ಚಿತ್ರದುರ್ಗ: ಮೆಚುರಿಟಿ ಹಣ ಕೇಳಲು ಹೋದ ಯುವಕನನ್ನು ಬ್ಯಾಂಕ್ ಒಳಗೆ ಕೂಡಿ ಹಾಕಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಸಹಾರಾ ಇಂಡಿಯಾ ಬ್ಯಾಂಕ್ ಮ್ಯಾನೇಜರ್ ತಿರುಪತಿ, ಯುವಕ ವಿಕಾಸ್ ಮೇಲೆ ದರ್ಪ ತೋರಿದ್ದು, ಬ್ಯಾಂಕಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ನಿನ್ನೆ ಸಂಜೆ 5 ರಿಂದ ರಾತ್ರಿ 9ರವರೆಗೆ ಬ್ಯಾಂಕಲ್ಲೇ ವಿಕಾಸ್ ಬಂಧಿಯಾಗಿದ್ದಾನೆ.
ರಾತ್ರಿ ನಗರ ಪೊಲೀಸರು ಸಹಾರಾ ಇಂಡಿಯಾ ಬ್ಯಾಂಕ್ಗೆ ಬಂದ ಮೇಲೆ ವಿಕಾಸ್ನನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮ್ಯಾನೇಜರ್ ತಿರುಪತಿ ಹೇಳುವುದೇ ಬೇರೆ. ಬ್ಯಾಂಕಿನ ವಹಿವಾಟು ವಿಚಾರ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥ ಬಳಿಕ ಮೆಚುರಿಟಿ ಹಣ ನೀಡುತ್ತೇವೆ. ಈ ಬಗ್ಗೆ ಮಾಹಿತಿ ನೀಡಿದರೂ ವಿಕಾಸ್ ಹಠ ಹಿಡಿದು ಕುಳಿತರು. ಹೀಗಾಗಿ ಬ್ಯಾಂಕ್ ಸುರಕ್ಷತೆ ದೃಷ್ಟಿಯಿಂದ ಬೀಗ ಹಾಕಿದೇನೆ ಎಂದು ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಓನೆಕ್ಸ್ ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ
ನಿಗದಿತ ಸಮಯಕ್ಕಿಂತ ಹೆಚ್ಚು ತೆರೆಯಲಾಗಿದ್ದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಓನೆಕ್ಸ್ ಪಬ್ನಲ್ಲಿ ಜೋರಾಗಿ ಧ್ವನಿವರ್ಧಕ ಬಳಸಿದ್ದು, ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟುಮಾಡಿದೆ. ಅಲ್ಲದೇ ಪಬ್ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ದೇವಸ್ಥಾನಕ್ಕೆ ಹೋಗಿ ಬರುವ ದಾರಿಯಲ್ಲಿ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಸಾರ್ವಜನಿಕರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಪಬ್ ಮೇಲೆ ದಾಳಿ ಮಾಡಿದ್ದಾರೆ.
ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಬರ್ಕೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಅಬಕಾರಿ ಕಾಯ್ದೆ, ಕೆಪಿ ಕಾಯ್ದೆ, ಎಪಿಡೆಮಿಕ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯಪುರ: ಯುವಕನ ಕೊಲೆ; ಭೀಮಾತೀರದಲ್ಲಿ ಕೇಳಿಬಂತು ಮರ್ಯಾದೆ ಹತ್ಯೆ ಆರೋಪ
Published On - 7:58 am, Sun, 24 October 21