ದುರ್ಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಐತಿಹಾಸಿಕ ಬಾವಿ, ಪುಷ್ಕರಣಿಗಳು ಅವಸಾನದ ಅಂಚಿಗೆ

| Updated By: ಸಾಧು ಶ್ರೀನಾಥ್​

Updated on: May 17, 2024 | 11:29 AM

ಹೌದು, ಐತಿಹಾಸಿಕ ಏಳುಸುತ್ತಿನ ಕೋಟೆ ಇರುವ ಚಿತ್ರದುರ್ಗದಲ್ಲಿ ಅನೇಕ ಐತಿಹಾಸಿಕ ಜಲಮೂಲಗಳಿವೆ. ಆದರೆ ಅವೆಲ್ಲ ಅವನತಿಯ ಅಂಚಿಗೆ ತಲುಪಿವೆ. ಭೀಕರ ಬರಗಾಲದಿಂದಾಗಿ ಬರಿದಾಗಿರುವ ಹೊಂಡ, ಪುಷ್ಕರಣಿಗಳು. ಇತಿಹಾಸ ಪ್ರಸಿದ್ಧ ಜಲಮೂಲಗಳ ಸಂರಕ್ಷಣೆಗೆ ಜನರ ಆಗ್ರಹ. ಆದರೆ ಅಧಿಕಾರಿಗಳದ್ದು ಮಾತ್ರ ದಿವ್ಯ ನಿರ್ಲಕ್ಷ್ಯ.

ದುರ್ಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಐತಿಹಾಸಿಕ ಬಾವಿ, ಪುಷ್ಕರಣಿಗಳು ಅವಸಾನದ ಅಂಚಿಗೆ
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೊಂಡ, ಬಾವಿ, ಪುಷ್ಕರಣಿಗಳು ಅವಸಾನದ ಅಂಚಿಗೆ
Follow us on

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಇದೇ ವೇಳೆ ಐತಿಹಾಸಿಕ ಜಲಮೂಲಗಳು ಸಹ ಬರಿದಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೊಂಡ, ಬಾವಿ, ಪುಷ್ಕರಣಿಗಳು ಅವಸಾನದ ಅಂಚಿಗೆ ತಲುಪಿವೆ. ಈ ಕುರಿತು ವರದಿ ಇಲ್ಲಿದೆ. ಅವನತಿಯ ಅಂಚಿಗೆ ತಲುಪಿರುವ ಐತಿಹಾಸಿಕ ಜಲಮೂಲಗಳು (water bodies). ಭೀಕರ ಬರಗಾಲದಿಂದಾಗಿ ಬರಿದಾಗಿರುವ ಹೊಂಡ, ಪುಷ್ಕರಣಿಗಳು. ಇತಿಹಾಸ ಪ್ರಸಿದ್ಧ ಜಲಮೂಲಗಳ ಸಂರಕ್ಷಣೆಗೆ ಜನರ ಆಗ್ರಹ. ಹೌದು, ಐತಿಹಾಸಿಕ ಏಳುಸುತ್ತಿನ ಕೋಟೆ ಇರುವ ಚಿತ್ರದುರ್ಗದಲ್ಲಿ (chitradurga) ಅನೇಕ ಐತಿಹಾಸಿಕ ಜಲಮೂಲಗಳಿವೆ. ಸಂತೆಹೊಂಡ, ಕೆಂಚಮಲ್ಲಪ್ಪನ ಬಾವಿ, ಚನ್ನಕೇಶವ ಬಾವಿ ಸೇರಿದಂತೆ ಅನೇಕ ಇತಿಹಾಸ ಪ್ರಸಿದ್ಧ ಜಲಮೂಲಗಳಿವೆ. ಇಡೀ ನಗರ ಪ್ರದೇಶದ ಜನರಿಗೆ ನೀರು ಪೂರೈಸುತ್ತಿದ್ದ ಐತಿಹಾಸಿಕ ಹೊಂಡ, ಬಾವಿ, ಪುಷ್ಕರಣಿಗಳು ಅಧಿಕಾರಿಗಳ ನಿರ್ಲಕ್ಷದಿಂದಾಗಿ (negligence of authorities) ಅವಸಾನದ ಅಂಚಿಗೆ ತಲುಪಿವೆ. ರಣ ಭೀಕರ ಬರಗಾಲದ ಪರಿಣಾಮ ಬಹುತೇಕ ಜಲಮೂಲಗಳು ಬರಿದಾಗಿವೆ.

ಇನ್ನು ಈ ವರ್ಷವಂತೂ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಪರಿಣಾಮ ಐತಿಹಾಸಿಕ ಪುಷ್ಕರಣಿಗಳು ಸಹ ಬರಿದಾಗಿವೆ. ಅಲ್ಲದೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಬಹುತೇಕ ಜಲಮೂಲಗಳು ಕಸದ ತೊಟ್ಟಿಯಂತಾಗಿವೆ. ಹೀಗಾಗಿ, ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಐತಿಹಾಸಿಕ ಜಲಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂಬುದು ಇವ್ರ ಮನವಿ.

Also Read: ಈ ಬಾರಿಯೂ ವಿಮೆ ಕಂಪನಿಗಳಿಂದ ರೈತರಿಗೆ ಮೋಸ, ಕೃಷಿ ಇಲಾಖೆ ಶಾಮೀಲು: ರೈತನ ‘ಕೈ’ಹಿಡಿಯುವವರು ಯಾರು?

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಹತ್ತಾರು ಐತಿಹಾಸಿಕ ಜಲಪಾತ್ರೆಗಳಿವೆ. ಆದ್ರೆ, ರಣ ಭೀಕರ ಬರಗಾಲದ ಪರಿಣಾಮ ಬಹುತೇಕ ಹೊಂಡ, ಬಾವಿ, ಪುಷ್ಕರಣಿಗಳು ಬರಿದಾಗಿವೆ. ಮತ್ತೊಂದು ಕಡೆ ನಗರಸಭೆ, ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಅವನತಿಯ ಅಂಚಿಗೆ ತಲುಪಿವೆ. ಹೀಗಾಗಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಸಂರಕ್ಷಣಾ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ