ಬೆಳಗಾವಿ: ಅಧಿಕಾರಿಗಳಿಗೆ ದೂರು ನೀಡಿ ಅಣ್ಣನು ತನ್ನ ತಂಗಿಯ ಬಾಲ್ಯ ವಿವಾಹವನ್ನು ತಡೆದ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಸಾಕಿ ಬೆಳೆಸಿದ ಅತ್ತೆ ಮಾವ ಬಾಲಕಿ ರಾಧಿಕಾಗೆ ಬಾಲ್ಯ ವಿವಾಹಕ್ಕೆ ಒತ್ತಾಯಿಸಿ 24 ವರ್ಷದ ರಮೇಶ್ ಎಂಬಾತನೊಂದಿಗೆ ಮದುವೆ ಮಾಡಲು ನಿರ್ಧರಿಸಿದರು. ವಿದ್ಯಾಭ್ಯಾಸ ಕಲಿಸೋದಾಗಿ ಹೇಳಿ ತಮ್ಮ ಹತ್ತಿರ ರಾಧಿಕಾಳನ್ನು ಇಟ್ಟುಕೊಂಡಿದ್ದ ಅತ್ತೆ ಮಾವನ ವಿರುದ್ಧ ಬಾಲಕಿಯ ಅಣ್ಣನಾದ ರಾಜು ಮಗೆನ್ನವರ್ ಸ್ಥಳೀಯ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ. ದೂರಿನನ್ವಯ ಅಧಿಕಾರಿಗಳು ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ಈ ವಿಷಯ ತಿಳಿಯುತ್ತಿದ್ದಂತೆ ವಧು-ವರನನ್ನು ಪೋಷಕರು ಬಚ್ಚಿಟ್ಟಿದಲ್ಲದೇ ಕುಟುಂಬಸ್ಥರು ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ.
ನಿಂತು ಹೋದ ಬಾಲ್ಯವಿವಾಹ:
ಅಪ್ರಾಪ್ತೆಯ ಮದುವೆಗೆ ಬ್ರೇಕ್ ಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು