AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಲೆಂಟೈನ್ಸ್‌ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್​​​ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ ‘ಸಖಿ ಆಟೋ’

ಬೆಂಗಳೂರಿನ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ 'ಸಖಿ ಆಟೋ' ಸೇವೆ ಫೆಬ್ರವರಿ 14, 2026 ರಂದು ಆರಂಭವಾಗುತ್ತಿದೆ. ಮಹಿಳಾ ಚಾಲಕಿಯರೇ ನಡೆಸುವ ಈ ವಿಶೇಷ ಸಾರಿಗೆ ವ್ಯವಸ್ಥೆಯಲ್ಲಿ ಸರ್ಜ್ ದರವಿಲ್ಲ. ಮೊದಲ 2 ಕಿ.ಮೀ.ಗೆ 50 ರೂ. ಶುಲ್ಕವಿದ್ದು, ಭವಿಷ್ಯದಲ್ಲಿ ಟ್ರಾನ್ಸ್ ಮಹಿಳೆಯರೂ ಚಾಲಕಿಯರಾಗಿ ಸೇರಿಕೊಳ್ಳಲಿದ್ದಾರೆ. ಇದು ಮಹಿಳಾ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಆಯ್ಕೆಯಾಗಿದೆ.

ವ್ಯಾಲೆಂಟೈನ್ಸ್‌ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್​​​ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ 'ಸಖಿ ಆಟೋ'
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Feb 09, 2026 | 5:00 PM

Share

ಬೆಂಗಳೂರು, ಫೆ. 9: ಪ್ರೇಮಿಗಳ ದಿನದಂದು ಮಹಿಳೆಯರಿಗೆ ಒಂದು ಗುಡ್​​​​ ನ್ಯೂಸ್​​ ಇದೆ. ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅತ್ಯಂತ ವಿನೂತನವಾದ ‘ಸಖಿ ಆಟೋ’ (Sakhi Auto) ಸೇವೆ ಶೀಘ್ರದಲ್ಲೇ ಆರಂಭವಾಗುತ್ತಿದೆ. ಈ ಸೇವೆಯು ಇದೇ ಫೆಬ್ರವರಿ 14, 2026 ರಂದು (ಪ್ರೇಮಿಗಳ ದಿನದಂದು) ಬೆಂಗಳೂರಿನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.ಇದು ಮಹಿಳಾ ಪ್ರಯಾಣಿಕರಿಗಾಗಿ, ಮಹಿಳಾ ಚಾಲಕಿಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆಯಾಗಿದೆ. ಆರಂಭದಲ್ಲಿ ಇದು ಬೆಳಿಗ್ಗೆ 6:00 ರಿಂದ ಮಧ್ಯರಾತ್ರಿ 12:00 ರವರೆಗೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಗನುಗುಣವಾಗಿ 24 ಗಂಟೆಗಳ ಕಾಲ ವಿಸ್ತರಿಸುವ ಯೋಜನೆಯಿದೆ ಎಂದು ಹೇಳಲಾಗಿದೆ.

ಇತರ ಆಪ್‌ಗಳಂತೆ ಮಳೆ ಅಥವಾ ಹೆಚ್ಚಿನ ದಟ್ಟಣೆಯ ಸಮಯದಲ್ಲಿ ದರ ಏರಿಕೆಯಾಗುವುದಿಲ್ಲ. ಭವಿಷ್ಯದಲ್ಲಿ ಟ್ರಾನ್ಸ್ ಮಹಿಳೆಯರನ್ನು (Trans women) ಕೂಡ ಚಾಲಕಿಯರನ್ನಾಗಿ ನೇಮಿಸಿಕೊಳ್ಳುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಮೊದಲ 2 ಕಿಲೋಮೀಟರ್‌ಗಳಿಗೆ 50 ರೂ. ಇರುತ್ತದೆ. ನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ ಇರುತ್ತದೆ. ಇದೀಗ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಮಾಡುತ್ತಿದೆ. ಅಲ್ಲಿಯವರೆಗೆ ride.sakhiwomen.in ಹಾಗೂ 63619 33364 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು.

ಇದನ್ನೂ ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ನೀಡಿದ ಸಚಿವ ಅಶ್ವಿನಿ ವೈಷ್ಣವ್

ಈ ವಿನೂತನ ಆಲೋಚನೆಯ ಹಿಂದೆ 24 ವರ್ಷದ ಉದ್ಯಮಿ ಕೃಷ್ಣವಿ ಪರೇಖ್ ಅವರ ಶ್ರಮವಿದೆ. ಮುಂಬೈನಲ್ಲಿ ತಾವು ಅನುಭವಿಸಿದ ಅಸುರಕ್ಷಿತ ಪ್ರಯಾಣದ ಅನುಭವಗಳೇ ಈ ಸಂಸ್ಥೆಯನ್ನು ಆರಂಭಿಸಲು ಅವರಿಗೆ ಪ್ರೇರಣೆಯಾಗಿದೆ. ಈಗಾಗಲೇ 21 ರಿಂದ 40 ವರ್ಷದ ಸುಮಾರು 50 ನುರಿತ ಮಹಿಳಾ ಚಾಲಕಿಯರು ಈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಮಹಿಳೆಯರಿಗೆ ಇದು ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯಾಗಲಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More