ದೇವಸ್ಥಾನದ ಪೂಜೆ ಮತ್ತು ಹಣಕಾಸಿನ ವಿಚಾರಕ್ಕೆ ಹಲ್ಲೆ; ರಂಗವ್ವನಹಳ್ಳಿಯ ದುರ್ಗಾಂಬಿಕಾ ದೇಗುಲದ ಪೂಜಾರಿ ಸಾವು

ದುರ್ಗಾಂಬಿಕಾ ದೇವಸ್ಥಾನದ ಪೂಜೆ ಮತ್ತು ಹಣಕಾಸಿನ ವಿಚಾರಕ್ಕೆ ಪೂಜಾರಿ ಜಯರಾಮಪ್ಪ ಮತ್ತು ಕೆಲವರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಪೂಜಾರಿ ಮೇಲೆ ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ಮಾಡಲಾಗಿತ್ತು. ಹಲ್ಲೆಗೊಳಗಾದ ಪೂಜಾರಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ದೇವಸ್ಥಾನದ ಪೂಜೆ ಮತ್ತು ಹಣಕಾಸಿನ ವಿಚಾರಕ್ಕೆ ಹಲ್ಲೆ; ರಂಗವ್ವನಹಳ್ಳಿಯ ದುರ್ಗಾಂಬಿಕಾ ದೇಗುಲದ ಪೂಜಾರಿ ಸಾವು
ದೇವಸ್ಥಾನದ ಪೂಜೆ ಮತ್ತು ಹಣಕಾಸಿನ ವಿಚಾರಕ್ಕೆ ಹಲ್ಲೆ; ರಂಗವ್ವನಹಳ್ಳಿಯ ದುರ್ಗಾಂಬಿಕಾ ದೇಗುಲದ ಪೂಜಾರಿ ಸಾವು
Updated By: ಆಯೇಷಾ ಬಾನು

Updated on: Jan 23, 2022 | 7:54 AM

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿಯ ದುರ್ಗಾಂಬಿಕಾ ದೇಗುಲದ ಪೂಜಾರಿ ಹತ್ಯೆ ಮಾಡಲಾಗಿದೆ. ದೇವಸ್ಥಾನದ ಪೂಜೆ ಮತ್ತು ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದ್ದು ಈ ಸಂಬಂಧ ದೊಣ್ಣೆಯಿಂದ ಪೂಜಾರಿ ಮೇಲೆ ಹಲ್ಲೆ ನಡೆದಿದೆ. ಈ ಪರಿಣಾಮ ಪೂಜಾರಿ ಮೃತಪಟ್ಟಿದ್ದಾರೆ. ಪೂಜಾರಿ ಜಯರಾಮಪ್ಪ(55) ಮೃತರು.

ದುರ್ಗಾಂಬಿಕಾ ದೇವಸ್ಥಾನದ ಪೂಜೆ ಮತ್ತು ಹಣಕಾಸಿನ ವಿಚಾರಕ್ಕೆ ಪೂಜಾರಿ ಜಯರಾಮಪ್ಪ ಮತ್ತು ಕೆಲವರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಪೂಜಾರಿ ಮೇಲೆ ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ಮಾಡಲಾಗಿತ್ತು. ಹಲ್ಲೆಗೊಳಗಾದ ಪೂಜಾರಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಚೆನ್ನಪ್ಪ, ಓಬಳಪ್ಪ, ಮುಕುಂದ, ಆಕಾಶ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತನನ್ನು ರಕ್ಷಿಸಿಕೊಳ್ಳಲು ಪತಿಯನ್ನು ಕೊಂದಳಾ ಪತ್ನಿ?
ಇನ್ನು ಮತ್ತೊಂದೆಡೆ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಪತ್ನಿಯೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ ಸರಗೂರಿನಲ್ಲಿ ಅನುಮಾನಾಸ್ಪದವಾಗಿ ಬಸವರಾಜಪ್ಪ(42) ಎಂಬುವವರ ಸಾವು ಸಂಭವಿಸಿದ್ದು ಇದರ ಹಿಂದೆ ಪತ್ನಿಯ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ.

ಮದ್ಯ ವ್ಯಸನಿ ಬಸವರಾಜಪ್ಪ ಆಗಾಗ ಪತ್ನಿ ಜತೆ ಜಗಳವಾಡುತ್ತಿದ್ದ ಹಾಗೂ ಹಲ್ಲೆ ಮಾಡುತ್ತಿದ್ದ ಪತಿಯಿಂದ ರಕ್ಷಿಸಿಕೊಳ್ಳಲು ಹೋಗಿ ಪತ್ನಿಯೇ ಹತ್ಯೆಗೈದ ಶಂಕೆ ವ್ಯಕ್ತವಾಗಿದೆ. ಬಸವರಾಜಪ್ಪ ಪತ್ನಿ ನೇತ್ರಾವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮುಳ್ಳಿನ ಬೇಲಿ ಮೇಲೆ ಬಿದ್ದು ನರಳಾಟ, ರಕ್ಷಣೆ
ನಿರ್ಮಾಣ ಹಂತದ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸ್ಥಳೀಯರು, ಆಟೋ ಚಾಲಕ ರಕ್ಷಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ನಿರ್ಮಾಣ ಹಂತದ ಪುರಭವನ ಕಟ್ಟದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು ಈ ವೇಳೆ ಮುಳ್ಳಿನ ಬೇಲಿ ಮೇಲೆ ಬಿದ್ದು ಮಹಿಳೆ ನರಳಾಡುತ್ತಿದ್ದರು. ಮಹಿಳೆ ಕಂಡ ಸ್ಥಳೀಯರು, ಆಟೋ ಚಾಲಕ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಗಾಯಾಳು ಮಹಿಳೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೇರೆಯವರಿಂದ ಹಣ ಪಡೆದು ಕಷ್ಟಪಟ್ಟು ಓದಿಸಿದ ಪೋಷಕರು; ಆ ಬಾಲಕನೀಗ ಭಾರತದ ಓರ್ವ ಖ್ಯಾತ ನಿರ್ದೇಶಕ!

Published On - 7:45 am, Sun, 23 January 22