‘ಸಮ್ಮಿಶ್ರ ಸರ್ಕಾರ ಬೀಳಲು ಆ ಹೋಟೆಲ್ ಗಿರಾಕಿಯೇ ಕಾರಣ; ನನ್ನ ಮೇಲೆ ಬರೀ ಹೊಟ್ಟೆ ಕಿಚ್ಚು’

ಸಮ್ಮಿಶ್ರ ಸರ್ಕಾರ ಬೀಳಲು ಆ ಹೋಟೆಲ್ ಗಿರಾಕಿಯೇ ಕಾರಣ. ಹೋಟೆಲ್​ನಲ್ಲಿ ಕುಳಿತು ರಾಜಕಾರಣ ಮಾಡಿದ್ದ HDK. ಸಿಎಂ ಆಗಿದ್ದ HDK ಶಾಸಕರ ಕೈಗೆ ಸಿಗುತ್ತಲೇ ಇರಲಿಲ್ಲ. HDK ಶಾಸಕರಿಗೆ ಸಿಕ್ಕಿದ್ರೆ ಶಾಸಕರು ಬಿಟ್ಟೋಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

‘ಸಮ್ಮಿಶ್ರ ಸರ್ಕಾರ ಬೀಳಲು ಆ ಹೋಟೆಲ್ ಗಿರಾಕಿಯೇ ಕಾರಣ; ನನ್ನ ಮೇಲೆ ಬರೀ ಹೊಟ್ಟೆ ಕಿಚ್ಚು’
ಸಿದ್ದರಾಮಯ್ಯ (ಎಡ); H.D.ಕುಮಾರಸ್ವಾಮಿ (ಬಲ)
KUSHAL V

|

Dec 18, 2020 | 5:16 PM

ಮೈಸೂರು: ನಾನು ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದೆ ಎಂದು ಹೇಳುತ್ತಾರೆ. ಬೀಳಿಸಬೇಕೆಂದಿದ್ದರೆ ಇವನನ್ನು ಸಿಎಂ ಮಾಡುತ್ತಲೇ ಇರಲಿಲ್ಲ ಎಂದು ಚಾಮುಂಡೇಶ್ವರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ವಿರೋಧ ಮಾಡಿದ್ದರೆ ಹೆಚ್​ಡಿಕೆ ಸಿಎಂ ಆಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ಬೀಳಲು ಆ ಹೋಟೆಲ್ ಗಿರಾಕಿಯೇ ಕಾರಣ. ಹೋಟೆಲ್​ನಲ್ಲಿ ಕುಳಿತು ರಾಜಕಾರಣ ಮಾಡಿದ್ದ HDK. ಸಿಎಂ ಆಗಿದ್ದ HDK ಶಾಸಕರ ಕೈಗೆ ಸಿಗುತ್ತಲೇ ಇರಲಿಲ್ಲ. HDK ಶಾಸಕರಿಗೆ ಸಿಕ್ಕಿದ್ರೆ ಶಾಸಕರು ಬಿಟ್ಟೋಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

‘HDK ಶಾಸಕರಿಗೆ ಸಿಕ್ಕಿದ್ರೆ ಶಾಸಕರು ಬಿಟ್ಟೋಗುತ್ತಿರಲಿಲ್ಲ’ HDK ಶಾಸಕರಿಗೆ ಸಿಕ್ಕಿದ್ರೆ ಶಾಸಕರು ಬಿಟ್ಟೋಗುತ್ತಿರಲಿಲ್ಲ. ಕಾಂಗ್ರೆಸ್​ ಪಕ್ಷದ 14 ಶಾಸಕರು ಬಿಟ್ಟು ಹೋಗುತ್ತಿರಲಿಲ್ಲ. ಜೆಡಿಎಸ್, ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ಬೀಳುತ್ತಿರಲಿಲ್ಲ ಅಂತಾ ಸಿದ್ದರಾಮಯ್ಯ ಹೇಳಿದರು. ಕುಣಿಯಲು ಆಗದವರು ನೆಲ ಡೊಂಕು ಅಂತಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಗಾದೆ ಮಾತಿನಂತಾಗಿದೆ. ಸಮ್ಮಿಶ್ರ ಸರ್ಕಾರ ಪತನವಾಗಲು ಕುಮಾರಸ್ವಾಮಿ ಕಾರಣ ಎಂದು ಸಿದ್ದರಾಮಯ್ಯ ನೇರವಾಗಿ ಕುಟುಕಿದರು,

‘ಬಿಜೆಪಿಯವರು ಬಲಗೈನವರನ್ನ ಮಂತ್ರಿ ಮಾಡಿದ್ದಾರಾ?’ ಇದೇ ವೇಳೆ ಬಿಜೆಪಿ ಮೇಲೆ ಹರಿಹಾಯ್ದ ಸಿದ್ದರಾಮಯ್ಯ ನಾವು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟವರು. ಬಿಜೆಪಿಯವರು ಬಲಗೈನವರನ್ನ ಮಂತ್ರಿ ಮಾಡಿದ್ದಾರಾ? ಒಬ್ಬರನ್ನಾದ್ರೂ ಬಲಗೈನವರನ್ನ ಸಚಿವರನ್ನಾಗಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಬಿಜೆಪಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ನಾವು ಸರಿಯಾಗಿ ಪ್ರಚಾರ ಮಾಡಿಲ್ಲ. ಸರಿಯಾಗಿ ಪ್ರಚಾರ ಮಾಡದಿರುವುದೇ ನಮ್ಮ ತಪ್ಪು ಕೆಲಸ. ಯಾವುದೇ ಜಾತಿ ಗುರಿಯಾಗಿಸಿ ಕಾರ್ಯಕ್ರಮ ಮಾಡಲಿಲ್ಲ. ಆದರೂ ನನ್ನ ಮೇಲೆ ಏಕೆ ವಿರೋಧ ಎಂದ ಸಿದ್ದರಾಮಯ್ಯ. ನಾನೇನು ಲೂಟಿ ಮಾಡಿದ್ದೀನಾ, ನಾನೇನು ಜೈಲಿಗೋಗಿಲ್ಲ. ನನ್ನ ಮೇಲೆ ಬರೀ ಹೊಟ್ಟೆ ಕಿಚ್ಚು. ಸಿದ್ದರಾಮಯ್ಯ 5 ವರ್ಷ ಪೂರೈಸಿದನಲ್ಲ ಎಂಬ ಹೊಟ್ಟೆಕಿಚ್ಚು ಎಂದು ಚಾಮುಂಡೇಶ್ವರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ನಮ್ಮವರೇ ಕೆಲವರಿಗೆ ನಾನು ಮತ್ತೆ CM ಆಗೋದು ಬೇಕಿರಲಿಲ್ಲ..ಸಹಿಸದೇ ನನ್ನನ್ನ ಸೋಲುವಂತೆ ಮಾಡಿದ್ರು’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada