ಅಂತರರಾಜ್ಯ ಅಡಿಕೆ ವ್ಯಾಪಾರಿಯ 1 ಕೋಟಿ ಹಣ ಕಳವು ಪ್ರಕರಣ, ಡ್ರೈವರ್​​ ಸೇರಿ ಮೂವರ ಬಂಧನ

ಅಂತರರಾಜ್ಯ ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸಂತೋಷ್ ಸೇರಿದಂತೆ ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕಾರ್​ ಡ್ರೈವರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಡುತ್ತಾನೆ.

ಅಂತರರಾಜ್ಯ ಅಡಿಕೆ ವ್ಯಾಪಾರಿಯ 1 ಕೋಟಿ ಹಣ ಕಳವು ಪ್ರಕರಣ, ಡ್ರೈವರ್​​ ಸೇರಿ ಮೂವರ ಬಂಧನ
ಬಂಧನ
Edited By: ವಿವೇಕ ಬಿರಾದಾರ

Updated on: Nov 02, 2023 | 9:39 AM

ಬೆಂಗಳೂರು ನ.02: ಅಂತರರಾಜ್ಯ ಅಡಿಕೆ (Betelnut) ವ್ಯಾಪಾರಿಯ ಒಂದು ಕೋಟಿ ರೂಪಾಯಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸಂತೋಷ್ ಸೇರಿದಂತೆ ಮೂವರನ್ನು ಉಪ್ಪಾರಪೇಟೆ ಪೊಲೀಸರು (Police) ಬಂಧಿಸಿದ್ದಾರೆ. ಅಕ್ಟೋಬರ್ 7 ರಂದು ಹೆಚ್​​.ಎಸ್​. ಉಮೇಶ್ ಅಡಿಕೆ ವ್ಯಾಪಾರ ಸಲುವಾಗಿ ನೀಲಿ ಬಣ್ಣದ ಬ್ಯಾಗಿನಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿಯನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಚಿತ್ರದುರ್ಗದಲ್ಲಿ (Chitradurga) ಅಡಿಕೆ ಕೊಂಡುಕೊಳ್ಳಲು ಬರುತ್ತಾರೆ.

ಆದರೆ ಉಮೇಶ್​​ ಅವರಿಗೆ ಅಲ್ಲಿ ಅಡಿಕೆ ಸಿಗುವುದಿಲ್ಲ. ನಂತರ ಶಿರಾದಲ್ಲಿ ಅಡಿಕೆ ಕೊಂಡುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಸಾಧ್ಯವಾಗುವುದಿಲ್ಲ. ಕೊನೆಗೆ ತುಮಕೂರಿನಲ್ಲಾದರೂ ಸಿಗಬಹುದಾ ಎಂದು ಬಂದರೇ ಇಲ್ಲಿಯೂ ಕೂಡ ಉಮೇಶ್​ ಅವರಿಗೆ ಅಡಿಕೆ ಸಿಗುವುದಿಲ್ಲ.

ಬಳಿಕ ಬೆಂಗಳೂರಿನ ಚಂದ್ರಾಲೇಔಟ್​ನಲ್ಲಿರುವ ಪಿಜಿಯೊಂದರಲ್ಲಿರುವ ತಮ್ಮ ಮತ್ತು ತಮ್ಮ ಸ್ನೇಹಿತರ ಮಕ್ಕಳನ್ನು ಭೇಟಿಯಾಗಿ ಹೋಗೋಣ ಎಂದು ರಾಜಧಾನಿಗೆ ಬರುತ್ತಾರೆ. ಹೀಗೆ ಬಂದವರು ನೇರವಾಗಿ ಗಾಂಧೀ‌ನಗರಕ್ಕೆ ಬರುತ್ತಾರೆ. ಗಾಂಧಿನಗರದ ಹೊಟೇಲ್​​ವೊಂದರ​ ಮುಂಭಾಗದಲ್ಲಿ ಕಾರು ನಿಲ್ಲಿಸಿ, ಊಟ ಮಾಡುತ್ತಾರೆ.

ಇದನ್ನೂ ಓದಿ: ಧಾರವಾಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್​​​

ಆ ಬಳಿಕ ಚಂದ್ರಾಲೇಔಟ್​​ನಲ್ಲಿ ಮಕ್ಕಳನ್ನು ಭೇಟಿಯಾಗಿ ಚಿತ್ರದುರ್ಗಕ್ಕೆ ವಾಪಸ್​ ಹೊರಡುತ್ತಿರುತ್ತಾರೆ. ದಾರಿ ಮಧ್ಯೆ ದಾಬಸ್ ಪೇಟೆಯಲ್ಲಿ ಟೀ ಕುಡಿದು, ಚಿತ್ರದುರ್ಗದಕ್ಕೆ ತೆರಳುತ್ತಾರೆ. ತಮ್ಮೂರಾದ ಭೀಮಸಮುದ್ರಕ್ಕೆ ರಾತ್ರಿ 7:45ಕ್ಕೆ ತಲುಪುತ್ತಾರೆ. ಆಗ ಕಾರಿನ ಡಿಕ್ಕಿ ತೆಗೆದು ನೋಡಿದಾಗ ಹಣ ಮಾಯವಾಗಿರುತ್ತೆ.

ನಂತರ ಉಮೇಶ್​ ವಾರ, 10 ದಿವಸ ಬಿಟ್ಟು ಕಾರು ಡ್ರೈವರ್​​ ಮೇಲೆ ಸಂಶಯ ವ್ಯಕ್ತಪಡಿಸಿ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕಾರ್​ ಡ್ರೈವರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಡುತ್ತಾನೆ. ಪೊಲೀಸರಿಂದ ತನಿಖೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us