Holige Habba: ಕೊರೊನಾ ತೊಲಗಲಿ ಎಂದು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ ಆಚರಣೆ, ಮನೆ ಮನೆಗಳಲ್ಲಿ ಹೋಳಿಗೆ ಘಮ

ಹಬ್ಬ ಹರಿದಿನಗಳಲ್ಲಿ ಹೋಳಿಗೆ ಮಾಡುವ ಸಂಪ್ರದಾಯ ನಾಡಿನಲ್ಲಿದೆ. ಕೆಲವೆಡೆ ದೇವರಿಗೆ ನೈವೇದ್ಯ ಅರ್ಪಿಸುವ ಆಚರಣೆಯೂ ಇದೆ. ಆದ್ರೆ, ಚಿತ್ರದುರ್ಗದಲ್ಲಿ ಮಾತ್ರ ವಿಶೇಷವಾದ ಹೋಳಿಗೆ ಹಬ್ಬ ಆಚರಿಸಲಾಗುತ್ತೆ. ಏನಿದು ಹೋಳಿಗೆ ಹಬ್ಬ ಅಂತಾ ಇಲ್ಲಿ ನೋಡಿ.

Holige Habba: ಕೊರೊನಾ ತೊಲಗಲಿ ಎಂದು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ ಆಚರಣೆ, ಮನೆ ಮನೆಗಳಲ್ಲಿ ಹೋಳಿಗೆ ಘಮ
ಕೊರೊನಾ ತೊಲಗಲಿ ಎಂದು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ ಆಚರಣೆ
Edited By:

Updated on: Aug 06, 2021 | 6:46 AM

ಚಿತ್ರದುರ್ಗ: ಜಿಲ್ಲೆಯ ಕರುವಿನಕಟ್ಟೆ ವೃತ್ತದ ತಿಪ್ಪಿನಘಟ್ಟಮ್ಮ ದೇಗುಲದಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ವಿಶೇಷ ಉತ್ಸವ ನಡೆಯುತ್ತೆ. ದೇವಿಗೆ ಭಕ್ತರು ಹೋಳಿಗೆ ತಯಾರಿಸಿ ಮೊರದಲ್ಲಿ ಹೋಳಿಗೆ, ಹೂವು, ಮಡಿಕೆ, ಹಣ್ಣು, ಬೇವಿನ ಸೊಪ್ಪು ತಂದು ದೇವಿಗೆ ಅರ್ಪಿಸ್ತಾರೆ. ಈ ಮೂಲಕ ಸಾಂಕ್ರಾಮಿಕ ರೋಗಳು ಬಾರದಿರಲಿ. ನಾಡಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ ಆಗಲಿ ಅಂತಾ ಪ್ರಾರ್ಥಿಸುತ್ತಾರೆ. ಈ ಆಚರಣೆಯಿಂದ ಸಾಂಕ್ರಾಮಿಕ ರೋಗಗಳು ದೂರಾಗಿ ಶಾಂತಿ‌ ನೆಲೆಸುತ್ತದೆ ಅನ್ನೋದು ಜನರ ನಂಬಿಕೆ. ವಿಶ್ವದ ಜನರನ್ನ ಕಾಡ್ತಿರೋ ಕೊರೊನಾ ತೊಲಗಲಿ ಅಂತಾ ಈ ಸಲ ವಿಶೇಷವಾಗಿ ಹೋಳಿಗೆ ಹಬ್ಬ ಆಚರಿಸಿದ್ದೇವೆ ಅಂತಾರೆ ಭಕ್ತರಾದ ಪುಷ್ಪಲತಾ.

ಪ್ರತಿ ವರ್ಷ ನಡೆಯೋ ಉತ್ಸವದ ದಿನದ ಸಂಜೆ ತಿಪ್ಪಿನಘಟಮ್ಮ ಮೂರ್ತಿ ಹೋಳಿಗೆ ರಾಶಿಗೆ ಮೂರು ಸುತ್ತು ಹಾಕಲಾಗುತ್ತದೆ. ಈ ಮೂಲಕ‌ ಪ್ಲೇಗ್, ಅಮ್ಮ, ದಡಾರ ಸೇರಿ ಇತರ ಸಾಂಕ್ರಾಮಿಕ ರೋಗಗಳು ಬರದಿರಲಿ ಎಂಬ ನಂಬಿಕೆ. ಅಲ್ಲದೆ ಪ್ರಾಣಿ ಸಂಕುಲಕ್ಕೆ ಯಾವುದೇ ಕಂಟಕ ಆಗದಿರಲಿ ಅಂತಾ ಈ ಆಚರಣೆ ಮಾಡಲಾಗುತ್ತದೆ. ಈ ಸಲ ಕೊರೊನಾ ತೊಲಗಲಿ ಅಂತಾ ವಿಶೇಷ ಪೂಜೆ‌ ಸಲ್ಲಿಸಲಾಗಿದೆ ಅಂತಾ ಅರ್ಚಕ ಲಿಂಗರಾಜು ಹೇಳಿದ್ರು.

ಕೋಟೆನಾಡು ಚಿತ್ರದುರ್ಗದಲ್ಲಿ ತಿಪ್ಪಿನಘಟ್ಟಮ್ಮನ ವಿಶೇಷ ಹೋಳಿಗೆ ಉತ್ಸವ ನಡೆದಿದೆ. ಕೊರೊನಾ 3ನೇ ಅಲೆ ಭೀತಿ‌ ನಡುವೆ ಸಾಂಕ್ರಾಮಿಕ ರೋಗಗಳು‌ ಮತ್ತು ಕೊರೊನಾ ತೊಲಗಲಿ ಅಂತಾ ಜನ ಪೂಜಿಸಿದ್ದಾರೆ. ಹೀಗಾಗಿ ತಿಪ್ಪಿನಘಟ್ಟಮ್ಮನಾದ್ರೂ ಕೊರೊನಾದಿಂದ ಕಾಪಾಡ್ತಾಳಾ ಅಂತಾ ಕಾದು ನೋಡಬೇಕಿದೆ.

ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ ಆಚರಣೆ

ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ ಆಚರಣೆ

ಇದನ್ನೂ ಓದಿ: Som Pradosh Vrat 2021; ಇಂದು ಸೋಮ ಪ್ರದೋಷ ದಿನ ಶಿವನನ್ನು ಆರಾಧಿಸುವುದರಿಂದ ಶಿವ ನಿಮ್ಮೆಲ್ಲ ಆಸೆಗಳನ್ನು ಈಡೇರಿಸುತ್ತಾನೆ