ಕೋರ್ಟ್ ಸೂಚನೆಯಂತೆ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತ ಸಮಿತಿ ಅಧ್ಯಕ್ಷರನ್ನ ನೇಮಿಸಿದ ಸರ್ಕಾರ
ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಬಳಿಯಿರುವ ಐತಿಹಾಸಿಕ ಮುರುಘಾಮಠಕ್ಕೆ ಆಡಳಿತ ಸಮಿತಿ ನೇಮಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 3 ದಿನದಲ್ಲಿ ಆಡಳಿತ ಸಮಿತಿ ನೇಮಿಸಲು ಕೋರ್ಟ್ ಸೂಚಿಸಿತ್ತು. ಫೆಬ್ರವರಿ 28ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಆಡಳಿತ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ನೇಮಕ ಮಾಡಲಾಗಿದೆ.
ಚಿತ್ರದುರ್ಗ, ಮಾರ್ಚ್ 1: ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಬಳಿಯಿರುವ ಐತಿಹಾಸಿಕ ಮುರುಘಾಮಠಕ್ಕೆ (Murugha Mutt) ಆಡಳಿತ ಸಮಿತಿ ನೇಮಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 3 ದಿನದಲ್ಲಿ ಆಡಳಿತ ಸಮಿತಿ ನೇಮಿಸಲು ಕೋರ್ಟ್ ಸೂಚಿಸಿತ್ತು. ಫೆಬ್ರವರಿ 28ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಆಡಳಿತ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ನೇಮಕ ಮಾಡಲಾಗಿದೆ. ಸದ್ಯ ಮುರುಘಾ ಸ್ವಾಮೀಜಿ ಜಾಮೀನು ಮೇಲಿದ್ದು, ಅವರ ನಿಯಂತ್ರಣದಲ್ಲಿರುವ ಆಡಳಿತ ಪ್ರಶ್ನಿಸಿ ಮಾಜಿ ಸಚಿವ ಹೆಚ್.ಏಕಾಂತಯ್ಯ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿ ಸರ್ಕಾರಕ್ಕೆ ನೋಟಿಸ್ ನೀಡಿದ್ದ ಸುಪ್ರೀಂಕೋರ್ಟ್ ಸೂಚನೆಯಂತೆ ಮಠಕ್ಕೆ ಇದೀಗ ಸರ್ಕಾರ ಆಡಳಿತ ಸಮಿತಿ ಅಧ್ಯಕ್ಷರ ನೇಮಿಸಿದೆ. ಸದ್ಯದಲ್ಲೇ ಆಡಳಿತ ಸಮಿತಿ ಸದಸ್ಯರ ನೇಮಕ ಎಂದು ಮಾಹಿತಿ ಇದೆ.
ಜೈಲಿನಿಂದ ಬಿಡುಗಡೆಯಾದ ನಂತರ ಮುರುಘಾ ಶ್ರೀ ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತ ನೋಡಿಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮುರುಘಾ ಶ್ರೀ ಆಡಳಿತಕ್ಕೆ ನಿರ್ಬಂಧ ವಿಧಿಸಿತ್ತು.
ಇದನ್ನೂ ಓದಿ: ಚಿತ್ರದುರ್ಗ: ಮುರುಘಾಶ್ರೀ ಆಡಳಿತಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ; ಸಮಿತಿ ರಚನೆಗೆ ಸೂಚನೆ
ವಿಚಾರಣೆ ನಡೆಸಿ ಮಧ್ಯಂತ ಆದೇಶ ನೀಡಿದ ಸುಪ್ರೀಂಕೋರ್ಟ್, ಮುರುಘಾಶ್ರೀ ಆಡಳಿತಕ್ಕೆ ನಿರ್ಬಂಧ ವಿಧಿಸಿತ್ತು. ಅಲ್ಲದೆ, ಮುರುಘಾಮಠ ಹಾಗೂ ಎಸ್ಜೆಎಂ ವಿದ್ಯಾಪೀಠ ಆಡಳಿತಕ್ಕೆ ಮೂರು ದಿನದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆ ಹಿನ್ನೆಲೆ ಇಂದು ಸರ್ಕಾರ ಆಡಳಿತ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಚಿತ್ರದುರ್ಗ: ಮುರುಘಾ ಮಠದ ಹಣ, ಆಸ್ತಿ ದುರ್ಬಳಕೆ ಆರೋಪ: ಎಸ್ಕೆ ಬಸವರಾಜನ್ ವಿರುದ್ಧದ ಕೇಸ್ನಲ್ಲಿ ಮುರುಘಾ ಶ್ರೀ ಸಾಕ್ಷ್ಯ
ಫೋಕ್ಸೋ ಪ್ರಕರಣದಲ್ಲಿ 14 ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದ ಮುರುಘಾಶ್ರೀ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಬಳಿಕ ಮುರುಘಾಶ್ರೀಗೆ ಮರಳಿ ಮುರುಘಾಮಠದ ಆಡಳಿತ ಸಿಕ್ಕಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:41 pm, Fri, 1 March 24