ಶರಣಾಗಿರುವ ನಕ್ಸಲರನ್ನು ವಶಕ್ಕೆ ಪಡೆದ ಚಿಕ್ಕಮಗಳೂರು ಪೊಲೀಸ್, ನಾಳೆ ಕೋರ್ಟ್ ಎದುರು ಹಾಜರು
ಶರಣಾಗಿರುವ ನಕ್ಸಲರಿಗೆ ಎಲ್ಲ ರೀತಿಯ ನೆರವು ಒದಗಿಸುವ ಭರವಸೆಯನ್ನು ಸಿದ್ದರಾಮಯ್ಯ ಸರ್ಕಾರ ನೀಡಿದೆ. ಬಹಳ ವರ್ಷಗಳ ನಂತರ ನಕ್ಸಲ್ ಪಡೆಯೊಂದು ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಶರಣಾಗಿದೆ. ಶರಣಾಗಿರುವ ನಕ್ಸಲರಿಗೆ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಅಡಿ ತಲಾ ಮೂರು ಲಕ್ಷ ರೂ. ಸಹಾಯಧನ ನೀಡುವ ಘೋಷಣೆಯನ್ನು ಸರ್ಕಾರ ಮಾಡಿದೆ.
ಬೆಂಗಳೂರು: ಇಂದು ಸರ್ಕಾರಕ್ಕೆ ಶರಣಾಗಿರುವ 6 ನಕ್ಸಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುದ್ದಿಗೋಷ್ಠಿಯ ಬಳಿಕ ಚಿಕ್ಕಮಗಳೂರು ಪೊಲೀಸ್ ಮತ್ತು ಆ್ಯಂಟಿ ನಕ್ಸಲ್ ಫೋರ್ಸ್ ವಶಕ್ಕೆ ಪಡೆಯಿತು. ಪೊಲೀಸರ ವಶದಲ್ಲಿರುವ ನಕ್ಸಲರನ್ನು ಕಾರುಗಳಲ್ಲಿ ವಿಚಾರಣೆಗೆ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಇಲ್ಲಿ ನೋಡಬಹುದು. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಶರಣಾಗಿರುವ ನಕ್ಸಲರನ್ನು ಸ್ವಲ್ಪ ಹೊತ್ತು ವಿಚಾರಣೆ ನಡೆಸಿ ನಾಳೆ (ಗುರುವಾರ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಶಸ್ತ್ರ ಹೋರಾಟಕ್ಕೆ ಧುಮುಕಿದ್ಯಾಕೆ? ಶರಣಾಗುತ್ತಿರುವ 6 ನಕ್ಸಲರ ಬಗ್ಗೆ ಒಂದಿಷ್ಟು ಮಾಹಿತಿ