AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓರ್ವ ವ್ಯಕ್ತಿ 19 ಖಾತೆಗಳ ಮೂಲಕ 11.48 ಕೋಟಿ ರೂ ವ್ಯವಹಾರ: ಪೊಲೀಸರ ರೋಚಕ ಕಾರ್ಯಚರಣೆ

ಶಿವಮೊಗ್ಗ ಸೈಬರ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸುವ ಮೂಲಕ ಆನ್‌ಲೈನ್ ವಂಚಕನನ್ನು ಬಂಧಿಸಿದ್ದಾರೆ. ವಿವಿಧ ಬ್ಯಾಂಕ್​​ಗಳಲ್ಲಿ ಬಳಕೆ ಆಗದ 19 ಖಾತೆಗಳನ್ನು ದುರ್ಬಳಿಕೆ ಮಾಡಿಕೊಂಡು ಆ ಮೂಲಕ ಕೋಟ್ಯಂತರ ರೂ ವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ. ಸೈಬರ್ ವಂಚಕರ ಜೊತೆ ಸಂಪರ್ಕ ಹೊಂದಿದ್ದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಓರ್ವ ವ್ಯಕ್ತಿ 19 ಖಾತೆಗಳ ಮೂಲಕ 11.48 ಕೋಟಿ ರೂ ವ್ಯವಹಾರ: ಪೊಲೀಸರ ರೋಚಕ ಕಾರ್ಯಚರಣೆ
ಬಂಧಿತ ಆರೋಪಿImage Credit source: tv9 kannada
Basavaraj Yaraganavi
| Edited By: |

Updated on:Feb 09, 2026 | 5:39 PM

Share

ಶಿವಮೊಗ್ಗ, ಫೆಬ್ರವರಿ 09: ಶಿವಮೊಗ್ಗ (shivamogga) ಸೈಬರ್ ಪೊಲೀಸರು ಕಾರ್ಯಾಚರಣೆ ನಡೆಸಿ ಆನ್​ಲೈನ್ ವಂಚಕ (cyber crime) ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರತ್ ಕುಮಾರ್ ಕೆ ಬಂಧಿತ ಆರೋಪಿ. ಸದ್ಯ ಬಂಧಿತನಿಂದ ಬಳಕೆ ಆಗದ ಬೇರೆ ಬೇರೆ ಜನರ ವಿವಿಧ ಬ್ಯಾಂಕ್​ಗಳ 18 ಪಾಸ್​ ಬುಕ್, 07 ಚೆಕ್ ಬುಕ್, 25 ಎಟಿಎಂ ಕಾರ್ಡ್, ಎರಡು ಮೊಬೈಲ್​​ ಸೇರಿದಂತೆ ಎರಡು ಕ್ಯೂ ಆರ್ ಕೋಡ್ ಸ್ಕ್ಯಾನರ್​​ ಸೀಜ್ ಮಾಡಿದ್ದಾರೆ. ಸೈಬರ್ ವಂಚನೆ ಕೇಸ್​ನಲ್ಲಿ ಆರೋಪಿಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

19 ಖಾತೆ, 96ಕ್ಕೂ ಹೆಚ್ಚು ಪ್ರಕರಣ, 55.43 ಕೋಟಿ ರೂ ವ್ಯವಹಾರ

ನಿತ್ಯ ಒಂದಲ್ಲಾ ಒಂದು ಆನ್​ಲೈನ್ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಜನರು ಯಾವುದೋ ಆಮಿಷಕ್ಕೊಳಗಾಗಿ ತಮ್ಮ ಖಾತೆಯಿಂದ ಲಕ್ಷಾಂತರ ರೂ ಕಳೆದುಕೊಳ್ಳುತ್ತಾರೆ. ಎಲ್ಲೋ ದೂರದಲ್ಲಿ ಕುಳಿತು ಜನರನ್ನು ವಂಚನೆ ಮಾಡುವ ದೊಡ್ಡ ಜಾಲವೇ ಇದೆ. ಈ 19 ಖಾತೆಗಳ ಕುರಿತು ದೇಶದಲ್ಲಿ 96ಕ್ಕೂ ಹೆಚ್ಚು ಪ್ರಕರಣಗಳಿವೆ. ಈ ಖಾತೆಗಳ ಮೂಲಕ 55.43 ಕೋಟಿ ರೂ ಹಣಕಾಸಿನ ವ್ಯವಹಾರ ಆಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ಇತ್ತ ಶಿವಮೊಗ್ಗ ಸೈಬರ್ ಪೊಲೀಸರಿಗೆ ಅನೇಕ ಆನ್​ಲೈನ್ ವಂಚನೆ ಪ್ರಕರಣಗಳ ಬಗ್ಗೆ ದೂರು ಬಂದಿದ್ದವು. ಸೈಬರ್ ಪೊಲೀಸ್ ತಂಡವು ಈ ವಂಚಕನ ಬೆನ್ನುಬಿದ್ದಿತ್ತು. ಶಿವಮೊಗ್ಗ ಹಳೇ ತುಂಗಾ ನಗರದ ಶರತ್ ಕುಮಾರ್ ಎಂಬ ವ್ಯಕ್ತಿ ಸೈಬರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಓದಿದ್ದು ಕೇವಲ ಎಸ್​ಎಸ್​ಎಲ್​​ಸಿ ಮಾತ್ರ. ತನ್ನ ಬುದ್ಧಿವಂತಿಕೆಯಿಂದ ಬಳಕೆ ಮಾಡದ 19 ವಿವಿಧ ಬ್ಯಾಂಕ್​ಗಳ ಖಾತೆಯನ್ನು ತಾನು ಬಳಕೆ ಮಾಡಿದ್ದಾನೆ. ಈ ಖಾತೆಗಳನ್ನು ತನ್ನದ ಎಂದು ನಿರ್ವಹಣೆ ಮಾಡಿದ್ದಾನೆ. ಈ ವಿವಿಧ 19 ಖಾತೆಗಳಿಂದ ಈತ 11.48 ಕೋಟಿ ರೂ ಹಣ ವರ್ಗಾವಣೆ ಮಾಡಿದ್ದಾನೆ.

19 ವಿವಿಧ ಬ್ಯಾಂಕ್ ಖಾತೆದಾರರನ್ನು ತನ್ನ ಬುದ್ದಿವಂತಿಕೆಯಿಂದ ಬಳಕೆ ಮಾಡಿಕೊಂಡಿದ್ದಾನೆ. ಹೀಗೆ ಯಾವುದೇ ಹಣಕಾಸಿನ ವ್ಯವಹಾರ ಇರದೇ ಇರುವ 19 ಖಾತೆಗಳನ್ನು ಈತ ಗುರುತಿಸಿದ್ದಾನೆ. ಬಳಿಕ ಅವರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಪಾಸ್ ಬುಕ್ ಮತ್ತು ಬ್ಯಾಂಕ್ ಕೊಟ್ಟಿರುವ ಸಿಮ್​ಗಳನ್ನು ಪಡೆದಿದ್ದಾನೆ. ಬಡ ಮತ್ತು ಖಾತೆ ಬಳಕೆ ಮಾಡಲು ಬಾರದ ಅನಕ್ಷರಸ್ಥರನ್ನು ಈತ ಟಾರ್ಗೆಟ್​ ಮಾಡಿದ್ದ. ಹೀಗೆ 19 ಖಾತೆಗಳನ್ನು ಈತ ಆಪರೇಟ್ ಮಾಡುತ್ತಿದ್ದ.

ಲಕ್ಷಾಂತರ ರೂ ವರ್ಗಾವಣೆ

ದೇಶದಲ್ಲಿ ಅನೇಕ ಆನ್​ಲೈನ್ ದೋಖಾ ಕೇಸ್​ಗಳು ನಡೆದಿವೆ. ಈ ಕೇಸ್​ಗಳಲ್ಲಿ ಬಳಕೆ ಮಾಡಿದ್ದು ಇದೇ 19 ಖಾತೆಗಳು. ಸದ್ಯ ಸೈಬರ್ ಪೊಲೀಸರು ವಂಚನೆ ಕೇಸ್​ಗಳ ತನಿಖೆ ಸಂದರ್ಭದಲ್ಲಿ ಶರತ್ ಕುಮಾರ್ ವಂಚನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಈತ ಮತ್ತೊಬ್ಬರ ಖಾತೆ ಬಳಕೆ ಮಾಡಿ ಅವರ ಖಾತೆಯಲ್ಲಿ ಲಕ್ಷಾಂತರ ರೂ ಹಣದ ವರ್ಗಾವಣೆ ಮಾಡಿದ್ದಾನೆ. ಈ ವಿಷಯ ಖಾತೆದಾರರನಿಗೆ ಗೊತ್ತಾಗುತ್ತಿದ್ದಂತೆ ಆತ ಶಾಕ್ ಆಗಿದ್ದ. ಮೋಸ ಹೋದ ವ್ಯಕ್ತಿಯೂ ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದ. ಸದ್ಯ ಸೈಬರ್ ಪೊಲೀಸರು ಆನ್​ಲೈನ್ ದೋಖಾ ಮಾಡುತ್ತಿದ್ದ ಶರತ್ ಕುಮಾರ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಾತೆ ನೀಡಿವರಿಗೂ ಸಂಕಷ್ಟ

ಓದಿದ್ದು ಎಸ್​ಎಸ್​ಎಲ್​ಸಿ, ಈತ ವ್ಯವಹಾರ ಮಾಡಿದ್ದು ಮಾತ್ರ ಕೋಟಿ ಕೋಟಿ. ಯಾರದೋ ದುಡ್ಡನ್ನು ಈತ ಮತ್ತು ಈತನ ವಂಚಕರ ಜಾಲ ಯಲ್ಲಮ್ಮನ ಜಾತ್ರೆ ಮಾಡಿದೆ. ಈಗ ಒಬ್ಬ ವಂಚಕ ಬಲೆಗೆ ಬಿದ್ದಿದ್ದಾನೆ. 19 ಖಾತೆ, 55 ಕೋಟಿಗೂ ಅಧಿಕ ವ್ಯವಹಾರದ ನಂಟಿನ ತನಿಖೆ ಚುರುಗೊಂಡಿದೆ. ಒಂದಿಷ್ಟು ಹಣದಾಸೆಗೆ ಖಾತೆ ವ್ಯವಹಾರವನ್ನು ಬಿಟ್ಟುಕೊಟ್ಟ ಖಾತೆದಾರರು ಈಗ ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:56 pm, Mon, 9 February 26

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​