ಚಿತ್ರದುರ್ಗ: ಮರಕ್ಕೆ ಗುದ್ದಿದ ಕಾರು, ಇಬ್ಬರು ಸ್ಥಳದಲ್ಲೇ ಸಾವು

| Updated By: ವಿವೇಕ ಬಿರಾದಾರ

Updated on: Jan 31, 2024 | 8:29 AM

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿಯ ಮರಕ್ಕೆ ಕಾರು ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃಪಟ್ಟಿದ್ದಾರೆ. ಮತ್ತೋರ್ವ ಪ್ರಯಾಣಿಕನಿಗೆ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದ ಕೆರೆ ಗ್ರಾಮದ ಕೊಬ್ಬರಿ ಗೋದಾಮಿಗೆ ಬೆಂಕಿ ಬಿದ್ದಿದೆ.

ಚಿತ್ರದುರ್ಗ: ಮರಕ್ಕೆ ಗುದ್ದಿದ ಕಾರು, ಇಬ್ಬರು ಸ್ಥಳದಲ್ಲೇ ಸಾವು
ಸಾಂದರ್ಭಿಕ ಚಿತ್ರ
Follow us on

ಚಿತ್ರದುರ್ಗ, ಜನವರಿ 31: ಚಳ್ಳಕೆರೆ (Challakere) ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಜನೇನಹಳ್ಳಿ ಗ್ರಾಮದ ವೆಂಕಟೇಶ (50), ವೆಂಕಟೇಶ (48) ಮೃತ ದುರ್ದೈವಿಗಳು. ಕಾರಲ್ಲಿದ್ದ ಮತ್ತೊರ್ವ ಪ್ರಯಾಣಿಕ ಕಿಶೋರ್ ಎಂಬುವರಿಗೆ ಗಾಯಾಗಳಾಗಿದ್ದು, ಚಿತ್ರದುರ್ಗ (Chitradurga) ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಕೊಬ್ಬರಿ ಗೋದಾಮು

ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದ ಕೆರೆ ಗ್ರಾಮದ ಹೊರವಲಯದ ಚಿಕ್ಕ ಬ್ಯಾಲದಕೆರೆ ಬಳಿಯ ತೋಟದಲ್ಲಿದ್ದ ಉದ್ಯಮಿ ಜಗದೀಶ್ ಅವರಿಗೆ ಸೇರಿದ ಕೊಬ್ಬರಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಕೊಬ್ಬರಿ ನಾಶವಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಶ್ರೀರಾಂಪುರ ಠಾಣೆ ಪಿಐ ಮಧು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಚಳ್ಳಕೆರೆ ಬಳಿ ಭೀಕರ ಅಪಘಾತ; ಸೇತುವೆಗೆ ಕಾರು ಡಿಕ್ಕಿ, ಮೂವರು ಪುಟ್ಟ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ

ಬೀದಿನಾಯಿಗಳ ಹಾವಳಿ, ಒಂದೇ ದಿನ 2 ಮಕ್ಕಳ ಮೇಲೆ ಅಟ್ಯಾಕ್

ರಾಯಚೂರು: ನಗರದಲ್ಲಿ ಬೀದಿನಾ ಯಿಗಳ ಹಾವಳಿ ಹೆಚ್ಚಾಗಿದ್ದು, ಒಂದೇ ದಿನ ಇಬ್ಬರು ಮಕ್ಕಳಿಗೆ ಕಚ್ಚಿವೆ. ಮಂಗಳವಾರ ಪೇಟೆ ನಿವಾಸಿ ಅಖಿಲ್ (6) ಮತ್ತು ಇಂದಿರಾನಗರದ ನಿವಾಸಿ ಜೋಯಾ ಫಾರೂಕಿ (10) ಗಾಯಾಳುಗಳು. ನಾಯಿ ಅಖಿಲ್​ನ ಬಾಯಿ ಹಾಗೂ ಕೆನ್ನೆಗೆ ಕಚ್ಚಿದೆ. ಇನ್ನು ಶಾಲೆಯಿಂದ ವಾಪಸ್ ಬರುತ್ತಿದ್ದ ಬಾಲಕಿ ಮೇಲೂ ನಾಯಿಗಳು ಅಟ್ಯಾಕ್ ಮಾಡಿವೆ. ಸದ್ಯ ಗಾಯಾಳು ಮಕ್ಕಳಿಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಸ್ಥಿತಿ ಕಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.

ನನ್ನ ಮಗ ಚಾಕಲೇಟ್ ತರುತ್ತೇನೆ ಅಂತ ಹೊರಗೆ ಹೋಗಿದ್ದನು. ಆತನ ಹಿಂದೆ ಅವರ ಅಪ್ಪ ಇದ್ದಾರೆ ಅಂತ ಧೈರ್ಯ ಇತ್ತು. ಆದರೆ ನಾಯಿ ಏಕಾಏಕಿ ದಾಳಿ ಮಾಡಿದೆ. ನನ್ನ ಗಂಡ ಆಟೋ ಓಡಿಸುತ್ತಾರೆ. ನಮಗೆ ಮನೆ ಬಾಡಿಗೆ ಕಟ್ಟಲು ದುಡ್ಡು ಇಲ್ಲ. ನನ್ನ ಮಗನಿಗೆ ಆದ ರೀತಿ ಬೇರೆ ಯಾರಿಗೂ ಆಗಬಾರದು. ಈ ರೀತಿಯ ಘಟನೆ ನಡೆದರೂ ನಗರಸಭೆ ಸದಸ್ಯರು ಆಸ್ಪತ್ರೆಗೆ ಬಂದಿಲ್ಲ. ಅಖಿಲ್​ ಊಟ ಮಾಡುತ್ತಿಲ್ಲ, ಬರೀ ಜ್ಯೂಸ್ ಮೇಲೆ ಜೀವನ ಅವನದು‌ ಎಂದು ಗಾಯಾಳು ಬಾಲಕ ಅಖಿಲ್ ತಾಯಿ ಯಲ್ಲಮ್ಮ ಕಣ್ಣೀರು ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ