POCSO Case: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ 9 ದಿನಗಳ ನ್ಯಾಯಾಂಗ ಬಂಧನ
ಪೋಕ್ಸೋ ಕೇಸ್ನಲ್ಲಿ ಮರುಘಾ ಶ್ರೀಗಳ ಬಂಧನ ವಿಚಾರ ಹಿನ್ನೆಲೆ ಸೆಪ್ಟೆಂಬರ್ 14ರವರೆಗೆ ಸ್ವಾಮೀಜಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚಿತ್ರದುರ್ಗ: ಪೋಕ್ಸೋ ಕೇಸ್ನಲ್ಲಿ ಮರುಘಾ ಶ್ರೀಗಳ ಬಂಧನ ವಿಚಾರ ಹಿನ್ನೆಲೆ ಸೆಪ್ಟೆಂಬರ್ 14ರವರೆಗೆ ಸ್ವಾಮೀಜಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಿತ್ರದುರ್ಗದ ಎರಡನೇ ಅಪರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲ ಅವರು ಆದೇಶ ನೀಡಲಾಗಿದೆ. 9 ದಿನಗಳ ಕಾಲ ಮುರುಘಾ ಶ್ರೀಗಳಿಗೆ ಜೈಲು ಗತಿ ಎನ್ನಲಾಗುತ್ತಿದೆ. ತನಿಖಾಧಿಕಾರಿ ಪೊಲೀಸ್ ಕಸ್ಟಡಿಗೆ ಕೇಳಿಲ್ಲ. ಇನ್ವೆಸ್ಟಿಗೇಷನ್ ಎಲ್ಲಾ ಮುಗಿಯಿತಾ ಅಂತಾ ಎಂದು ನ್ಯಾಯಾಧೀಶರು ತನಿಖಾಧಿಕಾರಿಯನ್ನು ಪ್ರಶ್ನಿಸಿದರು. ಮತ್ತೆ ಪೊಲೀಸ್ ಕಸ್ಟಡಿಗೆ ಕೇಳದ ಹಿನ್ನೆಲೆ ನ್ಯಾ.ಕೋಮಲಾ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಕೆಲವೇ ಹೊತ್ತಿನಲ್ಲಿ ಮುರುಘಾ ಶ್ರೀಗಳು ಜೈಲಿಗೆ ಸ್ಥಳಾಂತರ ಮಾಡಲಿದ್ದು, ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಬಳಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಜೈಲು ಮುಂಭಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ಸ್ಥಳೀಯ ಪೊಲೀಸರು ಸೇರಿದಂತೆ KSRP ತುಕಡಿ ನಿಯೋಜನೆ ಮಾಡಲಾಗಿದೆ.
2ನೇ ಆರೋಪಿಯನ್ನು ವಶಕ್ಕೆ ನೀಡುವಂತೆ ಪೊಲೀಸ್ ಮನವಿ:
ಮುರುಘಾಶ್ರೀ ಜಾಮೀನು ಅರ್ಜಿ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಸೆ.7 ಕ್ಕೆ ಮುಂದೂಡಲಾಗಿದೆ. ಇನ್ನೂ 2ನೇ ಆರೋಪಿ ರಶ್ಮಿಯನ್ನ ಪೊಲೀಸ್ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದೆ. 7 ದಿನಗಳ ಕಾಲ ವಶಕ್ಕೆ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಕೋರ್ಟ್ ಆದೇಶ ನೀಡಲಿದೆ.
ಅನುಭವ ಮಂಟಪದಿಂದ ಮರೆಯಾದ ಸಂಭ್ರಮ:
ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಬಂಧಿತರಾಗಿದ್ದರು ಸಹ, ಮುರುಘಾ ಮಠದಲ್ಲಿ ಸೋಮವಾರ ಪ್ರತಿ ತಿಂಗಳು ನಡೆಯುವಂತೆ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತದಲ್ಲಿ ದಾಂಪತ್ಯ ಜೀವನಕ್ಕೆ ಏಳು ಜೋಡಿಗಳು ಕಾಲಿಡಲಿದ್ದಾರೆ. ವಧು–ವರರು ಅನುಭವ ಮಂಟಪದ ವೇದಿಕೆಗೆ ಆಗಮಿಸುತ್ತಿದ್ದಾರೆ. ಏಳು ಜೋಡಿಗಳು ನೋಂದಣಿಯಾಗಿದ್ದರು ಸಹ ಕೊನೆಗೆ ಆರು ಜೋಡಿಗಳು ಮಾತ್ರ ವೇದಿಕೆ ಮೇಲೆ ಅಸೀನರಾಗಿದ್ದಾರೆ.
ಕುಟುಂಬಸ್ಥರು ಸಹ ಸಭಾಂಗಣದಲ್ಲಿ ನೆರೆದಿದ್ದಾರೆ. ಗುರುಮಠಕಲ್ ಶಾಖಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಉಪಸ್ಥಿತರಿದ್ದಾರೆ. ಮಠದಲ್ಲಿ 32 ವರ್ಷಗಳಿಂದ ಪ್ರತಿ ತಿಂಗಳ 5ರಂದು ಬಸವ ಕೇಂದ್ರ ಮುರುಘರಾಜೇಂದ್ರ ಬೃಹನ್ಮಠ, ಎಸ್ ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ನಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಗ್ರಹಣ, ಅಮಾವಾಸ್ಯೆ ಎದುರಾದ ದಿನವೂ ಸಾಮೂಹಿಕ ವಿವಾಹ ಸ್ಥಗಿತಗೊಂಡಿರಲಿಲ್ಲ. ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಸಾಮೂಹಿಕ ಕಲ್ಯಾಣ್ಯೋತ್ಸವಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Mon, 5 September 22