ಸರ್ಕಾರಿ ಶಾಲೆಗಳತ್ತ ಜನರನ್ನು ಸೆಳೆಯಲು ಬಿಸಿಲನಾಡಿನಲ್ಲಿ ವಿನೂತನ ಪ್ರಯತ್ನ

ರಾಯಚೂರು: ಖಾಸಗಿ ಶಾಲೆಗಳ ಹೈಟೆಕ್ ಟೆಕ್ನಾಲಜಿ ಮಧ್ಯೆ ಸರ್ಕಾರಿ ಶಾಲೆಗಳು ನಲುಗಿ ಹೋಗ್ತಿವೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಪೋಷಕರು ಗುಡ್ ಬೈ ಹೇಳಿದ್ದಾರೆ. ಈ ನಡುವೆ ಸರ್ಕಾರಿ ಶಾಲೆಗಳತ್ತ ಜನರನ್ನ ಸೆಳೆಯೋಕೆ ಅಂತ್ಲೇ ಮಕ್ಕಳ ಹಬ್ಬ ಮಾಡ್ಲಾಗಿತ್ತು. ಹಬ್ಬದಲ್ಲಿ ಮಕ್ಕಳಂತೂ ಫುಲ್ ಎಂಜಾಯ್ ಮಾಡಿದ್ರು. ಅದ್ಧೂರಿಯಾಗಿ ನಡೆದ ಮಕ್ಕಳ ವಿಜ್ಞಾನ ಹಬ್ಬ: ಅಂದ್ಹಾಗೆ ಬಿಸಿಲನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಾಂಗ್ಲಾ ನಿರಾಶ್ರಿತರ ಕ್ಯಾಂಪ್​ ಕಲರ್​ಫುಲ್ ಆಗಿತ್ತು. ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಭಾರತ ಜ್ಞಾನ […]

ಸರ್ಕಾರಿ ಶಾಲೆಗಳತ್ತ ಜನರನ್ನು ಸೆಳೆಯಲು ಬಿಸಿಲನಾಡಿನಲ್ಲಿ ವಿನೂತನ ಪ್ರಯತ್ನ
Follow us
ಸಾಧು ಶ್ರೀನಾಥ್​
|

Updated on: Dec 13, 2019 | 9:45 PM

ರಾಯಚೂರು: ಖಾಸಗಿ ಶಾಲೆಗಳ ಹೈಟೆಕ್ ಟೆಕ್ನಾಲಜಿ ಮಧ್ಯೆ ಸರ್ಕಾರಿ ಶಾಲೆಗಳು ನಲುಗಿ ಹೋಗ್ತಿವೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಪೋಷಕರು ಗುಡ್ ಬೈ ಹೇಳಿದ್ದಾರೆ. ಈ ನಡುವೆ ಸರ್ಕಾರಿ ಶಾಲೆಗಳತ್ತ ಜನರನ್ನ ಸೆಳೆಯೋಕೆ ಅಂತ್ಲೇ ಮಕ್ಕಳ ಹಬ್ಬ ಮಾಡ್ಲಾಗಿತ್ತು. ಹಬ್ಬದಲ್ಲಿ ಮಕ್ಕಳಂತೂ ಫುಲ್ ಎಂಜಾಯ್ ಮಾಡಿದ್ರು.

ಅದ್ಧೂರಿಯಾಗಿ ನಡೆದ ಮಕ್ಕಳ ವಿಜ್ಞಾನ ಹಬ್ಬ: ಅಂದ್ಹಾಗೆ ಬಿಸಿಲನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಾಂಗ್ಲಾ ನಿರಾಶ್ರಿತರ ಕ್ಯಾಂಪ್​ ಕಲರ್​ಫುಲ್ ಆಗಿತ್ತು. ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಭಾರತ ಜ್ಞಾನ ವಿಜ್ಞಾನ ಸಹಯೋಗದಲ್ಲಿ ನಡೆದ ಮಕ್ಕಳ ವಿಜ್ಞಾನ ಹಬ್ಬ ಅದ್ಧೂರಿಯಾಗಿತ್ತು. ಜಿಲ್ಲೆಯ 5 ತಾಲೂಕು ಕೇಂದ್ರಗಳಿಂದ ಸರ್ಕಾರಿ ಶಾಲೆಯ ನೂರಾರು ಮಕ್ಕಳು ಈ ಹಬ್ಬದಲ್ಲಿ ಭಾಗಿಯಾಗಿದ್ರು.

ಈ ವೇಳೆ ಶಾಲಾ ಮಕ್ಕಳು ಫುಲ್ ಆಕ್ಟೀವ್ ಆಗಿದ್ರು. ವಿಶೇಷ ಅಂದ್ರೆ, ಗ್ರಾಮೀಣ ಪ್ರದೇಶದಲ್ಲೂ ಬಹುತೇಕ ಪೋಷಕರು ಸರ್ಕಾರಿ ಶಾಲೆಗಳಿಗೆ ಗುಡ್ ಬೈ ಹೇಳ್ತಿದ್ದಾರೆ. ಖಾಸಗಿ ಶಾಲೆಗಳತ್ತ ಮುಖ ಮಾಡ್ತಿದ್ದಾರೆ. ಹೀಗಾಗಿ, ಈ ಮಕ್ಕಳ ಹಬ್ಬದ ಮೂಲಕ ಇಡೀ ಸಮುದಾಯವನ್ನೇ ಸರ್ಕಾರಿ ಶಾಲೆಗಳತ್ತ ಸೆಳೆಯುವ ವಿನೂತನ ಪ್ರಯತ್ನಕ್ಕೆ ಕೈ ಹಾಕಲಾಗಿತ್ತು.

ಶಾಲಾ ಮಕ್ಕಳದ್ದೇ ದರ್ಬಾರ್​: ಇದಿಷ್ಟೇ ಅಲ್ಲ, ಹಬ್ಬದ ಮೂಲಕ ಪರಿಸರ ಮತ್ತು ನೀರಿನ ರಕ್ಷಣೆಯ ಬಗ್ಗೆಯೂ ಅರಿವು ಮೂಡಿಸಿದ್ರು. ಒಂದು ಮರ ಬೆಳೆಸಿದ್ರೆ, ಏನೆಲ್ಲಾ ಲಾಭವಾಗುತ್ತೆ. ಗಿಡ ಮರಗಳನ್ನ ರಕ್ಷಣೆ ಮಾಡೋದ್ರಿಂದ ಶುದ್ಧ ಗಾಳಿ ಹೇಗೆ ಸಿಗುತ್ತೆ ಅನ್ನೋದನ್ನ ತಿಳಿಸಿಕೊಟ್ರು. ಸಿಂಧನೂರಿನ ಬಾಂಗ್ಲಾ ನಿವಾಸಿಗಳ ಕ್ಯಾಂಪ್​​ನಲ್ಲಿ ನಡೆದ ಈ ಮಕ್ಕಳ ಹಬ್ಬದಲ್ಲಿ ಪೋಷಕರೂ ಭಾಗಿಯಾಗಿದ್ರು. ಮಕ್ಕಳಂತೂ ಫುಲ್ ಖುಷಿಯಾಗಿ ಕಾಲ ಕಳೆದ್ರು.

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ