Temple Tour: ಬಿಚ್ಚುಗತ್ತಿ ಭರಮಣ್ಣ ನಾಯಕ ಸ್ಥಾಪಿಸಿದ ದೇವಿ ಆಲಯ ನೋಡಿ
ಮದಕರಿ ನಾಯಕರ ಸಾಮ್ರಾಜ್ಯದ ಕುರುಹುಗಳಾಗಿ ಇಂದಿಗೂ ಅನೇಕ ದೇವಾಲಯಗಳು ಚಿತ್ರದುರ್ಗದ ಗತ ವೈಭವವನ್ನೇ ಹೊತ್ತು ಮೆರಿತಿವೆ.
ನಾಡಿನ ಅನೇಕ ಆಲಯಗಳ ಹಿನ್ನೆಲೆ ನಮ್ಮ ನಾಡಿನ ಇತಿಹಾಸದೊಂದಿಗೆ ಬೆರೆತು ಹೋಗಿದೆ. ಅದರಲ್ಲೂ ಕೋಟೆ ನಾಡಿನಲ್ಲಿರುವ ಕೆಲವು ದೇವಾಲಯಗಳು ಮದಕರಿ ನಾಯಕರ ಸಾಮ್ರಾಜ್ಯದ ಕುರುಹುಗಳಾಗಿ ಉಳಿದಿವೆ. ಅಂತಾ ಒಂದು ದೇವಾಲಯವೇ ಉತ್ಸವಾಂಬ ದೇವಿ. ಕೋಟೆನಾಡು ಚಿತ್ರದುರ್ಗ ಅಂದಕೂಡಲೇ ನಮಗೆಲ್ಲಾ ನೆನಪಾಗೋದು ಮದಕರಿ ನಾಯಕರು ಮತ್ತು ಒನಕೆ ಓಬವ್ವನ ಆ ವೀರ ಚರಿತ್ರೆ. ಮದಕರಿ ನಾಯಕರ ಸಾಮ್ರಾಜ್ಯದ ಕುರುಹುಗಳಾಗಿ ಇಂದಿಗೂ ಅನೇಕ ದೇವಾಲಯಗಳು ಚಿತ್ರದುರ್ಗದ ಗತ ವೈಭವವನ್ನೇ ಹೊತ್ತು ಮೆರಿತಿವೆ. ಅಂತಾ ಉದಾಹರಣೆಗಳ ಪೈಕಿ ಚಿತ್ರದುರ್ಗ ನಗರದಲ್ಲಿರುವ ರಾಜ ಉತ್ಸವಾಂಬ ದೇವಿಯ ದೇಗುಲ ನವದುರ್ಗೆಯರಲ್ಲಿ ಪ್ರಮುಖ ಸ್ಥಾನ ಪಡೆದಿದೆ. 16ನೇಶತಮಾನದಲ್ಲಿ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ಈ ದೇಗುಲವನ್ನು ಸ್ಥಾಪಿಸಿದ್ದಾನೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಕೆರೆ ಅಂಗಳದಲ್ಲಿ ಪತ್ತೆಯಾದ ದೇವಿಯ ಶಿಲಾಮೂರ್ತಿಯನ್ನು ದುರ್ಗದಲ್ಲಿ ಪ್ರತಿಷ್ಠಾಪಿಸಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.
Latest Videos