Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಲೋಕಾಯುಕ್ತ ಬಲೆಗೆ ಬಿದ್ದ ಭೂ ದಾಖಲೆ ಅಧಿಕಾರಿ ಕಾರು ಚಾಲಕ; ಹಣ ಪಡೆಯಲು ಮಾಡಿದ್ದ

ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಮಾತಿದೆ. ಆದರೆ, ಆ ಮಾತಿಗೆ ಕೆಲವು ಅಧಿಕಾರಿಗಳು ಚ್ಯುತಿ ತರುತ್ತಿದ್ದಾರೆ. ಜನಸಾಮಾನ್ಯರ ಕೆಲಸ ಮಾಡಿಕೊಡಬೇಕಾದ ಅಧಿಕಾರಿಗಳೆ ಲಂಚ ತೆಗೆದುಕೊಳ್ಳುತ್ತಿದ್ದಾರೆ. ಅದರಂತೆ ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಭೂ ದಾಖಲೆ ಇಲಾಖೆ ಉಪನಿರ್ದೇಶಕ ಲಂಚಕ್ಕೆ ಭೇಡಿಕೆಯಿಟ್ಟು ಸಿಕ್ಕಿಬಿದ್ದ ಘಟನೆ ನಡೆದಿದೆ.

ಚಿತ್ರದುರ್ಗ: ಲೋಕಾಯುಕ್ತ ಬಲೆಗೆ ಬಿದ್ದ ಭೂ ದಾಖಲೆ ಅಧಿಕಾರಿ ಕಾರು ಚಾಲಕ; ಹಣ ಪಡೆಯಲು ಮಾಡಿದ್ದ
ಲೋಕಾಯುಕ್ತ ಬಲೆಗೆ ಬಿದ್ದ ಭೂ ಅಧಿಕಾರಿ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2024 | 8:25 PM

ಚಿತ್ರದುರ್ಗ, ಫೆ.02: ಭೂ ದಾಖಲೆ ಅಧಿಕಾರಿ ಕಾರು ಚಾಲಕ ಕಿರಣ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಪಹಣಿ ಪ್ರತ್ಯೇಕಗೊಳಿಸಲು ಭೂ ದಾಖಲೆ ಇಲಾಖೆ ಉಪನಿರ್ದೇಶಕ ಗಂಗಯ್ಯ ಎಂಬುವವರು 15ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಓಬಳಾಪುರದ ಜಯಣ್ಣ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಹಾಗೂ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಚಾಲಕ ಕಿರಣ್ ಮೂಲಕ ಮುಂಗಡ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಚಾಲಕ ಕಿರಣ್ ಸಿಕ್ಕಿಬಿದ್ದರೆ, ಅಧಿಕಾರಿ ಗಂಗಯ್ಯ ಪರಾರಿಯಾಗಿದ್ದಾರೆ.

ಇಬ್ಬರು KAS ಅಧಿಕಾರಿಗಳನ್ನು ವರ್ಗಾವಣೆಮಾಡಿ ಸರ್ಕಾರ ಆದೇಶ

ಬೆಂಗಳೂರು: ಇಬ್ಬರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ, ಹೆಚ್​ಬಿ ವಿಜಯಕುಮಾರ್ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ರಾಜು ಮೊಗವೀರ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ:Lokayukta Raid: ಲೋಕಾಯುಕ್ತ ದಾಳಿಗೆ ಬೆಸ್ಕಾಂ ಇಇ ಚನ್ನಕೇಶವ ಶಾಕ್: ಬಿಪಿಯಲ್ಲಿ ಏರುಪೇರು

ಟಿಪ್ಪು ಭಾವಚಿತ್ರಕ್ಕೆ ಅಪಮಾನ ಪ್ರಕರಣ; ಇಬ್ಬರು ಕಾನ್ಸ್​​ಟೇಬಲ್​ಗಳು ಅಮಾನತು

ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಟಿಪ್ಪು ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಇಬ್ಬರು ಕಾನ್ಸ್​​ಟೇಬಲ್​ಗಳು ಅಮಾನತು ಮಾಡಿ ರಾಯಚೂರು ಎಸ್​​ಪಿ ಬಿ.ನಿಖಿಲ್ ಆದೇಶಿಸಿದ್ದಾರೆ. ಸಿರವಾರ ಠಾಣೆಯ ಕಾನ್ಸ್​ಟೇಬಲ್​ಗಳಾದ ಇಸ್ಮಾಯಿಲ್, ರೇವಣಸಿದ್ದ ಎಂಬುವವರು ಘಟನೆ ನಡೆದಾಗ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ತವ್ಯಲೋಪ ಎಸಗಿದ ಹಿನ್ನಲೆ ಅಮಾನತುಗೊಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ