ಮಳೆ ಇಲ್ಲದಿದ್ದರೂ ಮೆಕ್ಕೆಜೋಳ, ಸೂರ್ಯಕಾಂತಿ ಬಂಪರ್ ಫಸಲು; ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರೈತ

ಕೃಷಿ ಮಳೆಯ ಜೊತೆಗಿನ ಜೂಜಾಟ ಅಂತಾರೆ. ಆದ್ರೆ ಇಲ್ಲೊಬ್ಬ ರೈತ ಮಳೆ ಕೈಕೊಟ್ರೂ ಸಾಂಪ್ರದಾಯಿಕ ಪದ್ಧತಿ ಮೂಲಕ ಖೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬರದ ನಾಡಲ್ಲೂ ಬಂಪರ್ ಬೆಳೆ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಮಳೆ ಇಲ್ಲದಿದ್ದರೂ ಮೆಕ್ಕೆಜೋಳ, ಸೂರ್ಯಕಾಂತಿ ಬಂಪರ್ ಫಸಲು; ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರೈತ
ರೈತ ಕೊಂಚೆ ಶಿವರುದ್ರಪ್ಪ ಬರದ ನಾಡಲ್ಲೂ ಬಂಪರ್ ಬೆಳೆ ಬೆಳೆದು ಸಾಹಸ ಮೆರೆದಿದ್ದಾರೆ
Updated By: ಆಯೇಷಾ ಬಾನು

Updated on: Sep 02, 2021 | 9:37 AM

ಚಿತ್ರದುರ್ಗ: ಜಿಲ್ಲೆಯ ಕೂನಬೇವು ಗ್ರಾಮ ರೈತ ಕೊಂಚೆ ಶಿವರುದ್ರಪ್ಪ ಬರದ ನಾಡಲ್ಲೂ ಬಂಪರ್ ಬೆಳೆ ಬೆಳೆದು ಸಾಹಸ ಮೆರೆದಿದ್ದಾರೆ. ಶಿವರುದ್ರಪ್ಪ ಅನೇಕ ಬಾರಿ ಕೃಷಿಯಲ್ಲಿ ಕೈಸುಟ್ಟುಕೊಂಡಿದ್ದರು. ಆದ್ರೆ, ಈ ಬಾರಿ ಸಾವಯವ ಕೃಷಿಯ ಮೊರೆ ಹೋಗಲು ತೀರ್ಮಾನಿಸಿದ್ರು. ಇದರ ಪರಿಣಾಮ ಪೆಪ್ಸಿ ಲಿಕ್ವಿಡ್, ಗೋಮೂತ್ರ ಮತ್ತು‌ ಬೇವಿನ ಎಣ್ಣೆ ಬಳಸಿ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆದಿದ್ದಾರೆ. ಪರಿಣಾಮ ಮಳೆ, ನೀರಿನ ಸಮಸ್ಯೆ ಆದರೂ ಬೆಳೆ ಕೈಕೊಟ್ಟಿಲ್ಲ. ಯಾವುದೇ ಕೀಟ ಬಾಧೆ‌ ಆವರಿಸಿಲ್ಲ. ಸದ್ಯ ಬಂಪರ್ ಬೆಳೆ‌ಬಂದಿದ್ದು ನಿರೀಕ್ಷೆಗೆ ಮೀರಿ ಎರಡು ಪಟ್ಟು‌ ಫಸಲು ಬಂದಿದೆ.

ರೈತನ ಈ ಯಶಸ್ವಿ ಸಾವಯವ ಪ್ರಯೋಗವನ್ನು ನೋಡಲು ದೂರದ ಊರುಗಳಿಂದ ರೈತರು‌ ಬರ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸುಮಾರು ಮೂವತ್ತು‌ ಎಕರೆ ಜಮೀನಿನಲ್ಲಿ ಹದಿನೈದು ಎಕರೆ ಮೆಕ್ಕೆಜೋಳ, ಹದಿನೈದು ಎಕರೆ ಸೂರ್ಯಕಾಂತಿ ಬೆಳೆ ಬೆಳೆಯಲಾಗಿದೆ. ಕೃಷಿ ಇಲಾಖೆ ಮಾರ್ಗದರ್ಶನ ಪಡೆದು ಉತ್ತಮ ನಿರ್ವಹಣೆ ಮಾಡಿದ ಕಾರಣ ಒಳ್ಳೆಯ ಫಸಲು ಬಂದಿದೆ. ಅನೇಕ ಕಡೆ ವಿವಿಧ ಕಾರಣಕ್ಕೆ ಬೆಳೆ ಹಾಳಾಗಿದ್ದರೂ ಶಿವರುದ್ರಪ್ಪ ಜಮೀನಿನಲ್ಲಿ ಮಾತ್ರ ಬೆಳೆಗಳು ನಳನಳಿಸ್ತಿವೆ. ಹೀಗಾಗಿ ರೈತರು ಕೃಷಿ ಅಧಿಕಾರಿಗಳು ಮಾದರಿ ರೈತರ ಮಾರ್ಗದರ್ಶನ ಪಡೆಯಬೇಕು ಅಂತಾರೆ ಕೃಷಿ ಇಲಾಖೆ ಅಧಿಕಾರಿ ಚಂದ್ರಕುಮಾರ್.

ಒಟ್ನಲ್ಲಿ ಕೋಟೆನಾಡು ಚಿತ್ರದುರ್ಗದ ಕೂನಬೇವು ಗ್ರಾಮದ‌ ರೈತ ಕೊಂಚೆ ಶಿವರುದ್ರಪ್ಪ ಸಾವಯವ ಪದ್ಧತಿ ಮೂಲಕ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಮಾದರಿ ಕೃಷಿ ಕಾಯಕದ ಮೂಲಕ ಬರದನಾಡಿನ ರೈತಾಪಿ ವರ್ಗದ ಗಮನ ಸೆಳೆದಿದ್ದಾರೆ.

ಮೆಕ್ಕೆಜೋಳ ಫಸಲು

ರೈತನ ಈ ಯಶಸ್ವಿ ಸಾವಯವ ಪ್ರಯೋಗವನ್ನು ನೋಡಲು ದೂರದ ಊರುಗಳಿಂದ ರೈತರು‌ ಬರ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ

ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ

ಇದನ್ನೂ ಓದಿ: ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ