ಚಿತ್ರದುರ್ಗ: ಆ್ಯಕ್ಸಿಜನ್​ ಖಾಲಿಯಾಗಿ ದಾರಿ ಮಧ್ಯ ಕೊರೊನಾ ಸೋಂಕು ತಗುಲಿದ್ದ ವೃದ್ಧೆ ಸಾವು

|

Updated on: Apr 05, 2021 | 1:29 PM

ಆ್ಯಂಬುಲೆನ್ಸ್​ನಲ್ಲಿ ಆಕ್ಸಿಜನ್ ಮುಗಿದು ದಾರಿಯಲ್ಲಿಯೇ ಕೊರೊನಾ​ ಸೋಂಕು ತಗುಲಿದ್ದ ವೃದ್ಧೆ ಸಾವಿಗೀಡಾದ ಘಟನೆ ನಡೆದಿದೆ.

ಚಿತ್ರದುರ್ಗ: ಆ್ಯಕ್ಸಿಜನ್​ ಖಾಲಿಯಾಗಿ ದಾರಿ ಮಧ್ಯ ಕೊರೊನಾ ಸೋಂಕು ತಗುಲಿದ್ದ ವೃದ್ಧೆ ಸಾವು
ಮಹದೇವಮ್ಮ
Follow us on

ಚಿತ್ರದುರ್ಗ: ಆ್ಯಂಬುಲೆನ್ಸ್​ನಲ್ಲಿ ಆಕ್ಸಿಜನ್ ಮುಗಿದು ದಾರಿಯಲ್ಲಿಯೇ ಕೊವಿಡ್​ ಸೋಂಕು ತಗುಲಿದ್ದ ವೃದ್ಧೆಯೋರ್ವರು ಅಸುನೀಗಿದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯ ಆ್ಯಂಬುಲೆನ್ಸ್​ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಹಿರಿಯೂರು ಪಟ್ಟಣದ ವೇದಾವತಿ ಬಡಾವಣೆಯ 65 ವರ್ಷದ ವೃದ್ಧೆ ಮಹದೇವಮ್ಮರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಈ ವೇಳೆ ದಾರಿಯ ಮಧ್ಯೆ ಆಕ್ಸಿಜನ್ ಖಾಲಿಯಾದ ಹಿನ್ನೆಲೆಯಲ್ಲಿ ವೃದ್ಧೆ ದಾರಿಯಲ್ಲಿಯೇ ಮರಣ ಹೊಂದಿದ್ದಾರೆ. ಜಿಲ್ಲಾಸ್ಪತ್ರೆ ಆ್ಯಂಬುಲೆನ್ಸ್​ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ವೃದ್ಧೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಆ್ಯಂಬುಲೆನ್ಸ್​ನಲ್ಲಿ ಆ್ಯಕ್ಸಿಜನ್​ ವ್ಯವಸ್ಥೆಗೆಂದು ಚಾಲಕ 2 ಸಾವಿರ ರೂಪಾಯಿ ಲಂಚ ಪಡೆದಿದ್ದರು. ಚಿತ್ರದುರ್ಗದಿಂದ 10 ಕಿಲೋಮೀಟರ್​ ದೂರ ಕ್ರಮಿಸಿ ಆಗಿತ್ತು. ದಾರಿಯ ಮಧ್ಯದಲ್ಲಿ ಈ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾವಿಗೀಡಾದ ವೃದ್ಧೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಾಲ್ಕು ದಿನಗಳ ಹಿಂದೆ ಹಿರಿಯೂರು ಮೂಲದ ಕೊವಿಡ್ ರೋಗಿ ಅಡ್ಮಿಟ್ ಆಗಿದ್ದರು. ಪರಿಸ್ಥಿತಿ ಚಿಂತಾಜನಕ ಆಗಿರುವ ಕಾರಣ ಬೇರೆಡೆ ಸ್ಥಳಾಂತರಿಸುವುದು ಬೇಡ ಎಂದು ಸಲಹೆ ನೀಡಿದ್ದೆವು. ಕುಟುಂಬದವರು ದಾವಣಗೆರೆಗೆ ಸ್ಥಳಾಂತರಿಸಲು ಮುಂದಾದಾಗ ಅಂಬುಲೆನ್ಸ್​ನಲ್ಲಿ ಮೃತಪಟ್ಟಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ. ಅಂಬುಲೆನ್ಸ್ ಚಾಲಕ ಮುಖ್ತಾರ್ ಡೀಸೆಲ್​ಗಾಗಿ ಹಣ ಕೇಳಿದ್ದಾನೆ. ಆಸ್ಪತ್ರೆ ನರ್ಸ್ ದೀಪಿಕಾಗೆ ನಿರ್ಲಕ್ಷ ಸಲ್ಲದು ಎಂದು ವಾರ್ನಿಂಗ್ ಮಾಡಿದ್ದೇನೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಬಸವರಾಜ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Coronavirus India Update: ಒಂದೇ ದಿನ 1 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಕರಣ

ವಿಚಾರಣೆಗೆ 15 ದಿನ ಕ್ವಾರಂಟೈನ್?: ‘ರಮೇಶ್ ಜಾರಕಿಹೊಳಿಗೆ ಕೊರೊನಾ ಇದೆ’ ಎಂದ ಸಚಿವ ಭೈರತಿ ಬಸವರಾಜು

Published On - 11:16 am, Mon, 5 April 21