ಅವನೊಬ್ಬ ಹುಚ್ಚ, ಹುಚ್ಚರ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಅನಂತ್ ಕುಮಾರ್ ಹೆಗಡೆ ವಿರುದ್ಧ ಹೆಚ್.ಆಂಜನೇಯ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಸಂಸದ ಅನಂತ್ ಕುಮಾರ ಹೆಗಡೆ ವಾಗ್ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಹೆಚ್.ಆಂಜನೇಯ ಕಿಡಿಕಾರಿದ್ದಾರೆ. ಅವನೊಬ್ಬ ಹುಚ್ಚ, ಹುಚ್ಚರ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಎಂದಿದ್ದಾರೆ.
ಚಿತ್ರದುರ್ಗ,ಜ.15: ಅನಂತ್ ಕುಮಾರ್ ಹೆಗಡೆ (Ananth Kumar Hegde) ಒಬ್ಬ ಹುಚ್ಚ, ಹುಚ್ಚರ ಬಗ್ಗೆ ಯಾರಾದ್ರೂ ಮಾತಾಡ್ತಾರಾ? ಅವನ ಬಗ್ಗೆ ಮಾತಾಡಲ್ಲ ಅಂತಾ ಮಾಜಿ ಸಚಿವ ಹೆಚ್. ಆಂಜನೇಯ (H Anjaneya) ಅವರು ಅನಂತಕುಮಾರ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವನ ಬಗ್ಗೆ ಮಾತಾಡಿ ದೊಡ್ಡವನನ್ನಾಗಿಸಿದಂತೆ ಆಗುತ್ತದೆ. ಅವನು ಬೆಳೆದ ಹಿನ್ನೆಲೆ ಸಂಸ್ಕೃತಿ ಅದೇ ರೀತಿ ಇರಬೇಕು. ಹೀಗಾಗಿ ಅವನು ಆ ರೀತಿ ವರ್ತನೆ ಮಾಡುತ್ತಾನೆ. ನಾವು ಆರೀತಿ ಅಲ್ಲ, ನಾನು ಸಹ ಏಕವಚನ ಬಳಸಬಾರದು ಅಂತಾ ಟಾಂಗ್ ಕೊಟಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಸಂಸದ ಅನಂತ್ ಕುಮಾರ ಹೆಗಡೆ ವಾಗ್ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಹೆಚ್.ಆಂಜನೇಯ ಕಿಡಿಕಾರಿದ್ದಾರೆ. ಅವನೊಬ್ಬ ಹುಚ್ಚ, ಹುಚ್ಚರ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಅನಂತ್ ಕುಮಾರ್ ಹೆಗಡೆ ಬೆಳೆದ ಹಿನ್ನೆಲೆ, ಸಂಸ್ಕೃತಿ ಅದೇ ಇರಬೇಕು. ಹೀಗಾಗಿ ಅವನು ಆ ರೀತಿ ವರ್ತನೆ ಮಾಡುತ್ತಾನೆ. ನಾವು ಆ ರೀತಿ ಅಲ್ಲ, ನಾನು ಸಹ ಏಕವಚನ ಬಳಸಬಾರದು. ಆದರೆ ಅವನಿಗೆ ಯಾವ ಭಾಷೆ ಬಳಸಿದರೂ ಸಹ ಸಾಲದು ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಸಿಎಂ, ಡಿಸಿಎಂ ಬೆಂಬಲಕ್ಕೆ ನಿಲ್ಲುವಂತೆ ಶಾಸಕರು, ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ
ನಮ್ಮ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಮರಾಜ್ಯದ ಕನಸು ಅನಾವರಣ ಮಾಡಿ ಕಾರ್ಯರೂಪಕ್ಕೆ ತಂದವರು. ಜನ ಮೆಚ್ಚಿದ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡುತ್ತಾನಲ್ಲಾ? ಅನಂತಕುಮಾರ್ ಹೆಗಡೆ ಮನುಷ್ಯನಾ ಎಂದು ಹೆಚ್.ಆಂಜನೇಯ ಕಿಡಿಕಾರಿದ್ದಾರೆ.
ಬಹಳಷ್ಟು ಜನ ಹಿಂದುಗಳಿರುವುದೇ ಕಾಂಗ್ರೆಸ್ ಪಕ್ಷದಲ್ಲಿ. ಕಾಂಗ್ರೆಸ್ನಲ್ಲೇ ಹಿಂದೂ, ರಾಮ ಪೂಜೆ ಮಾಡುವವರು ಹೆಚ್ಚಿರುವುದು. ಕೋಟ್ಯಾಂತರ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮನಿದ್ದಾನೆ. ರಾಮನ ಹೆಸರಿನಲ್ಲಿ ಮತಕ್ಕಾಗಿ ಮಾರ್ಕೆಟಿಂಗ್ ಮಾಡುವವರು ಕಾಂಗ್ರೆಸ್ಸಿಗರಲ್ಲ. ಆಂಜನೇಯನ ಹೃದಯದಲ್ಲಿ ರಾಮನಿದ್ದಂತೆ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮನಿದ್ದಾನೆ. ಕಾಂಗ್ರೆಸ್ಸಿಗರು ರಾಮನ ವಿರೋಧಿ ಅಲ್ಲ, ಹಿಂದೂಗಳ ವಿರೋಧಿಯೂ ಅಲ್ಲ. ನಾವು ಹಿಂದೂಗಳ ಪರ, ಮುಸ್ಲಿಂ ಪರ, ಎಲ್ಲಾ ಧರ್ಮಗಳ ಜನರ ಪರವಿದ್ದೇವೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ