AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮರಿಂದರ್​ ಸಿಂಗ್​​ ಪಾಕ್​ ಗೆಳತಿ ಅರೂಸಾ ಅಲಂಗೆ ಐಎಸ್​ಐ ಲಿಂಕ್​ ಆರೋಪ; ಫೋಟೋ ಮೂಲಕ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಕ್ಯಾಪ್ಟನ್​

ಅರೂಸಾ ಅಲಂ ವೀಸಾವನ್ನು ಗುಪ್ತಚರ ದಳದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವೇ ವಿಸ್ತಾರ ಮಾಡಿತ್ತು. 2007ರಲ್ಲಿಯೇ ಈ ಬಗ್ಗೆ ಸಂಪೂರ್ಣ ವಿಚಾರಣೆಯೂ ನಡೆದಿದೆ ಎಂದೂ ಅಮರಿಂದರ್​ ಸಿಂಗ್ ಹೇಳಿದ್ದಾರೆ.

ಅಮರಿಂದರ್​ ಸಿಂಗ್​​ ಪಾಕ್​ ಗೆಳತಿ ಅರೂಸಾ ಅಲಂಗೆ ಐಎಸ್​ಐ ಲಿಂಕ್​ ಆರೋಪ; ಫೋಟೋ ಮೂಲಕ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಕ್ಯಾಪ್ಟನ್​
ಅರೂಸಾ ಅಲಂ ಮತ್ತು ಸೋನಿಯಾ ಗಾಂಧಿ
TV9 Web
| Edited By: |

Updated on:Oct 23, 2021 | 10:47 AM

Share

ಕಾಂಗ್ರೆಸ್​ನಿಂದ ಹೊರಬಂದಿರುವ ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಇದೀಗ ಒಂದು ವಿಷಯಕ್ಕೆ ಸುದ್ಧಿಯಲ್ಲಿದ್ದಾರೆ. ಅಮರಿಂದರ್​ ಸಿಂಗ್​ ಅವರ ಆಪ್ತ ಸ್ನೇಹಿತೆ, ಪಾಕಿಸ್ತಾನದ ಪತ್ರಕರ್ತೆ ಅರೂಸಾ ಅಲಂ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪಂಜಾಬ್​​ಗೆ ಪಾಕಿಸ್ತಾನದ ಐಎಸ್​ಐ (ಇಂಟರ್​ ಸರ್ವೀಸ್​ ಇಂಟಲಿಜೆನ್ಸ್​ -ISI)ನಿಂದ ಬೆದರಿಕೆ ಇರುವುದಾಗಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಹೇಳುತ್ತಿದ್ದಾರೆ. ಇದೇ ಹೊತ್ತಲ್ಲಿ ಅವರ ಸ್ನೇಹಿತೆ, ಪಾಕಿಸ್ತಾನಿ ಪತ್ರಕರ್ತೆ ಅರೂಸಾ ಅಲಂಗೆ ಐಎಸ್​ಐ ಸಂಪರ್ಕ ಇದೆಯಾ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದು ಪಂಜಾಬ್​ ಗೃಹ ಸಚಿವ ಸುಖ್​ಜಿಂದರ್​ ಸಿಂಗ್​ ಒತ್ತಾಯಿಸಿದ್ದಾರೆ.

ಅಂದಹಾಗೆ ಈ ಅರೂಸಾ ಅಲಂ ಪಾಕಿಸ್ತಾನದ ಪತ್ರಕರ್ತೆಯಾಗಿದ್ದು, ಅಮರಿಂದರ್​ ಸಿಂಗ್​​ರಿಗೆ ಹಳೇ ಪರಿಚಯ ಮತ್ತು ಅವರ ಆಪ್ತ ಸ್ನೇಹಿತೆಯಾಗಿದ್ದಾರೆ. 2018ರಲ್ಲಿ ಅಮರಿಂದರ್​ ಸಿಂಗ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗಲೂ ಅವರು ಬಂದಿದ್ದರು. ಆಗಲೇ ನವಜೋತ್​ ಸಿಂಗ್ ಸಿಧು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸುಖ್​ಜಿಂದರ್​ ಸಿಂಗ್ ಹೊಸದೊಂದು ವಿಷಯ ಎತ್ತಿದ್ದಾರೆ. ಅಷ್ಟೆಲ್ಲ ವರ್ಷ ಅರೂಸಾ ಇಲ್ಲಿ ಹೇಗೆ ಇದ್ದರು? ಅವರ ವೀಸಾ ಮೂರು ಬಾರಿ ಪರಿಷ್ಕೃತಗೊಂಡಿದ್ದಾದರೂ ಹೇಗೆ? ಎಂದು ಕೇಳಿದ್ದಾರೆ. ಆದರೆ ಇದನ್ನು ಅಮರಿಂದರ್​ ಸಿಂಗ್​ ತಿರಸ್ಕರಿಸಿದ್ದಾರೆ. ಇದೆಲ್ಲ ಬೇಕೆಂದು ನನ್ನ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಅರೂಸಾ ಅಲಂ ಮತ್ತು ಸೋನಿಯಾ ಗಾಂಧಿ ಒಟ್ಟಿಗೆ ಇರುವ ಫೋಟೋವನ್ನು ಅವರ ಮಾಧ್ಯಮ ಸಲಹೆಗಾರ ರವೀನ್​ ಠಾಕೂರ್​ ಬಿಡುಗಡೆ ಮಾಡಿದ್ದಾರೆ.

ಸುಖ್​ಜಿಂದರ್​ ಸಿಂಗ್ ಆರೋಪಕ್ಕೆ ರವೀನ್ ಠಾಕೂರ್​ ಅಕೌಂಟ್​ ಮೂಲಕವೇ ಉತ್ತರ ನೀಡುತ್ತಿರುವ ಕ್ಯಾಪ್ಟನ್​ ಅಮರಿಂದರ್​ ಸಿಂಗ್​,  ನೀವೀಗ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದೀರಿ. ಅರೂಸಾ ಅವರು ಭಾರತದಲ್ಲಿ ಅಂದಿನ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದೇ 16 ವರ್ಷ ನೆಲೆಸಿದ್ದರು. ಈ ಅವಧಿಯಲ್ಲಿ ಅಧಿಕಾರದಲ್ಲಿದ್ದ ಎನ್​ಡಿಎ ಮತ್ತು ಯುಪಿಎ ಸರ್ಕಾರಗಳೆರಡೂ ಐಎಸ್​ಐ ಜತೆ ಸಂಪರ್ಕದಲ್ಲಿದ್ದವು ಎಂದು ನೀವು ಹೇಳುತ್ತೀರಾ? ನೀವು ನನ್ನ ಕ್ಯಾಬಿನೆಟ್​​​ನಲ್ಲೂ ಇದ್ದಿರಿ. ಆಗ ಅರೂಸಾ ಬಗ್ಗೆ ಇಲ್ಲದ ಅನುಮಾನ? ದೂರುಗಳು ಈಗ್ಯಾಕೆ ಎಂದು ಸುಖ್​​ಜಿಂದರ್​​ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.

ಹಾಗೇ, ಅರೂಸಾ ಅಲಂ ವೀಸಾವನ್ನು ಗುಪ್ತಚರ ದಳದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವೇ ವಿಸ್ತಾರ ಮಾಡಿತ್ತು. 2007ರಲ್ಲಿಯೇ ಈ ಬಗ್ಗೆ ಸಂಪೂರ್ಣ ವಿಚಾರಣೆಯೂ ನಡೆದಿದೆ. ಆದರೆ ಈ ತನಿಖೆಯನ್ನು ಪಂಜಾಬ್​ ಡಿಜಿಪಿಗೆ ನೀಡಿ ಮತ್ತೆ ಇಲ್ಲಿನ ವ್ಯಕ್ತಿಸಂಪನ್ಮೂಲವನ್ನು ಹಾಳು ಮಾಡುತ್ತಿದ್ದೀರಿ. ಇದೀಗ ಹಬ್ಬದ ಸಂದರ್ಭ. ಇಲ್ಲಿನ ಡಿಜಿಪಿ ಸೇರಿ ಪೊಲೀಸ್​ ಸಿಬ್ಬಂದಿಗೆ ಕಾನೂನು-ಸುವ್ಯವಸ್ಥೆ ನಿಭಾಯಿಸುವ ಜವಾಬ್ದಾರಿ ಇರುತ್ತದೆ. ಆದರೆ ಅದನ್ನೆಲ್ಲ ಬಿಟ್ಟು ನೀವು ಅರೂಸಾ ಮತ್ತು ಐಎಸ್​ಐ ಲಿಂಕ್​ ಬಗ್ಗೆ ತನಿಖೆ ಮಾಡುವಂತೆ ಹೇಳುತ್ತಿದ್ದೀರಿ ಎಂದು ಕ್ಯಾಪ್ಟನ್​ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಉಚಿತ ನಿವೇಶನ ವದಂತಿಗೆ ಕಿವಿಗೊಟ್ಟು ಗುಡಿಸಲು ನಿರ್ಮಿಸಿದ ಜನರಿಗೆ ಲಾಠಿ ಏಟಿನ ಬಿಸಿ

ಚಿಕ್ಕಬಳ್ಳಾಪುರ: ಭಾರಿ ಮಳೆ; ಗುಡಿಬಂಡೆ ಪಟ್ಟಣದಲ್ಲಿ ಕೆರೆಗಳಂತಾದ ರಸ್ತೆಗಳು

Published On - 10:45 am, Sat, 23 October 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ