NHAI Chitradurga: ಗುತ್ತಿಗೆದಾರರಿಂದ ಲಕ್ಷಾಂತರ ರೂ ಲಂಚ ಪಡೆದ ಆರೋಪ: ಹೆದ್ದಾರಿ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಸಿಬಿಐ
CBI: ಗುತ್ತಿಗೆದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪದ ಮೇರೆಗೆ ಎನ್‌ಎಚ್‌ಎಐ ಅಧಿಕಾರಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ. ಎನ್ಎಚ್ಎಐ -ಚಿತ್ರದುರ್ಗದ ಯೋಜನಾ ನಿರ್ದೇಶಕ ಆಂಧ್ರಪ್ರದೇಶದ ಕಾಳಹಸ್ತಿ ಮೂಲದ ಶ್ರೀನಿವಾಸ್ ನಾಯ್ದು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಿತ್ರದುರ್ಗ: ಗುತ್ತಿಗೆದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪದ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿ ವಿರುದ್ಧ ಸಿಬಿಐ (CBI) ಎಫ್ಐಆರ್ ದಾಖಲಿಸಿಕೊಂಡಿದೆ. ಎನ್ಎಚ್ಎಐ -ಚಿತ್ರದುರ್ಗದ ಯೋಜನಾ ನಿರ್ದೇಶಕ ಆಂಧ್ರಪ್ರದೇಶದ ಕಾಳಹಸ್ತಿ ಮೂಲದ ಶ್ರೀನಿವಾಸ್ ನಾಯ್ದು ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಚಿತ್ರದುರ್ಗದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ (NHAI project manager) ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್ ನಾಯ್ದು (Srinivasulu Naidu) ಗುತ್ತಿಗೆದಾರರಿಂದ ಲಂಚ ಸಂಗ್ರಹಿಸಿ ಹುಟ್ಟೂರಿಗೆ ಸಾಗಿಸಲು ಯತ್ನಿಸಿದ್ದರು. ಖಚಿತ ಮಾಹಿತಿ ಆಧರಿಸಿ ಸಿಬಿಐ ತಂಡ ಕಾರ್ಯಾಚರಣೆ ನಡೆಸಿದಾಗ ಜೂನ್ 22 ರಂದು ದೇವನಹಳ್ಳಿ ಬಳಿ ಶ್ರೀನಿವಾಸ್ ಕಾರಿನಲ್ಲಿ 3.5 ಲಕ್ಷ ರೂ ಪತ್ತೆಯಾಗಿತ್ತು. ಕಾರಿನ ಹಿಂಬದಿ ಸೀಟ್ ಮಧ್ಯೆ ಹಣ ಅಡಗಿಸಿಟ್ಟು ಸಾಗಿಸುತ್ತಿದ್ದ ಶ್ರೀನಿವಾಸ್. ಸಿಬಿಐ ಅಧಿಕಾರಿಗಳು ಹಣ ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಆರೋಪಿಯ ಹೆಸರಿನಲ್ಲಿ ಕಾಳಹಸ್ತಿ, ಗುಂಟೂರು, ನೆಲ್ಲೂರು, ಬೆಂಗಳೂರಿನ ಯಲಹಂಕ, ಹೈದರಾಬಾದ್‌ನ ಕೋಕಾಪೇಟ್, ತೆಲಂಗಾಣ ಸೇರಿದಂತೆ ವಿವಿಧೆಡೆ ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ. ಎಫ್ಐಆರ್ ದಾಖಲಿಸಿಕೊಂಡು ಸಿಬಿಐ ತನಿಖೆ ಆರಂಭಿಸಿದೆ.
ಬಸ್ ನಿಲ್ದಾಣದಲ್ಲಿ ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಹೆಸ್ಕಾಂ ಲೈನ್ ಮ್ಯಾನ್ ಎಸಿಬಿ ಬಲೆಗೆ
ವಿಜಯಪುರ: ಬಸ್ ನಿಲ್ದಾಣದಲ್ಲಿ ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಹೆಸ್ಕಾಂ ಲೈನ್ ಮ್ಯಾನ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಮರಗೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ಪ್ರಕರಣ ನಡೆದಿದೆ. ಸಂಜೀವ್ ಅಂಬಿ ಎಸಿಬಿ ಬಲೆಗೆ ಬಿದ್ದ ಲೈನ್ ಮೆನ್. ವಿದ್ಯುತ್ ಟ್ರಾನ್ಸಫಾರ್ಮರ್ ನೀಡಲು ಲೈನ್ ಮೆನ್ ಸಂಜೀವ್ ಲಂಚ ಸ್ವೀಕರಿಸುತ್ತಿದ್ದ. ರೈತನ ಹೆಸರನ್ನು ಎಸಿಬಿ ಅಧಿಕಾರಿಗಳು ಗುಪ್ತವಾಗಿಟ್ಟಿದ್ದಾರೆ. ಎಸಿಬಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:36 pm, Tue, 28 June 22