಡೋಕೂ ಆಗ್ತಿಲ್ಲ. ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ. ಕ್ಷಣ ಕ್ಷಣಕ್ಕೂ ಭಯ ಜೀವ ಹಿಂಡುತ್ತಿದೆ. ಪ್ರಾಣ ಹೋದಂಗಾಗುತ್ತೆ. ಮನೆಬಿಟ್ಟು ಒಂದು ಹೆಜ್ಜೆ ಮುಂದಿಟ್ರೂ ಕಾಲು ನಡುಗುತ್ತೆ. ಆ ಪರಿ ಭಯ ಬೀಳೋಕೆ ಕಾರಣವೇ ಈ ಹೆಜ್ಜೆಗಳು. ಕಾಫಿ ತೋಟದಲ್ಲಿ ಬೀಡು ಬಿಟ್ಟ ಹುಲಿಗಳು: ಇದೇ.. ಇದೇ.. ಹೆಜ್ಜೆ ಗುರುತು ಈಗ ಕಾಫಿನಾಡಿನ ಜನರನ್ನು ಬೆಚ್ಚಿ ಬೀಳಿಸಿದೆ. ಅದ್ರಲ್ಲೂ ಮೂಡಿಗೆರೆ ತಾಲೂಕಿನ […]
ಚಿಕ್ಕಮಗಳೂರು: ಕಾಫಿನಾಡಿನ ಜನತೆ ಕ್ಷಣ ಕ್ಷಣಕ್ಕೂ ಕಂಗಾಲ್ ಆಗಿದ್ದಾರೆ. ಮನೆಯಿಂದ ಹೊರ ಬರೋಕೂ ಆಗ್ತಿಲ್ಲ. ಹೊರಗಡೆ ಓಡಾಡೋಕೂ ಆಗ್ತಿಲ್ಲ. ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ. ಕ್ಷಣ ಕ್ಷಣಕ್ಕೂ ಭಯ ಜೀವ ಹಿಂಡುತ್ತಿದೆ. ಪ್ರಾಣ ಹೋದಂಗಾಗುತ್ತೆ. ಮನೆಬಿಟ್ಟು ಒಂದು ಹೆಜ್ಜೆ ಮುಂದಿಟ್ರೂ ಕಾಲು ನಡುಗುತ್ತೆ. ಆ ಪರಿ ಭಯ ಬೀಳೋಕೆ ಕಾರಣವೇ ಈ ಹೆಜ್ಜೆಗಳು.
ಕಾಫಿ ತೋಟದಲ್ಲಿ ಬೀಡು ಬಿಟ್ಟ ಹುಲಿಗಳು: ಇದೇ.. ಇದೇ.. ಹೆಜ್ಜೆ ಗುರುತು ಈಗ ಕಾಫಿನಾಡಿನ ಜನರನ್ನು ಬೆಚ್ಚಿ ಬೀಳಿಸಿದೆ. ಅದ್ರಲ್ಲೂ ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿ, ಚಕ್ಕಮಕ್ಕಿ ಸೇರಿ ವಿವಿಧ ಹಳ್ಳಿಗಳ ಜನ ನಿದ್ದೆನೇ ಮಾಡ್ತಿಲ್ಲ. ಯಾಕಂದ್ರೆ, ಕಾಫಿ ತೋಟದಲ್ಲಿ ಹುಲಿಗಳು ಬೀಡು ಬಿಟ್ಟಿವೆ. ಆಗಾಗ ಒಂಟಿಯಾಗಿ ಓಡಾಡೋ ಜನರ ಮೇಲೆ ದಾಳಿ ಮಾಡ್ತಿವೆ. ಜಾನುವಾರುಗಳನ್ನು ಬಲಿಪಡೆಯುತ್ತಿವೆ. ಆದ್ರೆ, ಕಳೆದ 1ವಾರದಿಂದ ಹುಲಿ ಕಾಟ ಮಿತಿಮೀರಿದ್ದು, ಜನ ಓಡಾಡೋದಕ್ಕೂ ಹೆದರುತ್ತಿದ್ದಾರೆ. ಸಂಜೆ ಆದ್ರೆ ಸಾಕು ಮನೆ ಬಿಟ್ಟು ಹೊರಗೇ ಬರದಂತಾಗಿದೆ.
ಆತಂಕದಲ್ಲೇ ಕಾಲ ಕಳೆಯುತ್ತಿರುವ ಜನತೆ: ಈ ಭಾಗದಲ್ಲಿ ಅರಣ್ಯ ಇಲಾಖೆಯವರೇ ಹುಲಿಗಳನ್ನ ತಂದು ಬಿಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಇದರಿಂದಾಗಿ ಜನ ಯಾವಾಗ ಏನಾಗುತ್ತೋ ಅನ್ನೋ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಕಾಫಿ ತೋಟದಲ್ಲಿ ಕೆಲಸಕ್ಕೂ ಕೂಲಿ ಕಾರ್ಮಿಕರು ಬರ್ತಿಲ್ಲ. ಮಕ್ಕಳು ಶಾಲೆಗೂ ಹೋಗೋಕೂ ಆಗ್ತಿಲ್ಲ. ಕೂಡ್ಲೇ ಅರಣ್ಯಾಧಿಕಾರಿಗಳು ಹುಲಿ ಹಿಡಿಯುವ ಪ್ರಯತ್ನ ಮಾಡಬೇಕು ಅನ್ನೋದು ಕಾಫಿ ತೋಟದ ಮಾಲೀಕರು ಒತ್ತಾಯ. ಒಟ್ಟಾರೆ, ಹುಲಿ ಹೆಜ್ಜೆ ಪತ್ತೆಯಾಗಿರೋದು ಮಲೆನಾಡಿಗರನ್ನ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಜಾನುವಾರುಗಳ ಸಂಖ್ಯೆ ಕೂಡ ಕಡಿಮೆಯಾಗ್ತಿರೋದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.