ಸರ್ಕಾರಿ ಶಾಲೆಗಳತ್ತ ಜನರನ್ನು ಸೆಳೆಯಲು ಬಿಸಿಲನಾಡಿನಲ್ಲಿ ವಿನೂತನ ಪ್ರಯತ್ನ

|

Updated on: Dec 13, 2019 | 9:45 PM

ರಾಯಚೂರು: ಖಾಸಗಿ ಶಾಲೆಗಳ ಹೈಟೆಕ್ ಟೆಕ್ನಾಲಜಿ ಮಧ್ಯೆ ಸರ್ಕಾರಿ ಶಾಲೆಗಳು ನಲುಗಿ ಹೋಗ್ತಿವೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಪೋಷಕರು ಗುಡ್ ಬೈ ಹೇಳಿದ್ದಾರೆ. ಈ ನಡುವೆ ಸರ್ಕಾರಿ ಶಾಲೆಗಳತ್ತ ಜನರನ್ನ ಸೆಳೆಯೋಕೆ ಅಂತ್ಲೇ ಮಕ್ಕಳ ಹಬ್ಬ ಮಾಡ್ಲಾಗಿತ್ತು. ಹಬ್ಬದಲ್ಲಿ ಮಕ್ಕಳಂತೂ ಫುಲ್ ಎಂಜಾಯ್ ಮಾಡಿದ್ರು. ಅದ್ಧೂರಿಯಾಗಿ ನಡೆದ ಮಕ್ಕಳ ವಿಜ್ಞಾನ ಹಬ್ಬ: ಅಂದ್ಹಾಗೆ ಬಿಸಿಲನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಾಂಗ್ಲಾ ನಿರಾಶ್ರಿತರ ಕ್ಯಾಂಪ್​ ಕಲರ್​ಫುಲ್ ಆಗಿತ್ತು. ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಭಾರತ ಜ್ಞಾನ […]

ಸರ್ಕಾರಿ ಶಾಲೆಗಳತ್ತ ಜನರನ್ನು ಸೆಳೆಯಲು ಬಿಸಿಲನಾಡಿನಲ್ಲಿ ವಿನೂತನ ಪ್ರಯತ್ನ
Follow us on

ರಾಯಚೂರು: ಖಾಸಗಿ ಶಾಲೆಗಳ ಹೈಟೆಕ್ ಟೆಕ್ನಾಲಜಿ ಮಧ್ಯೆ ಸರ್ಕಾರಿ ಶಾಲೆಗಳು ನಲುಗಿ ಹೋಗ್ತಿವೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಪೋಷಕರು ಗುಡ್ ಬೈ ಹೇಳಿದ್ದಾರೆ. ಈ ನಡುವೆ ಸರ್ಕಾರಿ ಶಾಲೆಗಳತ್ತ ಜನರನ್ನ ಸೆಳೆಯೋಕೆ ಅಂತ್ಲೇ ಮಕ್ಕಳ ಹಬ್ಬ ಮಾಡ್ಲಾಗಿತ್ತು. ಹಬ್ಬದಲ್ಲಿ ಮಕ್ಕಳಂತೂ ಫುಲ್ ಎಂಜಾಯ್ ಮಾಡಿದ್ರು.

ಅದ್ಧೂರಿಯಾಗಿ ನಡೆದ ಮಕ್ಕಳ ವಿಜ್ಞಾನ ಹಬ್ಬ:
ಅಂದ್ಹಾಗೆ ಬಿಸಿಲನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಾಂಗ್ಲಾ ನಿರಾಶ್ರಿತರ ಕ್ಯಾಂಪ್​ ಕಲರ್​ಫುಲ್ ಆಗಿತ್ತು. ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಭಾರತ ಜ್ಞಾನ ವಿಜ್ಞಾನ ಸಹಯೋಗದಲ್ಲಿ ನಡೆದ ಮಕ್ಕಳ ವಿಜ್ಞಾನ ಹಬ್ಬ ಅದ್ಧೂರಿಯಾಗಿತ್ತು. ಜಿಲ್ಲೆಯ 5 ತಾಲೂಕು ಕೇಂದ್ರಗಳಿಂದ ಸರ್ಕಾರಿ ಶಾಲೆಯ ನೂರಾರು ಮಕ್ಕಳು ಈ ಹಬ್ಬದಲ್ಲಿ ಭಾಗಿಯಾಗಿದ್ರು.

ಈ ವೇಳೆ ಶಾಲಾ ಮಕ್ಕಳು ಫುಲ್ ಆಕ್ಟೀವ್ ಆಗಿದ್ರು. ವಿಶೇಷ ಅಂದ್ರೆ, ಗ್ರಾಮೀಣ ಪ್ರದೇಶದಲ್ಲೂ ಬಹುತೇಕ ಪೋಷಕರು ಸರ್ಕಾರಿ ಶಾಲೆಗಳಿಗೆ ಗುಡ್ ಬೈ ಹೇಳ್ತಿದ್ದಾರೆ. ಖಾಸಗಿ ಶಾಲೆಗಳತ್ತ ಮುಖ ಮಾಡ್ತಿದ್ದಾರೆ. ಹೀಗಾಗಿ, ಈ ಮಕ್ಕಳ ಹಬ್ಬದ ಮೂಲಕ ಇಡೀ ಸಮುದಾಯವನ್ನೇ ಸರ್ಕಾರಿ ಶಾಲೆಗಳತ್ತ ಸೆಳೆಯುವ ವಿನೂತನ ಪ್ರಯತ್ನಕ್ಕೆ ಕೈ ಹಾಕಲಾಗಿತ್ತು.

ಶಾಲಾ ಮಕ್ಕಳದ್ದೇ ದರ್ಬಾರ್​:
ಇದಿಷ್ಟೇ ಅಲ್ಲ, ಹಬ್ಬದ ಮೂಲಕ ಪರಿಸರ ಮತ್ತು ನೀರಿನ ರಕ್ಷಣೆಯ ಬಗ್ಗೆಯೂ ಅರಿವು ಮೂಡಿಸಿದ್ರು. ಒಂದು ಮರ ಬೆಳೆಸಿದ್ರೆ, ಏನೆಲ್ಲಾ ಲಾಭವಾಗುತ್ತೆ. ಗಿಡ ಮರಗಳನ್ನ ರಕ್ಷಣೆ ಮಾಡೋದ್ರಿಂದ ಶುದ್ಧ ಗಾಳಿ ಹೇಗೆ ಸಿಗುತ್ತೆ ಅನ್ನೋದನ್ನ ತಿಳಿಸಿಕೊಟ್ರು. ಸಿಂಧನೂರಿನ ಬಾಂಗ್ಲಾ ನಿವಾಸಿಗಳ ಕ್ಯಾಂಪ್​​ನಲ್ಲಿ ನಡೆದ ಈ ಮಕ್ಕಳ ಹಬ್ಬದಲ್ಲಿ ಪೋಷಕರೂ ಭಾಗಿಯಾಗಿದ್ರು. ಮಕ್ಕಳಂತೂ ಫುಲ್ ಖುಷಿಯಾಗಿ ಕಾಲ ಕಳೆದ್ರು.