ಮುದ್ದೆಯಲ್ಲಿ ಕ್ರಿಮಿನಾಶಕ- FSLನಿಂದ ವರದಿ ಬಹಿರಂಗ; ಮಗಳೇ ಆಹಾರದಲ್ಲಿ ವಿಷವಿಟ್ಟು ನಾಲ್ವರನ್ನ ಕೊಂದ ಆರೋಪ

ಪೋಷಕರು ಬಾಲಕಿಯನ್ನು ಕೂಲಿಗೆ ಕಳಿಸಿ, ಬೈಯ್ಯುತ್ತಿದ್ದ ಹಿನ್ನೆಲೆ ಮನನೊಂದಿದ್ದ ಬಾಲಕಿ ಕುಟುಂಬಸ್ಥರಿಗೆ ವಿಷ ಹಾಕಿ ಕೊಂದಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಮುದ್ದೆಯಲ್ಲಿ ಕ್ರಿಮಿನಾಶಕ- FSLನಿಂದ ವರದಿ ಬಹಿರಂಗ; ಮಗಳೇ ಆಹಾರದಲ್ಲಿ ವಿಷವಿಟ್ಟು ನಾಲ್ವರನ್ನ ಕೊಂದ ಆರೋಪ
ಇಸಾಮುದ್ರ ಗ್ರಾಮ

ಚಿತ್ರದುರ್ಗ: ವಿಷಯುಕ್ತ ಆಹಾರ ಸೇವನೆಯಿಂದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆಹಾರದಲ್ಲಿ ವಿಷವಿರುವ ಬಗ್ಗೆ FSL ವರದಿಯಲ್ಲಿ ಬಹಿರಂಗವಾಗಿದೆ. ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ಜುಲೈ 12ರಂದು ಈ ಘಟನೆ ನಡೆದಿತ್ತು.

ಜುಲೈ 12ರಂದು ರಾತ್ರಿ ಮೃತರು ಮುದ್ದೆ, ಹೆಸರುಕಾಳು ಸಾರು, ಅನ್ನ ಸೇವಿಸಿದ್ದರು. ಆಹಾರ ಸೇವಿಸಿದ್ದ ತಿಪ್ಪಾನಾಯ್ಕ್(46), ಸುಧಾಬಾಯಿ(43), ರಮ್ಯಾ(16), ಗುಂಡಿಬಾಯಿ(75) ಮೃತಪಟ್ಟಿದ್ದರು. ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆಸಿರುವ ಬಗ್ಗೆ FSLನಿಂದ ವರದಿ ಬಂದಿದೆ. ಮಗಳೇ ಆಹಾರದಲ್ಲಿ ವಿಷವಿಟ್ಟು ನಾಲ್ವರನ್ನ ಕೊಂದ ಆರೋಪ ಕೇಳಿ ಬರುತ್ತಿದೆ. ಪೋಷಕರು ಬಾಲಕಿಯನ್ನು ಕೂಲಿಗೆ ಕಳಿಸಿ, ಬೈಯ್ಯುತ್ತಿದ್ದ ಹಿನ್ನೆಲೆ ಮನನೊಂದಿದ್ದ ಬಾಲಕಿ ಕುಟುಂಬಸ್ಥರಿಗೆ ವಿಷ ಹಾಕಿ ಕೊಂದಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆಯಲ್ಲಿ ರಾಹುಲ್ (18) ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು ರಕ್ಷಿತಾ(17) ಮಾತ್ರ ಸುರಕ್ಷಿತವಾಗಿದ್ದಾಳೆ. ಹೊಟ್ಟೆ ನೋವಿನ ಕಾರಣ ಅನ್ನ, ಸಾರು ಮಾತ್ರ ಸೇವಿಸಿದ್ದೆ ಎಂದು ರಕ್ಷಿತ ವಿಚಾರಣೆ ವೇಳೆ ತಿಳಿಸಿದ್ದಾಳೆ. ಭರಮಸಾಗರ ಠಾಣೆ ಪೊಲೀಸರಿಂದ ಪ್ರಕರಣ ಬಯಲಾಗಿದ್ದು ಭರಮಸಾಗರ ಪೊಲೀಸರಿಂದ ಬಾಲಕಿ ರಕ್ಷಿತಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ ಕಿಡಿಗೇಡಿಗಳು; ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Click on your DTH Provider to Add TV9 Kannada