Kidnap: ಸೋದರನ ಪುತ್ರ ಕಿಡ್ನಾಪ್ ಆಗಿರುವುದು ಖಚಿತ, ಇದಕ್ಕೆ ಪೂರಕವಾದ ಮಾಹಿತಿ ನನಗೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ

MP Renukacharya: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ ಭೇದಿಸಲು ಚಂದ್ರಶೇಖರ್​ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ 4 ತಂಡ ರಚಿಸಿದ್ದಾರೆ. ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.

Kidnap: ಸೋದರನ ಪುತ್ರ ಕಿಡ್ನಾಪ್ ಆಗಿರುವುದು ಖಚಿತ, ಇದಕ್ಕೆ ಪೂರಕವಾದ ಮಾಹಿತಿ ನನಗೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ
ರೇಣುಕಾಚಾರ್ಯ ಹಾಗೂ ಸೋದರನ ಪುತ್ರ ಚಂದ್ರಶೇಖರ್‌
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 03, 2022 | 12:02 PM

ದಾವಣಗೆರೆ: ಶಾಸಕ ರೇಣುಕಾಚಾರ್ಯ ಅವರ ತಮ್ಮ ಎಂ.ಪಿ‌. ರಮೇಶ ಅವರ ಪುತ್ರ (Nephew) ಚಂದ್ರಶೇಖರ್​ (24) ನಾಪತ್ತೆ ಪ್ರಕರಣ ಐದನೇ ದಿನಕ್ಕೆ ಕಾಲಿಟ್ಟಿದೆ. ಸಹೋದರನ ಪುತ್ರನ ನಾಪತ್ತೆ ಬಗ್ಗೆ ಟಿವಿ9 ಜೊತೆ ಸ್ಥಳೀಯ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ (Honnali BJP MLA MP renukacharya) ಮಾತನಾಡಿದ್ದು, ಇದೊಂದು ಯೋಜಿತವಾಗಿ ನಡೆದಿರುವ ಕಿಡ್ನ್ಯಾಪ್ ಎಂಬುದು ಖಚಿತ. ಅಪಹರಣಕ್ಕೆ ಪೂರಕವಾದ ಮಾಹಿತಿ ನನಗೆ ಬರುತ್ತಿದೆ ಎಂಬ ಸ್ಪೋಟಕ ಮಾಹಿತಿ ನೀಡಿದ್ದಾರೆ. ಇಂದಿಗೆ ಘಟನೆ ನಡೆದು ಐದು ದಿನವಾಗಿದೆ. ಯಾವುದೇ ಸುಳಿವು ಸಿಕ್ಕಿಲ್ಲ. ಉದ್ದೇಶಪೂರ್ವಕವಾಗಿ ಚಂದ್ರಶೇಖರ್​​ನನ್ನು ಅಪಹರಿಸಿದ್ದಾರೆ. ಪುತ್ರನ ಬರುವಿಗಾಗಿ ಶಬರಿಯಂತೆ ಕಾಯ್ದು ಕುಳಿತಿರುವೆ ಎಂದು ನಮ್ಮ ದಾವಣಗೆರೆ ಪ್ರತಿನಿಧಿ ಬಸವರಾಜ್ ದೊಡ್ಮನಿಗೆ ರೇಣುಕಾಚಾರ್ಯ ಹೇಳಿದ್ದಾರೆ.

ಶಾಸಕ ರೇಣುಕಾಚಾರ್ಯ‌ ಅವರ ಹೊನ್ನಾಳಿ ಮನೆಯಲ್ಲಿ ನೀರವ ಮೌನ ಮನೆ ಮಾಡಿದೆ. ರೇಣುಕಾಚಾರ್ಯ ಐದು ದಿನಗಳಿಂದ ಮನೆ ಬಿಟ್ಟು ಹೊರಗೆ ಹೋಗಿಲ್ಲ. ಪ್ರಜಾಪಿತ ಬೃಹ್ಮಕುಮಾರಿ ಸೇರಿದಂತೆ ವಿವಿಧ ಸಂಘಟನೆಗಳ ಮಹಿಳೆಯರು ರೇಣುಕಾಚಾರ್ಯ ಮನೆಗೆ ಭೇಟಿ ನೀಡಿ ಸಾಂತ್ವ‌ನ ಹೇಳಿ, ಧೈರ್ಯ ತುಂಬುತ್ತಿದ್ದಾರೆ.

ಈ ಮಧ್ಯೆ, ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ ಭೇದಿಸಲು ಚಂದ್ರಶೇಖರ್​ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ 4 ತಂಡ ರಚಿಸಿದ್ದಾರೆ. ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ. ಸೌಮ್ಯ ಸ್ವಭಾವದ ಚಂದ್ರಶೇಖರ್ ನಿತ್ಯವೂ ವಿನಯ್ ಗುರೂಜಿ ಬಳಿ ಧ್ಯಾನಕ್ಕೆ ಹೋಗುತ್ತಿದ್ದ. ಇನ್ನು ವಿಚಾರಣೆ ವೇಳೆ ಚಂದ್ರಶೇಖರ್ ಸ್ನೇಹಿತ ಕಿರಣ್ ಎಂಬಾತ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಸದ್ಯ ಪೊಲೀಸರು ಚಂದ್ರಶೇಖರ್ ಸ್ನೇಹಿತ ಕಿರಣ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೊನ್ನಾಳಿ ವಿಧಾನ ಸಭಾ ಕ್ಷೇತ್ರದ ನ್ಯಾಮತಿ ಪಟ್ಟಣದಲ್ಲಿ ಲಭ್ಯವಾಗಿರುವ ಸಿಸಿಟಿವಿ ಪ್ರಕಾರ ನಾಪತ್ತೆಯಾಗಿರುವ ಚಂದ್ರಶೇಖರ್ ತನ್ನ ಕಾರಿನಲ್ಲಿ ಸುರಹೊನ್ನೆ ದಾಟಿದ ನಂತರ ನ್ಯಾಮತಿ ಪಟ್ಟಣಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಅಲ್ಲಿಂದ ಮುಂದಕ್ಕೆ ಕಾರು ಹೊನ್ನಾಳಿ ಪಟ್ಣಣಕ್ಕೆ ಬಂದಿಲ್ಲ. ನ್ಯಾಮತಿ ಪಟ್ಟಣದಲ್ಲಿ ಮಧ್ಯರಾತ್ರಿ ಕಾರು ಚಲಿಸುವಾಗ ಇಬ್ಬರು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆಕಿದೆ. ಶಿವಮೊಗ್ಗದಿಂದ ಒಬ್ಬನೆ ಹೊರಟ ನಂತರ, ನ್ಯಾಮತಿ ಪಟ್ಟಣದಲ್ಲಿ ಇಬ್ಬರು ಚಲಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಮತ್ತಷ್ಟು ಕುತೂಹಲ ಮೂಡಿಸಿದೆ. ನ್ಯಾಮತಿಯಿಂದ ಕೇವಲ 13 ಕಿಮಿ ದೂರದಲ್ಲಿದೆ ಹೊನ್ನಾಳಿ ರೇಣುಕಾಚಾರ್ಯ ಮನೆ.

Published On - 12:01 pm, Thu, 3 November 22