ಕಾಡಾನೆಗೆ ಬ್ರೇಕ್ ಹಾಕಲು ರೈಲ್ವೆ ಬ್ಯಾರಿಕೇಡ್ ಬೇಲಿ
ಹಾಸನ: ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರೋ ಗಜಪಡೆ ಕಾಟ ತಾರಕಕ್ಕೇರಿದೆ. ಜಿಲ್ಲೆಯ ಆಲೂರು ಹಾಗೂ ಸಕಲೇಶಪುರ ತಾಲೂಕಿನ ಕಾಫಿ, ಬಾಳೆ, ಅಡಕೆ ತೋಟಕ್ಕೆ ಲಗ್ಗೆಯಿಟ್ಟು ಬೆಳೆ ನಾಶಮಾಡ್ತಿದ್ದ ಕಾಡಾನೆ ಹಿಂಡು ಈಗ ಕೊಯ್ಲಿಗೆ ಬಂದಿರೋ ಭತ್ತದ ಗದ್ದೆಗಳನ್ನೂ ಬಿಡ್ತಿಲ್ಲ. ಅಂದ್ಹಾಗೆ, ಇದು ಒಂದು ದಿನದ ಸಮಸ್ಯೆಯಲ್ಲ. ಕಳೆದ ಹಲವು ದಶಗಳಿಂದ ಇದೇ ಗೋಳು. ಆನೆ-ಮಾನವನ ಸಂಘರ್ಷಕ್ಕೆ ದಶಕದಿಂದೀಚೆಗೆ 65 ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಹತ್ತಾರು ಆನೆಗಳು ಮೃತಪಟ್ಟಿವೆ. ಇದಕ್ಕೆ ಪರಿಹಾರ ಕಂಡು ಹಿಡಿಯುವ ಸಂಬಂಧ […]
ಹಾಸನ: ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರೋ ಗಜಪಡೆ ಕಾಟ ತಾರಕಕ್ಕೇರಿದೆ. ಜಿಲ್ಲೆಯ ಆಲೂರು ಹಾಗೂ ಸಕಲೇಶಪುರ ತಾಲೂಕಿನ ಕಾಫಿ, ಬಾಳೆ, ಅಡಕೆ ತೋಟಕ್ಕೆ ಲಗ್ಗೆಯಿಟ್ಟು ಬೆಳೆ ನಾಶಮಾಡ್ತಿದ್ದ ಕಾಡಾನೆ ಹಿಂಡು ಈಗ ಕೊಯ್ಲಿಗೆ ಬಂದಿರೋ ಭತ್ತದ ಗದ್ದೆಗಳನ್ನೂ ಬಿಡ್ತಿಲ್ಲ. ಅಂದ್ಹಾಗೆ, ಇದು ಒಂದು ದಿನದ ಸಮಸ್ಯೆಯಲ್ಲ. ಕಳೆದ ಹಲವು ದಶಗಳಿಂದ ಇದೇ ಗೋಳು.
ಆನೆ-ಮಾನವನ ಸಂಘರ್ಷಕ್ಕೆ ದಶಕದಿಂದೀಚೆಗೆ 65 ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಹತ್ತಾರು ಆನೆಗಳು ಮೃತಪಟ್ಟಿವೆ. ಇದಕ್ಕೆ ಪರಿಹಾರ ಕಂಡು ಹಿಡಿಯುವ ಸಂಬಂಧ ಆನೆ ಕಂದಕ, ಜೇನುಗೂಡು, ಅಲಾರಂ ವ್ಯವಸ್ಥೆ, ಎಲೆಕ್ಟ್ರಾನಿಕ್ ಡಿಸ್ಪ್ಲೇ ಸಹ ಅಳವಡಿಸಲಾಗಿತ್ತು. ನಾಗಾವರ ಬಳಿ ಆನೆಧಾಮ ನಿರ್ಮಾಣ ಮಾಡಿದ್ರೂ ಹೆಚ್ಚಿನ ಲಾಭವಾಗಿಲ್ಲ. ಇದೀಗ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಸುಮಾರು 4.24 ಕಿಮೀ ಉದ್ದದ ಬೇಲಿ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ.
ಆರಂಭದಲ್ಲಿ 18 ಕಿಲೋ ಮೀಟರ್ ರೈಲು ಕಂಬಿಯ ಬೇಲಿ ನಿರ್ಮಿಸಲು ಅರಣ್ಯ ಇಲಾಖೆ ಯೋಜಿಸಲಾಗಿತ್ತು. ಆದ್ರೀಗ ಬರೀ 4 ಕಿಲೋ ಮೀಟರ್ ಉದ್ದದ ಬೇಲಿ ನಿರ್ಮಾಣಕ್ಕೆ ಮುಂದಾಗಿರೋದು ಎಷ್ಟು ಸರಿ..? ಇದರಿಂದ ನಿಜವಾಗಲೂ ಸಮಸ್ಯೆ ಬಗೆಹರಿಯುತ್ತಾ ಅನ್ನೋ ಪ್ರಶ್ನೆಗಳು ಸಾರ್ವಜನಿಕರಲ್ಲಿ ಎದ್ದಿದೆ.
Published On - 7:26 am, Sat, 14 December 19