ಚಿತ್ರದುರ್ಗದಲ್ಲಿ ಅಲೋಕ್ ಕುಮಾರ್; ಉತ್ತಮ ಪೆರೇಡ್ ಮಾಡಿದ ಟೀಮ್​ಗೆ ತನ್ನ ಜೇಬಿನಿಂದ ಗೌರವ ಧನ, ಪೊಲೀಸರಿಗೆ ಫಿಟ್ನೆಸ್ ಪಾಠ

| Updated By: ಆಯೇಷಾ ಬಾನು

Updated on: Nov 03, 2022 | 12:29 PM

ಮುರುಘಾಶ್ರೀ ಕೇಸ್ ಬಗ್ಗೆ ಪೊಲೀಸರು ಸರಿಯಾದ ತನಿಖೆ ಮಾಡುತ್ತಿದ್ದಾರೆ. ಸಿಬಿಐ ತನಿಖೆಗೆ ಕೊಡಿ ಎನ್ನವ ವಿಚಾರಕ್ಕೆ ನಾವು ಟೀಕಿಸಲ್ಲ. -ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್

ಚಿತ್ರದುರ್ಗದಲ್ಲಿ ಅಲೋಕ್ ಕುಮಾರ್; ಉತ್ತಮ ಪೆರೇಡ್ ಮಾಡಿದ ಟೀಮ್​ಗೆ ತನ್ನ ಜೇಬಿನಿಂದ ಗೌರವ ಧನ, ಪೊಲೀಸರಿಗೆ ಫಿಟ್ನೆಸ್ ಪಾಠ
ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುವ ಪರೇಡ್ ವೀಕ್ಷಿಸಿದ ಎಡಿಜಿಪಿ ಅಲೋಕ್ ಕುಮಾರ್
Follow us on

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡಿರುವ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್(ADGP Alok kumar) ಅವರು ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುವ ಪರೇಡ್ ವೀಕ್ಷಿಸಿದರು. ಈ ವೇಳೆ ಪೂರ್ವ ವಲಯ ಐಜಿಪಿ ತ್ಯಾಗರಾಜ್, ಎಸ್ಪಿ ಕೆ.ಪರಶುರಾಮ್ ಉಪಸ್ಥಿತರಿದ್ದರು. ಹಾಗೂ ಇದೇ ವೇಳೆ ಚಿತ್ರದುರ್ಗದ ಪೊಲೀಸ್ ಕ್ವಾಟ್ರಸ್ ಗೆ ಭೇಟಿ ನೀಡಿ ಪೊಲೀಸರ ಕುಟುಂಬಸ್ಥರ ಜೊತೆ ಎಡಿಜಿಪಿ ಸಭೆ ನಡೆಸಿ ಕುಟುಂಬಸ್ಥರಿಂದ ಅಹವಾಲು ಆಲಿಸಿದರು.

ಇನ್ನು ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಪೆರೇಡ್ ವೇಳೆ ಉತ್ತಮ ಪೆರೇಡ್ ಮಾಡಿದ ಟೀಮ್ ಗೆ ಮೆಚ್ಚುಗೆ ವ್ಯಕ್ತಪಡಿಸಿ ರಘು ಮತ್ತು ಬಾಹುಬಲಿ ನೇತೃತ್ವದ ಟೀಮ್ ಗೆ ತಮ್ಮ ಜೇಬಿನಿಂದ ಹಣ ತೆಗೆದು ಗೌರವ ಧನ ನೀಡಿದರು. ಎರಡು ಟೀಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪೆರೇಡ್ ಬಳಿಕ ಪೊಲೀಸರಿಗೆ ಫಿಟ್ನೆಸ್ ಪಾಠ ಮಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ 97 ಸೈಬರ್ ಕ್ರೈಂ ಕೇಸ್ ದಾಖಲಾಗಿವೆ

ಮತ್ತೊಂದೆಡೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್​​ ಯತ್ನ ಪ್ರಕರಣ, ಗಾಂಜಾ ಹಾವಳಿ, ಮುರುಘಾಶ್ರೀ ಕೇಸ್ ಸಂಬಂಧ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ ಕೇಸ್ ಸಂಬಂಧ ನಿನ್ನೆಯೇ ಪ್ರಕರಣ​ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ತನಿಖೆಗೆ 2 ತಂಡ ರಚಿಸಿದ್ದು, 1 ತಂಡ ಬೇರೆ ರಾಜ್ಯಕ್ಕೆ ತೆರಳುತ್ತಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವ ಬಗ್ಗೆ ಮಾತನಾಡಲ್ಲ. ಜನರಲ್ಲಿ ಸೈಬರ್ ಕ್ರೈಂ ಬಗ್ಗೆ ಅರಿವು ಕೊರತೆ ಇದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 97 ಸೈಬರ್ ಕ್ರೈಂ ಕೇಸ್ ದಾಖಲಾಗಿವೆ. ಸೈಬರ್ ಪ್ರಕರಣಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕಿದೆ ಎಂದರು.

ಇದನ್ನೂ ಓದಿ: Kidnap: ಸೋದರನ ಪುತ್ರ ಕಿಡ್ನಾಪ್ ಆಗಿರುವುದು ಖಚಿತ, ಇದಕ್ಕೆ ಪೂರಕವಾದ ಮಾಹಿತಿ ನನಗೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ 

ಸೋಷಿಯಲ್ ಮೀಡಿಯಾ ಮಾನಿಟ್ರಿಂಗ್, ಸೈಬರ್ ಕ್ರೈಂ ತಡೆಗಟ್ಟುವ ಕೆಲಸ ಆಗಬೇಕಿದೆ. ಸಾರ್ವಜನಿಕ ವಲಯದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು. ಸೈಬರ್​ ಕ್ರಿಮಿನಲ್ಸ್​​ ಬಲೆ ಹಾಕುವುದಕ್ಕೆ ಕಾಯುತ್ತಿದ್ದಾರೆ. ಚಾಟ್​ ಮಾಡಿ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಸೈಬರ್ ಕ್ರೈಂ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸಬೇಕಿದೆ ಎಂದು ಅಲೋಕ್​ ಕುಮಾರ್​ ಹೇಳಿದರು.

ಚಿತ್ರದುರ್ಗ ಮತ್ತು ರಾಜ್ಯದಲ್ಲಿ ಗಾಂಜಾ ಹಾವಳಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಗಾಂಜಾ ಹಾವಳಿ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಜನರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಗಾಂಜಾ ಹಾವಳಿ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮುರುಘಾಶ್ರೀ ಕೇಸ್ ಬಗ್ಗೆ ಪೊಲೀಸರು ಸರಿಯಾದ ತನಿಖೆ ಮಾಡುತ್ತಿದ್ದಾರೆ. ಸಿಬಿಐ ತನಿಖೆಗೆ ಕೊಡಿ ಎನ್ನವ ವಿಚಾರಕ್ಕೆ ನಾವು ಟೀಕಿಸಲ್ಲ. ಪಿಎಫ್ಐ ಮೇಲೆ ದಾಳಿ ಬೆನ್ನಲ್ಲೇ ಪೊಲೀಸರು ಟಾರ್ಗೆಟ್ ಆಗುತ್ತಾರೆ. ಗಾಂಜಾ, ರೌಡಿಗಳ ಮೇಲೆ ದಾಳಿ ನಡೆಸಿದರೂ ಟಾರ್ಗೆಟ್ ಆಗುತ್ತೇವೆ. ಕರ್ನಾಟಕ ರಾಜ್ಯ ಪೊಲೀಸರು ಹೆದರುವುದಿಲ್ಲ. ಇದು ಪ್ರೊಫೆಷನಲ್ ರಿಸ್ಕ್ ಇದೆ, ನಮ್ಮ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಪಿಎಫ್ ಐ ಬಗ್ಗೆ ಕಠಿಣ ಕ್ರಮ ಆಗಿದೆ. ಯಾರಾದರೂ ತರ್ಲೆ ಮಾಡಿದರೆ ಬಿಡುವುದಿಲ್ಲ. ಪಿಎಫ್ ಐ ಬ್ಯಾನ್ ಮುನ್ನ ಮತ್ತು ನಂತರ ನಾವು ಸರಿಯಾದ ಕ್ರಮ ಜರುಗಿಸಿದ್ದೇವೆ. ಬೇರೆ ರಾಜ್ಯಗಳಿಗಿಂತ ರಾಜ್ಯ ಪೊಲೀಸರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಎನ್ ಐಎ ದಾಳಿ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಮಾಹಿತಿ ನೀಡಿದರು.

Published On - 12:29 pm, Thu, 3 November 22