ಜೈಲಿನಲ್ಲಿ ಮುರುಘಾಶ್ರೀಗೆ ಎದೆನೋವು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ: ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ
ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಶಿಫ್ಟ್ ಮಾಡಿದ್ದು, ಹಿರಿಯ ವೈದ್ಯೆ ರೂಪಾ, ಹೆರಿಗೆ ತಜ್ಞ ಡಾ ಶಿವಕುಮಾರ್ ಸೇರಿ ಮೂವರು ವೈದ್ಯರ ನೇತೃತ್ವದಲ್ಲಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಚಿತ್ರದುರ್ಗ: ಪೋಕ್ಸೋ ಕೇಸ್ನಲ್ಲಿ ಮುರುಘಾಶ್ರೀಗಳ ಬಂಧನ ಪ್ರಕರಣ ಸಂಬಂಧ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ ಶ್ರೀಗಳ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲಾ ಕಾರಾಗೃಹದಿಂದ ಜಿಲ್ಲಾಸ್ಪತ್ರೆಗೆ ಮುರುಘಾಶ್ರೀ ಶಿಫ್ಟ್ ಮಾಡಿದ್ದು, ಹಿರಿಯ ವೈದ್ಯೆ ರೂಪಾ, ಹೆರಿಗೆ ತಜ್ಞ ಡಾ ಶಿವಕುಮಾರ್ ಸೇರಿ ಮೂವರು ವೈದ್ಯರ ನೇತೃತ್ವದಲ್ಲಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇನ್ನೂ ಶ್ರೀಗಳ ಅಡ್ವೋಕೆಟ್ ಉಮೇಶ್ ಚಿತ್ರದುರ್ಗ ಡಿಸ್ಟ್ರಿಕ್ಟ್ ಸರ್ಜನ್ ಡಾ. ಬಸವರಾಜ್ರಿಂದ ಮಾಹಿತಿ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆ ಶಿಫ್ಟ್ ಮಾಡಿ ಎಂದು ಡಿಸ್ಟ್ರಿಕ್ಟ್ ಸರ್ಜನ್ ಡಾ. ಬಸವರಾಜ್ ಹೇಳಿದ್ದಾರೆ ಎಂದು ಅಡ್ವೋಕೆಟ್ ಉಮೇಶ್ ಮಾಹಿತಿ ನೀಡಿದರು. ಸ್ವಾಮೀಜಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಎಫ್ಐಆರ್ ದಾಖಲಾದ 6 ದಿನಗಳ ಬಳಿಕ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದರು. 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ನ ನ್ಯಾಯಾಧೀಶೆ ಹಾಗೂ ಮ್ಯಾಜಿಸ್ಟ್ರೇಟ್ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಪೊಕ್ಸೊ ಕಾಯ್ದೆಯಡಿ (POCSO Act) ಪ್ರಕರಣ ದಾಖಲಾಗಿದ್ದು, ವಿಚಾರಣೆಗಾಗಿ ಮುರುಘಾ ಶರಣರನ್ನು 10 ದಿನಗಳ ಅವಧಿಗೆ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಶುಕ್ರವಾರ ಮನವಿ ಮಾಡುವ ಸಾಧ್ಯತೆಯಿದೆ.
ಇಂದು ಅಥವಾ ನಾಳೆ ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತೇವೆ ಎಂದು ಚಿತ್ರದುರ್ಗದಲ್ಲಿ ಮಠದ ಪರ ವಕೀಲ ಉಮೇಶ್ ಹೇಳಿಕೆ ನೀಡಿದರು. ಜಾಮೀನು ಕೋರಿ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ. ಅನಾರೋಗ್ಯ ಹಿನ್ನೆಲೆ ಶ್ರೀಗಳಿಗೆ ವೈದ್ಯಕೀಯ ತಪಾಸಣೆ ಆಗಬೇಕಿದೆ. ಶ್ರೀಗಳು ತನಿಖೆಗೆ ಸಹಕಾರ ನೀಡುತ್ತಾರೆಂಬ ಅಂಶ ಸೇರಿದಂತೆ. ಇತರೆ ಅಂಶಗಳ ಆಧಾರದ ಮೇಲೆ ಜಾಮೀನಿಗೆ ಕೋರಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:51 am, Fri, 2 September 22