Vaccine for Children: ಕೋವಿಡ್​ 3ನೇ ಅಲೆ ಭೀತಿ ಮಧ್ಯೆ ಮಕ್ಕಳು ಮರಳಿ ಶಾಲೆಗೆ; ಮಕ್ಕಳಿಗೆ ತಕ್ಷಣಕ್ಕೆ ಬೇಕಿದೆ ಕೊರೊನಾ ವ್ಯಾಕ್ಸಿನ್

| Updated By: ಸಾಧು ಶ್ರೀನಾಥ್​

Updated on: Aug 21, 2021 | 10:47 AM

ವ್ಯಾಕ್ಸಿನ್ ತೆಗೆದುಕೊಳ್ಳದವರ ಮೂಲಕ ಕೊರೊನಾ ಹರಡಿರುವುದು ಅಮೆರಿಕದಂತಹ ರಾಷ್ಟ್ರಗಳ ನಿದರ್ಶನ ಎದುರಿಗೇ ಇದೆ. ಇದರ ಜೊತೆಗೆ ವೈರಸ್ ಮ್ಯುಟೆಂಟ್​ ಆಗಿ ಹೊಸ ಅವತಾರದಲ್ಲಿ ವಕ್ಕರಿಸಿದರೆ ಮಾಡುವುದೇನು ಎಂಬ ಆತಂಕವಿರುವಾಗ ತಕ್ಷಣಕ್ಕೆ ಮಕ್ಕಳಿಗೆ ವ್ಯಾಕ್ಸಿನ್​ ಹಾಕಿಸುವ ಅಭಿಯಾನ ಶುರು ಮಾಡಬೇಕು. ಏಕೆಂದ್ರೆ ದೇಶದಾದ್ಯಂತ ಶೇ. 60ರಷ್ಟು ಮಕ್ಕಳು ವ್ಯಾಕ್ಸಿನ್​ಗಾಗಿ ಕಾಯುತ್ತಿದ್ದಾರೆ.

Vaccine for Children: ಕೋವಿಡ್​ 3ನೇ ಅಲೆ ಭೀತಿ ಮಧ್ಯೆ ಮಕ್ಕಳು ಮರಳಿ ಶಾಲೆಗೆ; ಮಕ್ಕಳಿಗೆ ತಕ್ಷಣಕ್ಕೆ ಬೇಕಿದೆ ಕೊರೊನಾ ವ್ಯಾಕ್ಸಿನ್
ಜೈ ಕೋವ್ ಡಿ ಲಸಿಕೆ
Follow us on

ಜೈಡಸ್​ ಕ್ಯಾಡಿಲಾ ಸಂಸ್ಥೆಯು ಕೊನೆಗೂ ಮಕ್ಕಳಿಗಾಗಿ ಅಂದ್ರೆ 12 ರಿಂದ 18 ವರ್ಷದ ಮಕ್ಕಳಿಗಾಗಿ ಕೊರೊನಾ ವ್ಯಾಕ್ಸಿನ್​ ಕಂಡು ಹಿಡಿಯುವಲ್ಲಿ ಸಫಲವಾಗಿದೆ. ಇದಕ್ಕೆ ಬೆಳಗಾವಿ ಮತ್ತು ಮೈಸೂರು ಆಸ್ಪತ್ರೆಗಳಲ್ಲಿ ಪ್ರಯೋಗಗಳು ಯಶಸ್ವಿಯಾಗಿ ನಡೆದವು ಎಂಬುದು ಗಮನಾರ್ಹ ಸಂಗತಿಯಾಗಿದೆ. ನಿನ್ನೆಯಷ್ಟೇ ಕೇಂದ್ರ ಔಷಧ ನಿಯಂತ್ರಣ ಇಲಾಖೆಯು (DCGI) ಜೈಡಸ್​ ಕ್ಯಾಡಿಲಾ (Zydus Cadila) ಸಂಸ್ಥೆಯ ಕೊರೊನಾ ವ್ಯಾಕ್ಸಿನ್​ ಅನ್ನು ( COVID-19 DNA vaccine) 3 ಡೋಸ್​​ಗಳಲ್ಲಿ ಮಕ್ಕಳಿಗೆ ನೀಡಬಹುದು ಎಂದು ಘೋಷಿಸಿದೆ. ಇದು ಮಕ್ಕಳಿಗಾಗಿ ಸಿದ್ಧಪಡಿಸಲಾದ ಮೊದಲ ಕೊರೊನಾ ವ್ಯಾಕ್ಸಿನ್ (ZyCoV-D covid vaccine)​. ಕೋವಿಡ್​ 3ನೇ ಅಲೆಯ ಭೀತಿ ಎದುರಿಗೇ ಇರುವಾಗ ಈ ವ್ಯಾಕ್ಸಿನ್ ಬಂದಿರುವುದು ಸ್ವಾಗತಾರ್ಹ.

ಮಳೆಗಾಲ, ಚಳಿಗಾಲದಲ್ಲಿ ಕೋವಿಡ್​ 3ನೇ ಅಲೆಯ ಭೀತಿ ಎದುರಾಗಿದೆ. ಈ ಮಧ್ಯೆ, ದೇಶದಲ್ಲಿ ಕರ್ನಾಟಕ ಸೇರಿದಂತೆ ಕನಿಷ್ಠ 11 ರಾಜ್ಯಗಳಲ್ಲಿ ಶಾಲೆ ಕಾಲೇಜುಗಳು ಪುನರಾರಂಭಕ್ಕೆ ಅಂಕಿತವಾಗಿವೆ. ಒಂದೂವರೆ ವರ್ಷ ರಜೆ ಬಳಿಕ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳು ಒಮ್ಮೆಗೇ ಶಾಲೆಗಳಿಗೆ ಬರತೊಡಗಿದರೆ ವೈರಸ್​​ಗೆ ಇದೇ ಆಶ್ರಯ ತಾಣಗಳಾಗಲಿವೆ ಎಂಬ ಆತಂಕವಿದೆ.

ಅನೇಕ ರಾಜ್ಯಗಳು ಮಕ್ಕಳಿಗಾಗಿಯೇ ವಿಶೇಷ ಕೋವಿಡ್​ ಸೆಂಟರ್​​ಗಳನ್ನು ತೆರೆಯುವುದು ಸೇರಿದಂತೆ ಈಗಾಗಲೇ ಅನೇಕ ಮೂಲಸೌಕರ್ಯಗಳನ್ನು ಜಾಗೃತಾವಸ್ಥೆಯಲ್ಲಿಟ್ಟಿವೆ. ಇದರ ಜೊತೆಗೆ ಮಕ್ಕಳಿಗೆ ಈ ಸಂದರ್ಭದಲ್ಲಿ ಕೊರೊನಾ ವ್ಯಾಕ್ಸಿನ್ ನೀಡಿದರೆ ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಸಬಹುದು ಎಂಬ ಮಾತು ಸಹಜ. ಹಾಗಾಗಿಯೆ ಈಗ ಜೈಡಸ್​ ಕ್ಯಾಡಿಲಾ ಸಂಸ್ಥೆ ಕಂಡುಹಿಡಿದಿರುವ ​ವ್ಯಾಕ್ಸಿನ್ ಮಕ್ಕಳಿಗೆ ಶೀಘ್ರವೇ ಲಭ್ಯವಾಗುವಂತೆ ಮಾಡಬೇಕಿದೆ.

ವ್ಯಾಕ್ಸಿನ್ ತೆಗೆದುಕೊಳ್ಳದವರ ಮೂಲಕ ಕೊರೊನಾ ಹರಡಿರುವುದು ಅಮೆರಿಕದಂತಹ ರಾಷ್ಟ್ರಗಳ ನಿದರ್ಶನ ಎದುರಿಗೇ ಇದೆ. ಇದರ ಜೊತೆಗೆ ವೈರಸ್ ಮ್ಯುಟೆಂಟ್​ ಆಗಿ ಹೊಸ ಅವತಾರದಲ್ಲಿ ವಕ್ಕರಿಸಿದರೆ ಮಾಡುವುದೇನು ಎಂಬ ಆತಂಕವಿರುವಾಗ ತಕ್ಷಣಕ್ಕೆ ಮಕ್ಕಳಿಗೆ ವ್ಯಾಕ್ಸಿನ್​ ಹಾಕಿಸುವ ಅಭಿಯಾನ ಶುರು ಮಾಡಬೇಕು. ಏಕೆಂದ್ರೆ ದೇಶದಾದ್ಯಂತ ಶೇ. 60ರಷ್ಟು ಮಕ್ಕಳು ವ್ಯಾಕ್ಸಿನ್​ಗಾಗಿ ಕಾಯುತ್ತಿದ್ದಾರೆ.

ಕೊರೊನಾ 3ನೇ ಅಲೆ; ಮಕ್ಕಳಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ

(children to retun to schools amid Covid Third Wave Threat Zydus Cadila COVID-19 DNA vaccine heplful)

Published On - 10:45 am, Sat, 21 August 21